ಸಿಲ್ಕ್ ಸ್ಮಿತಾ ಸಾವಿಗೂ ಮುನ್ನ ಚಿರಂಜೀವಿ, ಬಾಲಯ್ಯ, ರಜನಿಕಾಂತ್ ಬಿಟ್ಟು ರವಿಚಂದ್ರನ್‌ಗೆ ಫೋನ್ ಮಾಡಿದ್ದೇಕೆ?

Published : Mar 16, 2025, 04:18 PM ISTUpdated : Mar 16, 2025, 09:07 PM IST

ದಕ್ಷಿಣ ಭಾರತದ ಖ್ಯಾತ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡು ವಿರಾಜಮಾನವಾಗಿ ಮೆರೆಯುತ್ತಿದ್ದ ನಟಿ ಸಿಲ್ಕ್ ಸ್ಮಿತಾ ಸಾವಿನ ಹಿಂದಿನ ದಿನ ತೆಲುಗು, ತಮಿಳು ಚಿತ್ರರಂಗದ ಯಾರೊಬ್ಬರಿಗೂ ಕರೆ ಮಾಡದೇ ಕನ್ನಡಿಗ ರವಿಚಂದ್ರನ್‌ಗೆ  ಫೋನ್ ಮಾಡಿದ್ದಾರೆ. ಈ ಬಗ್ಗೆ ಸ್ವತಃ ರವಿಮಾಮ ರಹಸ್ಯ ರಿವೀಲ್ ಮಾಡಿದ್ದಾರೆ..

PREV
18
ಸಿಲ್ಕ್ ಸ್ಮಿತಾ ಸಾವಿಗೂ ಮುನ್ನ ಚಿರಂಜೀವಿ, ಬಾಲಯ್ಯ, ರಜನಿಕಾಂತ್ ಬಿಟ್ಟು ರವಿಚಂದ್ರನ್‌ಗೆ ಫೋನ್ ಮಾಡಿದ್ದೇಕೆ?

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿ, ಸಿನಿಮಾದಲ್ಲಿ ಬಟ್ಟೆಯಿಲ್ಲದೆಯೂ ಮಿಂಚಬಹುದು ಎಂಬುದನ್ನು ತಿಳಿಸಿಕೊಟ್ಟ ನಟಿ ಸಿಲ್ಕ್ ಸ್ಮಿತಾ ಆಗಿದ್ದಾರೆ. ಈಕೆ ದಕ್ಷಿಣ ಭಾರತದ ತೆಲುಗು, ತಮಿಳು, ಕನ್ನಡ, ಮಲೆಯಾಳಂ ಚಿತ್ರರಂಗದ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಈ ನಟಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಜೀವನ ಕೊನೆಗೊಳಿಸಿದ್ದೇಕೆ ಎಂಬ ಪ್ರಶ್ನೆ ಚಿತ್ರರಂಗದಲ್ಲಿ ಹಾಗೆಯೇ ಉಳಿದುಕೊಂಡಿವೆ..

28

ಸಿಲ್ಕ್ ಸ್ಮಿತಾ ಆರಂಭದಲ್ಲಿ ಊಟಕ್ಕೂ ಗತಿಯಿಲ್ಲದೆ ಪರದಾಡುವಾಗ ಹಂಗಿಸಿದ ನಟರ ಮುಂದೆ ಕಾಲಿನ ಮೇಲೆ ಕಾಲು ಹಾಕಿ ಕುಳಿತು ಗತ್ತು ತೋರಿಸಿದ್ದಾಳೆ. ಸ್ಟಾರ್ ನಟರು ಕೂಡ ಈಕೆಯ ಶೂಟಿಂಗ್ ಡೇಟ್‌ಗಾಗಿ ಕಾಯುತ್ತಿದ್ದರು. ಸಿಲ್ಕ್ ಸ್ಮಿತಾಳ ಒಂದೊಂದು ಐಟಂ ಸಾಂಗ್‌ನಿಂದಾಗಿಯೇ ಕೆಲವು ಸಿನಿಮಾಗಳು ಹಿಟ್ ಆಗಿವೆ ಎಂದರೂ ತಪ್ಪಾಗುವುದಿಲ್ಲ.

ಇದರಿಂದಾಗಿಯೇ ಬಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರು ಅವರ ಜೀವನ ಚರಿತ್ರೆಯನ್ನು 'ದಿ ಡರ್ಟಿ ಪಿಕ್ಚರ್' ಎಂದು ಹೆಸರಿಟ್ಟು ಒಂದು ಸಿನಿಮಾ ಮಾಡಿದ್ದಾರೆ. ಇದರಲ್ಲಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೂ ಕೂಡ ಹಲವು ವಿವಾದಗಳನ್ನು ಎಬ್ಬಿಸುವ ಲಕ್ಷಣಗಳು ಕಂಡುಬಂದರೂ ಬಾಲಿವುಡ್ ಅಂಗಳ ತುಂಬಾ ಬಲಿಷ್ಠವಾಗಿದ್ದರಿಂದ ಸಿಲ್ಕ್‌ ಸ್ಮಿತಾಗೆ ಮೋಸ ಮಾಡಿದ್ದಾರೆಂದು ತೋರಿಸಿದ ಕೈಗಳೆಲ್ಲವೂ ಸುಮ್ಮನಾದವು.

38

ಸಿಲ್ಕ್ ಸ್ಮಿತಾ ತನ್ನ ಆಕರ್ಷಕ ನಟನೆ, ಕಣ್ಣೋಟ ಹಾಗೂ ಮೈಮಾಟದಿಂದ ಅನೇಕ ಹುಡುಗರಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿದ್ದಾಳೆ. ಮೊಬೈಲ್ ಹಾಗೂ ಇಂಟರ್‌ನೆಟ್ ಇಲ್ಲದ ಜಗತ್ತಿನ ಪಾಲಿಗೆ ಹೆಣ್ಣಿನ ಯೌವ್ವನದ ಸೌಂದರ್ಯ ಹೇಗಿರುತ್ತದೆ ಎಂಬುದನ್ನು ತೋರಿಸಿದ ಧೀರೆ ಆಗಿದ್ದಾಳೆ. ಆದರೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಇನ್ನೂ ಬಹಿರಂಗವಾಗಿಲ್ಲ. ಕೆಲವರು ಜೊತೆಗಿದ್ದವರೇ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಪ್ರತ್ಯಕ್ಷ ಸಾಕ್ಷಿಗಳು ಮಾತ್ರ ಯಾರೂ ಒದಗಿಸಲು ತಯಾರಿಲ್ಲ.

48

ಆದರೆ, ಸಿಲ್ಕ್ ಸ್ಮಿತಾ ತಾನು ಸಾಯುವ ಕೊನೆಯ ದಿನಕ್ಕೂ ಮುಂಚಿತವಾಗಿ ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದ ಯಾರೊಬ್ಬರಿಗೂ ಕರೆ ಮಾಡದೇ ಕನ್ನಡ ಚಿತ್ರರಂಗದ ಸ್ಟಾರ್ ನಟನೊಂದಿಗೆ ಮಾತನಾಡುವುದಕ್ಕೆ ಫೋನ್ ಮಾಡಿದ್ದರು. ಅವರು ಬೇರಾರೂ ಅಲ್ಲ ನಮ್ಮ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್. ಈ ಸತ್ಯವನ್ನು ಸ್ವತಃ ರವಿಚಂದ್ರನ್ ಅವರೇ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.

58

1992ರಲ್ಲಿ ಕನ್ನಡದಲ್ಲಿ ಅತ್ಯಂತ ಹಿಟ್ ಆದ ಸಿನಿಮಾಗಳಲ್ಲಿ ಒಂದಾದ ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಅವರು ನಟ ರವಿಚಂದ್ರನ್ ಅವರೊಂದಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ಸ್ಮಿತಾಳೊಂದಿಗೆ ಒಂದು ಐಟಂ ಸಾಂಗ್ ಇದ್ದರೂ ಆಕೆಗೆ ಗೌರವಕ್ಕೆ ಧಕ್ಕೆ ಬಾರದಂತಹ ಪಾತ್ರವನ್ನು ನೀಡಲಾಗಿತ್ತು. ಈ ಸಿನಿಮಾದಿಂದ ರವಿಚಂದ್ರನ್ ಹಾಗೂ ಸ್ಮಿತಾ ಅವರ ನಡುವೆ ಸ್ನೇಹ ಬೆಳೆದಿತ್ತು. ಸಿನಿಮಾ ಹೊರತಾಗಿಯೂ ರವಿಚಂದ್ರನ್ ಹಾಗೂ ಸ್ಮಿತಾ ಅವರು ಆಗಾಗ್ಗೆ ಭೇಟಿಯಾಗುತ್ತಿದ್ದರು. ಫೋನ್‌ನಲ್ಲಿಯೂ ಸಂಪರ್ಕದಲ್ಲಿದ್ದರು.

68

ಸ್ಮಿತಾ ಸಾವಿನ ಕ್ಷಣದ ಬಗ್ಗೆ ಮಾತನಾಡಿದ ರವಿಚಂದ್ರನ್, ಸ್ಮಿತಾ ನಾನು ಸ್ನೇಹಿತರು. ಆಗಾಗ್ಗೆ ನಾವು ಫೋನ್ ಮಾಡಿ ಮಾತನಾಡುತ್ತಿದ್ದೆವು. ಆದರೆ, ಆಕೆಯ ಸಾವಿನ ಹಿಂದಿನ ದಿನವೂ ನನಗೆ ಕರೆ ಮಾಡಿದ್ದಳು. ನಾನು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದ ಕಾರಣ ಆಕೆಯೊಂದಿಗೆ ಮಾತನಾಡಲಾಗಲಿಲ್ಲ. ಸಾಮಾನ್ಯವಾಗಿ ಮಾತನಾಡಲು ಕರೆ ಮಾಡಿರಬೇಕು ಎಂದು ಬಿಡುವಾದಾಗ ಒಂದೆರೆಡು ದಿನ ಬಿಟ್ಟು ಕರೆ ಮಾಡೋಣ ಎಂದುಕೊಂಡಿದ್ದೆ. ಆದರೆ, ಮರುದಿನ ಅವಳ ಸಾವಿನ ಸುದ್ದಿ ತಿಳಿಯಿತು.

78

ನಾನು ಸ್ಮಿತಾ ಕರೆ ಮಾಡಿದ್ದನ್ನು ಸ್ವೀಕರಿಸಿ ಮಾತನಾಡಿದ್ದರೆ ಆಕೆ ಖಿನ್ನತೆಗೆ ಒಳಗಾಗಿದ್ದನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದಳೇನೋ.. ಒಂದು ವೇಳೆ ನಾನು ಮಾತನಾಡಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಆಕೆಯನ್ನು ಸಾವಿನ ದವಡೆಯಿಂದ ಪಾರು ಮಾಡಬಹುದಿತ್ತು ಎಂದು ಆಮೇಲೆ ಪಶ್ಚಾತ್ತಾಪ ಉಂಟಾಯಿತು ಎಂದು ನಟ ರವಿಚಂದ್ರನ್ ಹೇಳಿಕೊಂಡಿದ್ದರು

88

ಇನ್ನು ನಟಿ ಸ್ಕಿಲ್ ಸ್ಮಿತಾ  ಅವರು 1996ರ ಸೆಪ್ಟೆಂಬರ್ 23ರಂದು ತಮ್ಮ ಮನೆಯಲ್ಲಿ ಸ್ವಯಂ ಸಾವಿಗೆ ಶರಣಾದರು. ಅವರ ಸಾವು ಇಡೀ ಭಾರತದ ಚಿತ್ರರಂಗವನ್ನೇ ದಿಗ್ಭ್ರಮೆಗೊಳಿಸಿತು. ಸ್ಮಿತಾ ಅವರ ಸಾವಿನೊಂದಿಗೆ, ಅವರು ಇಟ್ಟುಕೊಂಡಿದ್ದ ಹಲವು ಬ್ಯುಸಿನೆಸ್‌ಗಳ ರಹಸ್ಯ ಅಂಶಗಳು ಕೂಡ ಬೆಳಕಿಗೆ ಬಂದಿವೆ.

Read more Photos on
click me!

Recommended Stories