ಸೌಂದರ್ಯ ಅವರ ಗಂಡ ಏನು ಹೇಳಿದರು?: ಸೌಂದರ್ಯ ಅವರ ಮರಣದ ಹಿಂದೆ ನಟ ಮೋಹನ್ ಬಾಬು ಅವರ ಕೈವಾಡವಿದೆ ಎಂಬ ಆರೋಪಗಳಿಗೆ ಆಕೆಯ ಗಂಡ ರಘು ಪ್ರತಿಕ್ರಿಯಿಸಿದ್ದಾರೆ. ಮೋಹನ್‌ಬಾಬು ಜೊತೆ ನಮಗೆ ಯಾವುದೇ ಆಸ್ತಿ ತಕರಾರುಗಳಿಲ್ಲ, ಸೌಂದರ್ಯ ಅವರ ಮರಣ ಆಕಸ್ಮಿಕವಾಗಿ ಸಂಭವಿಸಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಸೌಂದರ್ಯ ಅವರ ಗಂಡ ರಘು ಬಹಿರಂಗ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ‘‘ಹೈದರಾಬಾದ್‌ನಲ್ಲಿರುವ ಸೌಂದರ್ಯ ಅವರ ಆಸ್ತಿಗೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ತಪ್ಪು ಪ್ರಚಾರ ನಡೆಯುತ್ತಿದೆ. ಆಕೆಯ ಆಸ್ತಿಯನ್ನು ನಟ ಮೋಹನ್‌ಬಾಬು ಆಕ್ರಮಿಸಿಕೊಂಡಿದ್ದಾರೆ ಎಂಬ ಪ್ರಚಾರವನ್ನು ನಾನು ಖಂಡಿಸುತ್ತೇನೆ. ಅವರೊಂದಿಗೆ ಸೌಂದರ್ಯ ಯಾವುದೇ ಭೂ ವ್ಯವಹಾರಗಳನ್ನು ಮಾಡಿಲ್ಲ. ಅವರ ಕುಟುಂಬದೊಂದಿಗೆ ನಮಗೆ 25 ವರ್ಷಗಳಿಂದ ಉತ್ತಮ ಸಂಬಂಧವಿದೆ. ನಾನು ಮೋಹನ್‌ಬಾಬು ಅವರನ್ನು ತುಂಬಾ ಗೌರವಿಸುತ್ತೇನೆ. ನಾವೆಲ್ಲರೂ ಒಂದೇ ಕುಟುಂಬದಂತೆ ಇರುತ್ತೇವೆ. ನಮಗೆ ಯಾವುದೇ ಆಸ್ತಿ ತಕರಾರುಗಳಿಲ್ಲ' ಎಂದು ಉಲ್ಲೇಖಿಸಿದ್ದಾರೆ.