ಸಿನಿಮಾ ಶೂಟಿಂಗ್ ಮಧ್ಯದಲ್ಲೇ ನಿರ್ದೇಶಕ ಗುಣಶೇಖರ್‌ಗೆ ಏನೋ ಸರಿ ಇಲ್ಲ ಎಂದು ಅನಿಸಿತ್ತು. ನಾವು ತೋರಿಸುತ್ತಿರುವುದು ಒಂದು, ಪ್ರೇಕ್ಷಕರಿಗೆ ತಲುಪುತ್ತಿರುವುದು ಇನ್ನೊಂದು. ಇದು ಎಲ್ಲಿಗೋ ಹೋಗುತ್ತದೆ ಎಂದು ಅನಿಸಿತ್ತಂತೆ. ಆದರೆ, ಅಲ್ಲು ಅರ್ಜುನ್ ಮಾತ್ರ ಸೆಕೆಂಡ್ ಆಫ್ ಚೆನ್ನಾಗಿ ವರ್ಕೌಟ್ ಆಗುತ್ತದೆ ಎಂದುಕೊಂಡಿದ್ದರು. ಆದರೆ, ಅವರ ನಂಬಿಕೆ ಉಲ್ಟಾ ಆಯಿತು. 2010 ಮಾರ್ಚ್ 31 ರಂದು ಬಿಡುಗಡೆಯಾದ ಈ ಸಿನಿಮಾ ಹೀನಾಯವಾಗಿ ಸೋತಿತು.