ವ್ಯಾಲೆಂಟೈನ್ಸ್ ಡೇ ಎನರ್ಜಿ ಎಂದು ಕೆಂಪು ಗೌನ್‌ ಧರಿಸಿದ ಜಾನ್ವಿ; ನೀನೇ ಒಂದು ಗುಲಾಬಿ ಎಂದ್ರು ಫ್ಯಾನ್ಸ್

Published : Feb 08, 2024, 03:46 PM IST

ಶ್ರೀದೇವಿ ಮಗಳು ಜಾಹ್ನವಿ ಕಪೂರ್ ದಿನದಿನಕ್ಕೂ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಲೇ ಇದ್ದಾಳೆ. ತನ್ನ ಅಗಾಧ ಸೌಂದರ್ಯ ರಾಶಿಯನ್ನು ಆಗಾಗ ವಿವಿಧ ಬಟ್ಟೆಗಳಲ್ಲಿ ಪ್ರದರ್ಶಿಸಿ ಪಡ್ಡೆಗಳ ನಿದ್ದೆಗೆಡಿಸುತ್ತಿದ್ದಾಳೆ. ಇದೀಗ ವ್ಯಾಲೆಂಟೈನ್ಸ್‌ ಡೇ ಹಿನ್ನೆಲೆಯಲ್ಲಿ ಜಾಹ್ನವಿ ಧರಿಸಿದ ಕೆಂಪು ಬಟ್ಟೆಯಲ್ಲಿ ಕಾಶ್ಮೀರಿ ಆ್ಯಪಲ್ ತರಾ ಕಾಣ್ತಿದಾಳೆ ಅಂತಿದಾರೆ ಫ್ಯಾನ್ಸ್.

PREV
18
ವ್ಯಾಲೆಂಟೈನ್ಸ್ ಡೇ ಎನರ್ಜಿ ಎಂದು ಕೆಂಪು ಗೌನ್‌ ಧರಿಸಿದ ಜಾನ್ವಿ; ನೀನೇ ಒಂದು ಗುಲಾಬಿ ಎಂದ್ರು ಫ್ಯಾನ್ಸ್

ಸದ್ಯ ವ್ಯಾಲೆಂಟೈನ್ಸ್ ವೀಕ್ ನಡೆಯುತ್ತಿದ್ದು, ಕೆಂಪು ಗೌನ್ ತೊಟ್ಟು ಈ ಪ್ರೇಮಿಗ ಸಮಯದ ಬಿಸಿ ಏರಿಸಿದ್ದಾರೆ ನಟಿ ಜಾಹ್ನವಿ ಕಪೂರ್.

28

ರೊಮ್ಯಾಂಟಿಕ್ ಆಫ್-ಶೋಲ್ಡರ್, ನೆಲದುದ್ದದ ಕೆಂಪು ಸ್ಯಾಟಿನ್ ಮತ್ತು ಲೇಸ್ ಗೌನ್‌ನಲ್ಲಿ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವ ಚಿತ್ರವನ್ನು Instagram ಗೆ ಹಂಚಿಕೊಂಡಿದ್ದಾರೆ ಜಾಹ್ನವಿ.
 

38

ಈ ಸಮಯದಲ್ಲಿ ಜಾಹ್ನವಿಯ ರೆಡ್ ವೆಲ್ವೆಟ್ ಕೇಕ್‌ನಂಥಾ ಡ್ರೆಸ್, ಮಾದಕ ನೋಟ, ಹಾಟ್‌ನೆಸ್ ಎಲ್ಲವೂ ಸೇರಿ ವ್ಯಾಲೆಂಟೈನ್ಸ್ ವೀಕನ್ನು ಹೆಚ್ಚು ರೊಮ್ಯಾಂಟಿಕ್ ಆಗಿಸಿದೆ.

48

ಜಾಹ್ನವಿಗೆ ಕೂಡಾ ಯಾವ ಸಂದರ್ಭಕ್ಕೆ ಏನು ಧರಿಸಬೇಕು, ಏನು ಕ್ಯಾಪ್ಶನ್ ನೀಡಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಹಾಗಾಗಿ, ತಮ್ಮ ಈ ರೆಡ್ ಹಾಟ್  'ವಿ-ಡೇ ಎನರ್ಜಿ' ಎಂದು ಶೀರ್ಷಿಕೆ ನೀಡಿದ್ದಾರೆ. 

58

ಜಾಹ್ನವಿ ಕಪೂರ್ ಬೆಳ್ಳಿತೆರೆಯಲ್ಲಿ ಅಂಥಾ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲವಾದರೂ, ಗ್ಲಾಮರ್‌ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
68

ಆನ್ ಸ್ಕ್ರೀನ್‌ಗಿಂತ ಆಫ್‌ಸ್ಕ್ರೀನ್‌ನಲ್ಲಿ ಹೆಚ್ಚು ಸುಂದರವಾಗಿ ಕಾಣುವ ಜಾನ್ವಿ ಕಪೂರ್ ಸಿನಿ ಜಗತ್ತಿನ ಲೆಕ್ಕಾಚಾರಗಳನ್ನು ಒಂದೊಂದಾಗಿ ಚೆನ್ನಾಗಿ ಕಲಿಯುತ್ತಾ ಮುಂದೆ ಸಾಗುತ್ತಿದ್ದಾರೆ. 

 

78

ಜಾಹ್ನವಿಯ ಈ ಫೋಟೋಗಳನ್ನು ನೋಡಿದ ಫ್ಯಾನ್ಸ್, ಆಕೆಯನ್ನು ಕಾಶ್ಮೀರಿ ಆ್ಯಪಲ್, ಚೆರಿ ಹಣ್ಣು, ಕೆಂಪು ಗುಲಾಬಿ ಮುಂತಾದವುಗಳಿಗೆ ಹೋಲಿಸುತ್ತಿದ್ದಾರೆ.

88

ಅಂದ ಹಾಗೆ, ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿರುವ ನಿತೇಶ್ ತಿವಾರಿಯ ರಾಮಾಯಣ ಚಿತ್ರದಲ್ಲಿ ಸೀತೆಯಾಗಿ ನಟಿಸಬೇಕಿದ್ದ ಸಾಯಿ ಪಲ್ಲವಿ ಪಾತ್ರವನ್ನು ಜಾಹ್ನವಿ ಕಪೂರ್ ರಿಪ್ಲೇಸ್ ಮಾಡಲಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಲ್ಲದೆ ಜಾಹ್ನವಿ ಅಭಿನಯದ 'ಮಿ ಆ್ಯಂಡ್ ಮಿಸಸ್ ಮಾಹಿ' ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

 

Read more Photos on
click me!

Recommended Stories