ರಿತೇಶ್ ಜೆನಿಲಿಯಾ ಮಕ್ಕಳು ಪಾಪಾರಾಜಿ ಕಂಡರೆ ಕೈ ಮುಗಿಯುವುದೇಕೆ?

First Published | Jul 10, 2024, 4:01 PM IST

ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಅವರ ಮಕ್ಕಳು ಯಾವಾಗಲೂ ಪಾಪ್‌ಗಳ ಮುಂದೆ ಚೆನ್ನಾಗಿ ವರ್ತಿಸುತ್ತಾರೆ. ಪುಟಾಣಿಗಳು ಯಾವಾಗಲೂ ಕೈ ಜೋಡಿಸಿ ನಮಸ್ಕರಿಸುತ್ತಾರೆ.

ಬಾಲಿವುಡ್‌ನಲ್ಲಿ ಪಾಪಾರಾಜಿ ಸಂಸ್ಕೃತಿ ಜೋರು. ಎಲ್ಲ ನಟನಟಿಯರ ಮನೆ, ಕಚೇರಿ, ಜಿಮ್, ವಿಮಾನ ನಿಲ್ದಾಣ ಎಲ್ಲ ಕಡೆ ಸೆಲೆಬ್ರಿಟಿಗಳನ್ನು, ಅವರ ಹೆಂಡತಿ ಮಕ್ಕಳನ್ನು ಹಿಂಬಾಲಿಸಿ ಫೋಟೋ, ವಿಡಿಯೋ ತೆಗೆಯುತ್ತಾರೆ ಪಾಪಾರಾಜಿಗಳು. 

ಹೀಗೆ ಪಾಪಾರಾಜಿಗಳು ಕ್ಲಿಕ್ ಮಾಡುವಾಗ ಜನಪ್ರಿಯ ನಟ ನಟಿಯರು ಕೆಲವರು ಹಾಯ್ ಮಾಡುತ್ತಾರೆ, ಕೆಲವರೂ ಅದೂ ಇಲ್ಲ. ತಮಗಾಗುವ ಕಿರಿಕಿರಿ ತೋರಿಸಿಕೊಳ್ಳದೆ ಹೋಗುತ್ತಿರುತ್ತಾರೆ.

Tap to resize

ಆದರೆ, ನಟ ರಿತೇಶ್ ದೇಶ್‌ಮುಖ್ ಮತ್ತು ಪತ್ನಿ ಜೆನಿಲಿಯಾ ಡಿಸೋಜಾ ಮಾತ್ರ ಪಾಪಾರಾಜಿಗಳಿಗೆ ನಗುನಗುತ್ತಾ ಪೋಸ್ ಕೊಡುತ್ತಾರೆ. ಅಷ್ಟೇ, ಅಲ್ಲ ಅವರ ಇಬ್ಬರು ಮಕ್ಕಳು ಕೂಡಾ ಪಾಪಾರಾಜಿಗಳನ್ನು ನೋಡುತ್ತಿದ್ದಂತೆ ಕೈ ಎತ್ತಿ ಮುಗಿಯುತ್ತಾರೆ.

ಹೌದು, ಪ್ರತಿ ಬಾರಿ ಪಾಪ್‌ಗಳನ್ನು ನೋಡಿದಾಗಲೂ ರಿತೇಶ್ ಮಕ್ಕಳಾದ ರಿಯಾನ್, ಮತ್ತು ರಾಹಿಲ್ ಬಹಳ ಸಂಸ್ಕಾರವಂತರಾಗಿ ವರ್ತಿಸುತ್ತಾರೆ. 

ಮಕ್ಕಳು ಹೀಗೆ ನೈತಿಕತೆಯಿಂದ ವರ್ತಿಸಲು ಕಾರಣ ಏನೆಂಬುದನ್ನು ಇತ್ತೀಚೆಗೆ ಬಾಲಿವುಡ್ ಮತ್ತು ಮರಾಠಿ ನಟ ರಿತೇಶ್ ದೇಶ‌್‌ಮುಖ್ ಬಿಚ್ಚಿಟ್ಟಿದ್ದಾರೆ. 

'ಪಾಪರಾಝಿ ನಮ್ಮನ್ನು ಕ್ಲಿಕ್ ಮಾಡುತ್ತಿದ್ದರು ಮತ್ತು ನಮ್ಮ ಮಕ್ಕಳು ನಮ್ಮಲ್ಲಿ ಕಾರಣವನ್ನು ಕೇಳಿದರು. ನಾನು ತುಂಬಾ ವರ್ಷ ನಟನೆಯ ಅನುಭವ ಹೊಂದಿರುವುದರಿಂದ ಪಾಪ್‌ಗಳು ನನ್ನ ಕ್ಲಿಕ್ ಮಾಡುತ್ತಾರೆಂದೆ'

'ಹಾಗಿದ್ದರೆ ತಮ್ಮ ಫೋಟೋ ಏಕೆ ತೆಗೆಯುತ್ತಾರೆಂದು ಮಕ್ಕಳು ಪ್ರಶ್ನಿಸಿದರು. ಅದಕ್ಕೆ- ನೀವು ಇನ್ನೂ ಜೀವನದಲ್ಲಿ ಏನೂ ಮಾಡಿಲ್ಲ. ಆದರೂ ಪಾಪಾರಾಜಿಗಳು ನಿಮ್ಮ ಫೋಟೋ ತೆಗೆಯುತ್ತಾರೆಂದರೆ ನೀವವರಿಗೆ  ಕೈ ಜೋಡಿಸಿ ಧನ್ಯವಾದ ಹೇಳಬೇಕು ಎಂದು ಹೇಳಿದ್ದೇನೆ' ಎಂದು ನಟ ಹೇಳಿದ್ದಾರೆ.

ಪೋಷಕರು ಮಕ್ಕಳಿಗೆ ಹೇಗೆ ಸಂಸ್ಕಾರ ಕಲಿಸಿಕೊಡಬೇಕೆಂಬುದಕ್ಕೆ ಇವರೊಂದು ಉದಾಹರಣೆಯಾಗಿದ್ದಾರೆ. ಕೃತಜ್ಞತೆಯ ಪಾಠವನ್ನು ಮಕ್ಕಳಿಗೆ ಸರಳವಾಗಿ ಹೇಳಿದ್ದಾರೆ. 

ರಿತೇಶ್ ದೇಶ್‌ಮುಖ್ ಸಧ್ಯ ಜಿಯೋ ಸಿನಿಮಾದ ವೈದ್ಯಕೀಯ ಥ್ರಿಲ್ಲರ್ 'ಪಿಲ್‌' ವೆಬ್ ಸರಣಿಯಲ್ಲಿ CDSCO ಅಧಿಕಾರಿ ಪ್ರಕಾಶ್ ಚೌಹಾಣ್ ಪಾತ್ರದಲ್ಲಿ ನಟಿಸಿದ್ದಾರೆ.

ಅವರ ಉನ್ನತ ದರ್ಜೆಯ ನಟನಾ ಕೌಶಲ್ಯದ ಹೊರತಾಗಿ, ನಟ ಸಭ್ಯತೆ ಮತ್ತು ಡೌನ್ ಟು ಅರ್ಥ್ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. 

Latest Videos

click me!