ನಿಮ್ಮ ಗಂಡ ಬೇರೆ ಹುಡುಗಿ ಜೊತೆ ಮಜಾ ಮಾಡ್ತಿದ್ದಾನೆ .. ನಿಮಗೇನೂ ಅನ್ನಿಸಲ್ವಾ? ಕತ್ರಿನಾಗೆ ಫ್ಯಾನ್ಸ್‌ ಪ್ರಶ್ನೆ

Published : Jul 10, 2024, 04:39 PM IST

ವಿಕ್ಕಿ ಕೌಶಲ್ ನಟನೆಯ ಬ್ಯಾಡ್ ನ್ಯೂಸ್ ಸಿನಿಮಾದ ಜನಮ್ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಎಲ್ಲರೂ ಕತ್ರಿನಾ ಕೈಫ್‌ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

PREV
17
ನಿಮ್ಮ ಗಂಡ ಬೇರೆ ಹುಡುಗಿ ಜೊತೆ ಮಜಾ ಮಾಡ್ತಿದ್ದಾನೆ .. ನಿಮಗೇನೂ ಅನ್ನಿಸಲ್ವಾ? ಕತ್ರಿನಾಗೆ ಫ್ಯಾನ್ಸ್‌ ಪ್ರಶ್ನೆ

ಬಾಲಿವುಡ್ ಸೆಕ್ಸಿ ಗರ್ಲ್ ಅಂತಾನೇ ಕರೆಸಿಕೊಳ್ಳುವ ಕತ್ರಿನಾ ಕೈಫ್ ನಿಸರ್ಗದ ಮಡಿಲಿನಲ್ಲಿ ತೆಗೆದುಕೊಂಡಿರುವ ಭಾವಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ನಿಮ್ಮ ಗಂಡನಿಗೆ ನೀವೇನೂ ಹೇಳಲ್ವಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

27

ಜುಲೈ 9ರಂದು ವಿಕ್ಕಿ ಕೌಶಲ್ ಮತ್ತು ತೃಪ್ತಿ ದಿಮ್ರಿ ಜೊತೆಗೆ ಸೆಕ್ಸಿಯಸ್ಟ್ ಹಾಡು ರಿಲೀಸ್ ಆಗಿದೆ. ವಿಕ್ಕಿ-ತೃಪ್ತಿಯ ಕೆಮಿಸ್ಟ್ರಿ ಕಂಡು ಪಡ್ಡೆಹುಡುಗರು ಫಿಧಾ ಆಗಿದ್ದಾರೆ. ಸದ್ಯ ಹಾಡಿನ ರೊಮ್ಯಾಂಟಿಕ್ ಕ್ಲಿಪ್‌ಗಳು ವೈರಲ್ ಆಗುತ್ತಿವೆ.

37

ಇದೇ ತಿಂಗಳು ಜುಲೈ 19ರಂದು ಬ್ಯಾಡ್ ನ್ಯೂಸ್ ರಿಲೀಸ್ ಆಗಲಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಸಿನಿ ಅಂಗಳದಲ್ಲಿ ಸಿನಿಮಾ ದೊಡ್ಡಮಟ್ಟದ ಹವಾ ಸೃಷ್ಟಿಸಿದೆ. ಹಾಗಾಗಿ ಚಿತ್ರಕ್ಕಾಗಿ ಸಿನಿ ಅಭಿಮಾನಿಗಳು ಕಾಯುತ್ತಿದ್ದಾರೆ.

47

ಇತ್ತ ಕತ್ರಿನಾ ಕೈಫ್ ಗರ್ಭಿಣಿ ಎಂಬ ಸುದ್ದಿಯೂ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಗುಡ್‌ನ್ಯೂಸ್ ಬಗ್ಗೆ ವಿಕ್ಕಿ ಕೌಶಲ್ ಅಥವಾ ಕತ್ರಿನಾ ಕೈಫ್ ದೃಢೀಕರಿಸಿಲ್ಲ. ಆದ್ರೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕತ್ರಿನಾ ಸಡಿಲವಾದ ಡ್ರೆಸ್ ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ.

57

ಸಡಿಲವಾದ ಡ್ರೆಸ್ ಧರಿಸುವ ಮೂಲಕ ಬೇಬಿ ಬಂಪ್ ಮರೆ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. 2021ರಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಭಾರತದಲ್ಲಿಯೇ ಮದುವೆಯಾಗಿದ್ದರು.

67
Bad Newz Jaanam

ಇನ್ನು ಕತ್ರಿನಾ ಕೈಫ್‌ ಫೋಟೋಗೆ ಸಾವಿರಾರು ಕಮೆಂಟ್‌ಗಳು ಬರುತ್ತಿವೆ. ನಿಮ್ಮ ಗಂಡ ದಾರಿ ತಪ್ಪುತ್ತಿದ್ದಾನೆ. ಹುಷಾರು, ಲಗಾಮು ಬಿಗಿಯಾಗಿ ಹಿಡಿದುಕೊಳ್ಳಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

77

ನಿಮ್ಮನ್ನು ಮದುವೆಯಾದ ವಿಕ್ಕಿಯೇ ಅದೃಷ್ಟವಂತ. ನಿಮ್ಮ ಸಂಸಾರ ಸುಖಕರವಾಗಿರಲಿ, ಆದಷ್ಟು ಬೇಗ ಗುಡ್‌ನ್ಯೂಸ್ ಕೊಡಿ ಎಂದು ಕೆಲವರು ಕೇಳಿದ್ರೆ ಹಲವರು ತೌಬಾ ತೌಬಾ ಹಾಡಿಗೆ ಪತಿ ಜೊತೆ ಹೆಜ್ಜೆ ಹಾಕಿ ವಿಡಿಯೋ ಅಪ್ಲೋಡ್ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories