ನೀರು ದೋಸೆಯಂತೆ ಕಾಣ್ತಿಲ್ವಾ, ಕರಾವಳಿ ಬೆಡಗಿ ಪ್ರಶ್ನೆಗೆ ಚಟ್ನಿ, ಸಾಂಬಾರ್ ಆಗ್ತೀನಿ ಎಂದ ಫ್ಯಾನ್ಸ್!

First Published | Feb 4, 2024, 7:06 PM IST

ಟಾಲಿವುಡ್‌ನ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್‌ ಆಗಿರುವ ನಟಿ. ಇದೀಗ ಪೂಜಾ ವೈಟ್‌ ನೆಟ್ಟೆಡ್‌ ಡ್ರೆಸ್‌ನಲ್ಲಿ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. 

ಸೌತ್‌ ಚಿತ್ರರಂಗದ ಟಾಪ್‌ ನಟಿ ಪೂಜಾ ಹೆಗ್ಡೆ ಬ್ಲ್ಯಾಕ್ & ವೈಟ್ ಫೋಟೋಸ್ ಶೇರ್ ಮಾಡಿದ್ದು, ಸದ್ಯ ವೈರಲ್ ಆಗಿವೆ. ಹೌದು! ವೈಟ್‌ ನೆಟ್ಟೆಡ್ ಡ್ರೆಸ್‌ನಲ್ಲಿ ಫೋಟೋ ಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ನಟಿ ಪೂಜಾ ಧರಿಸಿದ ಉಡುಗೆ ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಸಾಕಷ್ಟು ತೂತುಗಳಿಂದ ಕೂಡಿತ್ತು. ಆ ನೆಟ್ಟೆಡ್‌ ಟಾಪ್ ತುಂಬಾ ಕ್ಯೂಟ್ ಆಗಿ ಪೂಜಾಗೆ ಹೊಂದಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Tap to resize

ಕರಾವಳಿ ಸುಂದರಿ ಪೂಜಾ ನೆಟ್ಟೆಡ್ ಫೋಟೋಸ್‌ನ ಪೋಸ್ಟ್‌ಗೆ ನೀರು ದೋಸೆಯಂತೆ ಕಾಣುತ್ತಿದ್ದೇನೆ ಎಂದು ಫನ್ನಿಯಾಗಿ ಕ್ಯಾಪ್ಷನ್ ಕೊಟ್ಟಿದ್ದಾರೆ. ವಿಶೇಷವಾಗಿ ಪೂಜಾ ಧರಿಸಿರುವ ಬಟ್ಟೆಯೂ ನೀರು ದೋಸೆಯಂತೆ ತೂತುಗಳಿಂದ ಕೂಡಿತ್ತು.

ಪೂಜಾ ಹೆಗ್ಡೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ನೆಟ್ಟೆಡ್  ಡ್ರೆಸ್‌ನ ಫೋಟೋಸ್‌ ಸಖತ್‌ ವೈರಲ್‌ ಆಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಫ್ಯಾನ್ಸ್‌ನಿಂದ ಪಡೆದಿದ್ದಾರೆ. ಜೊತೆಗೆ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ.

ಪೂಜಾ ಹೆಗ್ಡೆ ಕರಾವಳಿಯ ಚೆಲುವೆ. ಅವರು ಹೆಚ್ಚಾಗಿ ಅಲ್ಲಿಯೇ ಇರುತ್ತಾರೆ. ಆಗಾಗ ತಮ್ಮೂರಿಗೆ ಬರುವ ಬಾಲಿವುಡ್ ಬ್ಯೂಟಿ ಈಗ ಸದ್ಯ ಸಿನಿಮಾದಲ್ಲಿ ಅಷ್ಟಾಗಿ ಬ್ಯುಸಿಯಾಗಿಲ್ಲ.

ಪೂಜಾ ಹೆಗ್ಡೆ ಅವರಿಗೆ ಕರಾವಳಿ ಆಹಾರ ಅಂದ್ರೆ ಭಾರೀ ಇಷ್ಟ. ನಟಿ ಏಡಿ, ಮೀನು. ಪ್ರಾನ್ಸ್​ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅದರ ಫೋಟೋಗಳನ್ನು ಸಹ ಶೇರ್ ಮಾಡುತ್ತಾರೆ.

ಪೂಜಾ ಹೆಗ್ಡೆ ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂ ಸಿನಿಮಾಗೆ ಆಯ್ಕೆಯಾಗಿದ್ದರೂ ಕೂಡಾ ನಂತರ ಅವರನ್ನು ಸಿನಿಮಾದಿಂದ ಕೈ ಬಿಡಲಾಯಿತು. ಆಮೇಲೆ ಅವರ ಸ್ಥಾನಕ್ಕೆ ಶ್ರೀಲೀಲಾ ಅವರನ್ನು ತೆಗೆದುಕೊಳ್ಳಲಾಯಿತು.

Latest Videos

click me!