ಡೆವಿಲ್ ಸಿನಿಮಾ ಮಾಡುವಾಗಲೇ ಪ್ರಗ್ನೆಂಟ್ ಆಗಿದ್ದೇನೆ; ಗುಟ್ಟು ಬಿಚ್ಚಿಟ್ಟ ಜೋಶ್ ನಟಿ ಪೂರ್ಣಾ

First Published | Feb 4, 2024, 3:13 PM IST

ಕನ್ನಡದ ಜೋಶ್‌ ಸಿನಿಮಾ ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ಅವರು ನಾನು ಮಗುವಿಗೆ ಜನ್ಮ ನೀಡಲು ಡೆವಿಲ್ ಸಿನಿಮಾ ಕಾರಣ. ನಾನು ಈ ಸಿನಿಮಾದಲ್ಲಿ ನಟನೆ ಮಾಡುವಾಗಲೇ ಪ್ರಗ್ನೆಂಟ್ ಆದೆ ಎಂದು ಹೇಳಿಕೊಂಡಿದ್ದಾರೆ.

ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ಕನ್ನಡಿಗರಿಗೂ ಪರಿಚಿತರು. ಜೋಶ್, ರಾಧನ ಗಂಡ ಹಾಗೂ ಇತ್ತೀಚೆಗೆ ಬಿಡುಗಡೆಯಾದ ರಮೇಶ್ ಅರವಿಂದ್ ಅವರ 100 ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇವರು ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಜೋಶ್ ಸಿನಿಮಾದ ಯಶಸ್ಸು ಪೂರ್ಣಾ ಅವರನ್ನು ಕನ್ನಡಿಗರಿಗೆ ಪರಿಚಯಿಸಿದೆ.
 

ಇದೀಗ ಅವರು ಮುಂಬರುವ ತಮಿಳಿನ ಡೆವಿಲ್ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಯ್ಯೂಟೂಬ್‌ ಸಂದರ್ಶನವೊಂದರಲ್ಲಿ ಮಾತನಾಡಿದ ಪೂರ್ಣಾ ಅವರು, ಡೆವಿಲ್ ಸಿನಿಮಾ ಜತೆ ಪೂರ್ಣಾಗೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾರೆ.

Tap to resize

ಡೆವಿಲ್ ಸಿನಿಮಾವನ್ನು ಮತ್ತು ಚಿತ್ರತಂಡದವರನ್ನು ನಾನೆಂದಿಗೂ ಮರೆಯುವುದಿಲ್ಲ. ಹಾಡಿನ ಚಿತ್ರೀಕರಣದ ವೇಳೆ ನನಗೆ ತಲೆ ಸುತ್ತುವ ಅನುಭವವಾಯಿತು. ಆಗ ಇಡೀ ಸೆಟ್‌ನಲ್ಲಿರುವ ಎಲ್ಲರೂ ಗಾಬರಿಯಾಗಿದ್ದರು.
 

ಮುಂದುವರೆದು, ನಾನು ಮಗುವಿಗೆ ಜನ್ಮ ನೀಡಲು ಡೆವಿಲ್ ಸಿನಿಮಾ ಕಾರಣ. ನಾನು ಈ ಸಿನಿಮಾದಲ್ಲಿ ನಟನೆ ಮಾಡುವಾಗಲೇ ಪ್ರಗ್ನೆಂಟ್ ಆದೆ ಎಂಬ ಘಟನೆಯನ್ನೂ ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ.

ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ಅವರು ಮುಂಬರುವ ತಮಿಳಿನ ಡೆವಿಲ್ ಸಿನಿಮಾ ಯಶಸ್ವಿಗಾಗಿ ಎದುರು ನೋಡುತ್ತಿದ್ದಾರೆ. ಈ ಡೆವಿಲ್ ಸಿನಿಮಾವನ್ನು ಆದಿತ್ಯ ಎಂಬುವರು ನಿರ್ದೇಶಿಸಿದ್ದಾರೆ. ವಿಧಾರ್ಥ್, ಪೂರ್ಣಾ, ಆದಿತ್ಯ ಅರುಣ್, ಮಿಸ್ಕಿನ್ ಮತ್ತು ಇತರ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
 

ಸಿನಿಮಾ ಚಿತ್ರೀಕರಣ ಸ್ಥಳದಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ವೈದ್ಯರಿಂದ ಪರೀಕ್ಷಿಸಿದಾಗ ನಾನು ಗರ್ಭಿಣಿ ಆಗಿರುವುದು ಖಚಿತವಾಯಿತು. ನಾನು ಪ್ರಗ್ನೆಂಟ್ ಎಂಬುದು ಗೊತ್ತಾಗಿ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.
 

ಈ ಸಿನಿಮಾ ಫೆ.02ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ನಟಿ ಪೂರ್ಣಾ ಟಿವಿ ಮತ್ತು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಪೂರ್ಣಾ ಆಡಿದ ಮಾತುಗಳು ಎಲ್ಲರ ಗಮನ ಸೆಳೆದಿದೆ.

ಮದುವೆ ಹೆಸರಿನಲ್ಲಿ ಹಿಂದೊಮ್ಮೆ ವಂಚನೆಗೆ ಒಳಗಾಗಿ ಭಾರೀ ಸುದ್ದಿಯಾಗಿದ್ದ ಬಹುಭಾಷಾ ಶಾಮ್ನಾ ಖಾಸಿಂ ಅಲಿಯಾಸ್ ಜೆಬಿಎಸ್ ಗ್ರೂಪ್ ಕಂಪನಿಯ 'ಸಂಸ್ಥಾಪಕ ಮತ್ತು ಸಿಇಒ ಶಾಜಿಜ್ ಆಸಿಫ್ ಅವರನ್ನು ಮದುವೆ ಆಗಿದ್ದಾರೆ.
 

ಪೂರ್ಣಾ ಅವರ ಮದುವೆಯ ನಂತರ ತುಂಬಾ ಸಂತಸದಿಂದ ಇದ್ದರು. ಅವರ ಸಿನಿಮಾ ಜೀವನಕ್ಕೆ ಗಂಡನ ಮನೆಯಿಂದಲೂ ಪೂರ್ಣ ಪ್ರೋತ್ಸಾಹ ಲಭ್ಯವಾಗಿದೆ. ಪ್ರಗ್ನೆನ್ಸಿ ಎಂದು ತಿಳಿದ ನಂತರ ಸಿನಿಮಾದಿಂದ ಅಂತರ ಕಾಯ್ದುಕೊಂಡು ಹೆರಿಗೆಯಾದ ನಂತರ ಪುನಃ ಕ್ಯಾಮೆರಾ ಮುಂದೆ ಬಂದಿದ್ದಾರೆ.
 

ಶಾಮ್ನಾ ಖಾಸಿಂ ಹಾಗೂ ಅವರ ಪತಿ ಆಸಿಫ್ ಅವರು ಮಗುವಿನೊಂದಿಗೆ ಇರುವ ಹಲವು ಫೋಟೋಗಳನ್ನು ಇನ್ಸ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಒಟ್ಟಾರೆ, ಕೌಟುಂಬಿಕವಾಗಿ ಸಂತಸದಿಂದ ಇರುವ ಪೂರ್ಣಾ ಅವರು ಈಗ ಡೆವಿಲ್ ಸಿನಿಮಾ ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ.

Latest Videos

click me!