100ಕ್ಕೂ ಹೆಚ್ಚು ಹಿಟ್‌ ಚಿತ್ರ ಕೊಟ್ಟ ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್‌ ಹತ್ಯೆಗೆ ಸಹನಟನಿಂದಲೇ ಗುಂಡಿನ ದಾಳಿ!

First Published | Jan 5, 2024, 3:55 PM IST

ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಸ್ಟಾರ್‌ಗಳಿಗೆ ಇರುವಂತಹ ಸೂಪರ್‌ಸ್ಟಾರ್‌ಡಮ್  ಇತರ ಚಿತ್ರರಂಗದವರಿಗೆ ಕಡಿಮೆ. ದಕ್ಷಿಣದ ಟಾಪ್ ಸ್ಟಾರ್‌ಗಳನ್ನು ಅಭಿಮಾನಿಗಳು ದೇವತೆಗಳಂತೆ ಪೂಜಿಸುತ್ತಾರೆ. ಯಶಸ್ವಿ ಚಿತ್ರರಂಗದ ಜೊತೆಗೆ ರಾಜಕೀಯ ವೃತ್ತಿಜೀವನದಲ್ಲಿ ಕೂಡ  ಟ್ರೇಡ್‌ಮಾರ್ಕ್ ಗುಣಲಕ್ಷಣಗಳನ್ನು  ಹೊಂದಿದ್ದ ಮೊದಲ ದಕ್ಷಿಣದ ಸೂಪರ್‌ಸ್ಟಾರ್ ಒಬ್ಬರಿದ್ದಾರೆ. ಅವರಿಗೆ ಸಹ ನಟನಿಂದ ಫೈರಿಂಗ್‌ ಕೂಡ ಆಗಿತ್ತು.

MG ರಾಮಚಂದ್ರನ್, ಸಾಮಾನ್ಯವಾಗಿ MGR ಎಂದು  ಗುರುತಿಸಲ್ಪಡುವ ತಮಿಳು ಚಿತ್ರರಂಗದ ಶೇಷ್ಠ ನಟ ಮತ್ತು ದಕ್ಷಿಣದ ಮೊದಲ  ಸ್ಟಾರ್‌ ನಟ ಎಂದು  ವ್ಯಾಪಕವಾಗಿ ಪರಿಗಣಿಸಲಾಗಿದೆ. 1917 ರಲ್ಲಿ ಜನಿಸಿದ ರಾಮಚಂದ್ರನ್ 1936 ರಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ ಅವರ ವೃತ್ತಿಜೀವನದ ಮೊದಲ ಕೆಲವು ವರ್ಷಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದರು. ಅನೇಕ ಚಲನಚಿತ್ರಗಳಲ್ಲಿ, ಅವರು ಹೆಚ್ಚುವರಿ ಅಥವಾ ಜೂನಿಯರ್ ಕಲಾವಿದರಾಗಿ ಕೆಲಸ ಮಾಡಿದರು ಮತ್ತು ದಿನಗೂಲಿ ವೇತನವನ್ನು ಗಳಿಸುತ್ತಿದ್ದರು.

1950 ರ ಹಿಟ್ ಚಿತ್ರ ಮಲೈಕ್ಕಲನ್  ಎಂಜಿಆರ್‌ ಅವರನ್ನು ಸೂಪರ್ಸ್ಟಾರ್‌ಗೆ ಏರಿಸಿತು. ಇಲ್ಲಿಂದ, 1987 ರವರೆಗೆ, ಅವರು ತಮಿಳು ಚಿತ್ರರಂಗದ ರಾಜನಾಗಿ ಮೆರೆದರು. ಆ ಯುಗದ ಇತರ ಇಬ್ಬರು ದೊಡ್ಡ ತಾರೆಗಳಾದ ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್ ಅವರೊಂದಿಗೆ ಗಲ್ಲಾಪೆಟ್ಟಿಗೆಯನ್ನು ಆಳಿದರು. ರಾಮಚಂದ್ರನ್ ತಮ್ಮ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ಹಿಟ್‌ಗಳನ್ನು ನೀಡಿದ್ದಾರೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಧಿಕವಾಗಿದೆ. 

Tap to resize

 1967 ರಲ್ಲಿ, ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ರಾಮಚಂದ್ರನ್ ಹತ್ಯೆಯ ಪ್ರಯತ್ನ ನಡೆದಿತ್ತು. ಅದೃಷ್ಟವಶಾತ್ ಬದುಕುಳಿದರು. ಸಹ ನಟ ಮತ್ತು ರಾಜಕಾರಣಿ ಎಂಆರ್ ರಾಧಾ ಅವರನ್ನು  ಎಂಜಿಆರ್‌  ಆಗಾಗ ಭೇಟಿಯಾಗುತ್ತಿದ್ದರು.  ಇಬ್ಬರೂ ಒಟ್ಟಿಗೆ 25 ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಇವರಿಬ್ಬರು ಉತ್ತಮ ಒಡನಾಟ ಹೊಂದಿದ್ದರು.

 ಆದರೆ ಒಂದು ದಿನ ರಾಧಾ ಮತ್ತು ಎಂಜಿಆರ್ ನಡುವೆ ವೈಮನಸ್ಸು ಉಂಟಾಗಿ ಎಂಜಿಆರ್ ಉದ್ದೇಶಪೂರ್ವಕವಾಗಿ ತಮ್ಮ ವೃತ್ತಿಯನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿ ನಟ ರಾಧಾ ಅವರು ರಾಮಚಂದ್ರನ ಕಿವಿಗೆ ಎರಡು ಬಾರಿ ಗುಂಡು ಹಾರಿಸಿ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಾಯಗೊಂಡದಿದ್ದ ಇಬ್ಬರೂ ಬದುಕುಳಿದರು. ರಾಮಚಂದ್ರನ್ ಅವರ ಎಡ ಕಿವಿಯ ಶ್ರವಣವನ್ನು ಕಳೆದುಕೊಂಡರು. ಕುತ್ತಿಗೆಗೆ ಕೂಡ ಗಾಯವಾಗಿತ್ತು ಹೀಗಾಗಿ ಜೀವ ಉಳಿದ ಬಳಿಕ ಅವರ ಧ್ವನಿಯೂ ಬದಲಾಯಿತು. ಆದರೂ ಎಂಜಿಆರ್‌ ನಟನೆಯನ್ನು ಮುಂದುವರೆಸಿದರು.  

1962 ರಲ್ಲಿ, ರಾಮಚಂದ್ರನ್ ಅವರು ತಮ್ಮ ಸ್ನೇಹಿತ ದಿವಂಗತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿಯವರ ಒಗ್ಗಟ್ಟಿನಿಂದ ರಾಜಕೀಯ ಪ್ರವೇಶಿಸಿದರು. ಅವರು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಉನ್ನತ ಮಟ್ಟದ ಅಧಿಕಾರಿಯಾದರು ಮತ್ತು 1967-72ರ ಅವಧಿಯಲ್ಲಿ ಪಕ್ಷದ ಟಿಕೆಟ್‌ ಪಡೆದು ಶಾಸಕರಾಗಿದ್ದರು. 1972 ರಲ್ಲಿ, ಕರುಣಾನಿಧಿ ಅವರು ತಮ್ಮ ಮಗ ಎಂಕೆ ಮುತ್ತು ಅವರನ್ನು ಪಕ್ಷದಲ್ಲಿ ತಮ್ಮ ಉತ್ತರಾಧಿಕಾರಿ ಎಂದು ಬಿಂಬಿಸಲು ಪ್ರಾರಂಭಿಸಿದ ನಂತರ, ರಾಮಚಂದ್ರನ್ ಮತ್ತು ಕರುಣಾನಿಧಿ ನಡುವೆ ಭಿನ್ನಾಭಿಪ್ರಾಯ ಬೆಳೆಯಿತು. 

 ಅಂತಿಮವಾಗಿ, ಎಂಜಿಆರ್ ಅವರನ್ನು ಪಕ್ಷದಿಂದ ಹೊರ ಹಾಕಲಾಯಿತು ಮತ್ತು ಅವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸ್ಥಾಪಿಸಿದರು. ಅವರು 1977 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾದರು ಮತ್ತು 1987 ರಲ್ಲಿ ಅವರು ಸಾಯುವವರೆಗೂ ಎರಡು ಅವಧಿಗೆ ಸೇವೆ ಸಲ್ಲಿಸಿದರು.

ಎಂಜಿಆರ್ ಅವರಿಗೆ ನಟಿ, ರಾಜಕಾರಣಿ ಜಯಲಲಿತಾ ಅತ್ಯಂತ ಆಪ್ತರಾಗಿದ್ದರು. ಜಯಾ ಅವರನ್ನು ರಾಜಕೀಯಕ್ಕೆ ಪರಿಚಯಿಸಿದ್ದು ಎಂಜಿಆರ್. ಜಯಲಲಿತಾ ಕೂಡ ತಮಿಳುನಾಡು ಮುಖ್ಯಮಂತ್ರಿಯಾಗಿ ಓರ್ವ ಪ್ರಭಾವಿ ಮಹಿಳೆಯಾಗಿದ್ದರು ಎಂಬುದು ಗಮನಾರ್ಹ. 

Latest Videos

click me!