Nayantara: ಸಂಭಾವನೆ ಹೆಚ್ಚಿಸ್ಕೊಂಡ್ರಾ ಸೌತ್ ನಟಿ, ಸೈಡ್ ರೋಲ್ ಮಾಡಿದ್ರು ಕೋಟಿ ಕೋಟಿ ಪೇಮೆಂಟ್

Published : Nov 20, 2021, 07:40 PM ISTUpdated : Nov 20, 2021, 07:56 PM IST

ನಟಿ ನಯನತಾರಾ(Nayantara) ಮಹಿಳಾ ಪ್ರಧಾನ ಪಾತ್ರಗಳಲ್ಲಿ ಬಹಳಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಅವರ ಆರಂ, ಕೊಳಮಾವು ಕೋಕಿಲ, ಡೋರ ಕೆಲವು ಉದಾಹರಣೆಗಳು. ಸೌತ್‌ನಲ್ಲಿ ಸಖತ್ ಖ್ಯಾತಿಗೆ ಬಂದ ನಟಿ ಈಗ ಪಡೆಯೋ ಸಂಭಾವನೆ ಎಷ್ಟು ಗೊತ್ತಾ ?

PREV
16
Nayantara: ಸಂಭಾವನೆ ಹೆಚ್ಚಿಸ್ಕೊಂಡ್ರಾ ಸೌತ್ ನಟಿ, ಸೈಡ್ ರೋಲ್ ಮಾಡಿದ್ರು ಕೋಟಿ ಕೋಟಿ ಪೇಮೆಂಟ್

ಮೆಗಾಸ್ಟಾರ್ ಚಿರಂಜೀವಿ ಅವರ ಗಾಡ್‌ಫಾದರ್, ಮೋಹನ್‌ಲಾಲ್ ಅವರ ಲೂಸಿಫರ್ ನ ತೆಲುಗು ರಿಮೇಕ್‌ಗೆ ನಯನತಾರಾ ಆಯ್ಕೆಯಲ್ಲಿದ್ದಾರೆ ಎಂಬುದು ಈಗ ಅಧಿಕೃತವಾಗಿದೆ. ಹೌದು ನಟಿಯ ಮುಂದಿನ ಪ್ರಾಜೆಕ್ಟ್ ಇದಾಗಲಿದೆ ಎನ್ನಲಾಗಿದೆ.

26

ಇತ್ತೀಚೆಗೆ ನಯನತಾರಾ ಹುಟ್ಟುಹಬ್ಬದ ಸಂದರ್ಭದಲ್ಲಿ ನಿರ್ಮಾಪಕರು ಸುದ್ದಿಯನ್ನು ಖಚಿತಪಡಿಸಿದ್ದಾರೆ. ನಟಿ ಇತ್ತೀಚೆಗೆ ತಮ್ಮ ಜನ್ಮದಿನವನ್ನು ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಆಚರಿಸಿಕೊಂಡರು.

36

ಲೇಟೆಸ್ಟ್ ಅಪ್‌ಡೇಟ್ ಏನೆಂದರೆ, ಅವರು ಅಷ್ಟು ಸುಲಭವಾಗಿ ಚಿತ್ರಕ್ಕೆ ಸಹಿ ಹಾಕಿಲ್ಲ.  ತಯಾರಕರಿಂದ ಹೆಚ್ಚಿನ ಸಂಭಾವನೆ ಆಫರ್ ಮೇಲೆ ಒಪ್ಪಂದ ನಡೆದಿದೆ. ನಟಿಯ ಸಂಭಾವನೆಯ ಬೇಡಿಕೆಯನ್ನು ಅವರು ಒಪ್ಪಿಕೊಂಡಿದ್ದಾರೆ.

46

ಚಿತ್ರದಲ್ಲಿ ನಾಯಕಿಯಾಗಿ ನಟಿಸದಿದ್ದರೂ ನಯನತಾರಾ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ. ಹೌದು ಇದುವೇ ನಯನತಾರಾ ಸ್ಪೆಷಾಲಿಟಿ, ಪಾತ್ರ ಯಾವುದೇ ಇರಲಿ, ಅದನ್ನು ಎಫೆಕ್ಟಿವ್ ಆಗಿ ಮಾಡುತ್ತಾರೆ ನಯನತಾರಾ

56

ಚಿರಂಜೀವಿಗೆ ತಂಗಿಯಾಗಿ ನಯನತಾರಾ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ, ಅವರು 4 ಕೋಟಿ ರೂಪಾಯಿಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಇದು ತೆಲುಗು ಸಿನಿಮಾಗಳಲ್ಲಿ ನಟಿಯ ದಾಖಲೆಯ ಸಂಭಾವನೆ.

66

ಅಂತಹ ಪಾವತಿಯನ್ನು ನಯನತಾರಾ ಆದೇಶಿಸಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ 2.75 ರಿಂದ 3 ಕೋಟಿ ರೂ.ಗಳ ಸಂಭಾವನೆ ತೆಗೆದುಕೊಳ್ಳುತ್ತಾರೆ. ನಯನತಾರಾ ತಮ್ಮ ತಮಿಳು ಚಿತ್ರಗಳಿಗೆ ಕೂಡಾ ಇಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ.

Read more Photos on
click me!

Recommended Stories