ಮಹಾಶಿವರಾತ್ರಿಯಂದು ಚಿರಂಜೀವಿ ಅವರ BholaShankar ಫಸ್ಟ್ ಲುಕ್ ಬಿಡುಗಡೆ!

First Published | Mar 1, 2022, 1:49 PM IST

ಸೌತ್ ಸೂಪರ್ ಸ್ಟಾರ್ ಚಿರಂಜೀವಿ  (Chiranjeevi) ಈ ದಿನಗಳಲ್ಲಿ ತಮ್ಮ ಸಿನಿಮಾಗಳ ಕಾರಣದಿಂದ  ಚರ್ಚೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಆಚಾರ್ಯ ಚಿತ್ರದ ಮೂಲಕ ಸುದ್ದಿಯಲ್ಲಿದ್ದರು. ಅದೇ ಸಮಯದಲ್ಲಿ, ಇತ್ತೀಚಿನ ದಿನಗಳಲ್ಲಿ  ಅವರ ಭೋಲಾ ಶಂಕರ್‌ (Bhola Shankar) ಸಿನಿಮಾ ಬಹಳ ಸುದ್ದಿ ಮಾಡುತ್ತಿದೆ. ಈ ಚಿತ್ರದಲ್ಲಿ ಅವರು ಶಂಕರ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಅವರ ಫಸ್ಟ್ ಲುಕ್ ಮಹಾಶಿವರಾತ್ರಿ ಅಂದರೆ ಮಾರ್ಚ್ 1 ರಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ಸಂಬಂಧಿಸಿದ ಚಿರಂಜೀವಿ ಅವರ ಫಸ್ಟ್ ಲುಕ್‌ನ ಮಾಹಿತಿಯನ್ನು ಚಿತ್ರ ನಿರ್ಮಾಪಕರು ಟ್ವೀಟ್ ಮಾಡಿದ್ದರು. 

ಬಹು ನಿರೀಕ್ಷಿತ ಚಿತ್ರ ಭೋಲಾ ಶಂಕರ್‌ನ ಫಸ್ಟ್ ಲುಕ್ ಅನ್ನು ಬೆಳಿಗ್ಗೆ 9:05 ಕ್ಕೆ ಬಿಡುಗಡೆ ಮಾಡಲಾಗಿದೆ. ಆ್ಯಕ್ಷನ್ ಡ್ರಾಮಾದಲ್ಲಿ ಶಂಕರ್ ಮುಖ್ಯ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ. ಶಂಕರ್ ಎಂಬುದು ಶಿವನಿಗೆ ಮತ್ತೊಂದು ಹೆಸರು ಮತ್ತು ಮಹಾಶಿವರಾತ್ರಿಗಿಂತ ಉತ್ತಮವಾದ ದಿನ ಯಾವುದು' ಎಂದು ಮಾಹಿತಿಯನ್ನು ಹಂಚಿಕೊಂಡು ಚಿತ್ರ ನಿರ್ಮಾಪಕರು  ಹೇಳಿದರು.

ಈ ಹಿಂದೆ ಭೋಲಾ ಶಂಕರ್ ಚಿತ್ರದ ನಿರ್ಮಾಪಕರು ಸ್ವಾಗ್ ಆಫ್ ಭೋಲಾ ಚಿತ್ರದ ಪ್ರಿ ಲುಕ್ ಅನ್ನು ಬಿಡುಗಡೆ ಮಾಡಿದ್ದರು ಈ ಲುಕ್ ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿತ್ತು. ಈ ಮೆಗಾ ಆಕ್ಷನ್ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸಿದ್ದಾರೆ. 

Tap to resize

ಚಿತ್ರದಲ್ಲಿ ಚಿರಂಜೀವಿ ಅವರ ಸಹೋದರಿ ಪಾತ್ರದಲ್ಲಿ ಕೀರ್ತಿ ಸುರೇಶ್ (Keerthi Suresh) ನಟಿಸುತ್ತಿದ್ದಾರೆ. ಇವರಲ್ಲದೆ ಚಿತ್ರದಲ್ಲಿ ತಮನ್ನಾ ಭಾಟಿಯಾ (Tamanna Bhatia) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕಥೆಯನ್ನು ಸತ್ಯಂದ್ ಬರೆದಿದ್ದಾರೆ. ಈ ವರ್ಷ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬಹುದು. ಸದ್ಯ, ಚಿತ್ರದ ಕೊನೆಯ ಶೆಡ್ಯೂಲ್‌ನ ಚಿತ್ರೀಕರಣ ಹೈದರಾಬಾದ್‌ನಲ್ಲಿ (Hyderabad) ನಡೆಯುತ್ತಿದೆ.

ಚಿರಂಜೀವಿ ತಮ್ಮ ಮಗ ರಾಮ್ ಚರಣ್ (Ram Charan) ಜೊತೆ ಆಚಾರ್ಯ (Acharya) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಚೊಚ್ಚಲ ಬಾರಿಗೆ ತಂದೆ-ಮಗನ ಬಗ್ಗೆ ಸಿನಿಮಾ ಮಾಡಿದ್ದಾರೆ . ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಚಿರಂಜೀವಿ ಜೊತೆಗೆ ಪೂಜಾ ಹೆಗ್ಡೆ (Pooja Hege) ಮತ್ತು ಕಾಜಲ್ ಅಗರ್ವಾಲ್ (Kajal Agarwal) ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ವರದಿಗಳ ಪ್ರಕಾರ, ಈ ವರ್ಷ ಏಪ್ರಿಲ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವಲ್ಲದೆ ಚಿರಂಜೀವಿ ಗಾಡ್ ಫಾದರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಯಾಗಿದೆ.  ಆಚಾರ್ಯ ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ.

ಟೀಸರ್ನ(Teaswer) ಲ್ಲಿ ರಾಮ್ ಚರಣ್ ವಿಭಿನ್ನ ಮೂಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾನ್ಸ್ (Romance) ಮಾಡುವಾಗ, ಅವನ ಲುಕ್‌ ಸಂಪೂರ್ಣವಾಗಿ ಬದಲಾಗಿದೆ ಮತ್ತು ಅವರು ಕಾಡಿನಲ್ಲಿ ಹೋರಾಡುವುದನ್ನು ಸಹ  ನೋಡ ಬಹುದಾಗಿದೆ.

ಟೀಸರ್‌ನಲ್ಲಿನ ಒಂದು ದೃಶ್ಯದಲ್ಲಿ, ಅವರು ತಮ್ಮ ತಂದೆ ಚಿರಂಜೀವಿ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ, ಇದರಲ್ಲಿ ನದಿಯ ಒಂದು ಬದಿಯಲ್ಲಿ ಹುಲಿ ಮತ್ತು ಇನ್ನೊಂದು ಬದಿಯಲ್ಲಿ ರಾಮ್ ಚರಣ್ ಮತ್ತು  ಚಿರಂಜೀವಿ  ಕಾಣಿಸಿಕೊಂಡಿದ್ದಾರೆ.

Latest Videos

click me!