ಮೊಮ್ಮಗು ಬಗ್ಗೆ ಮೌನ ಮುರಿದ Priyanka Chopra ತಾಯಿ ಮಧು ಚೋಪ್ರಾ!

First Published | Mar 1, 2022, 10:13 AM IST

ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas) ಕಳೆದ ಕೆಲವು ದಿನಗಳಿಂದ ತಮ್ಮ ಮಗುವಿನ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ತಾಯಿಯಾದ ನಂತರ ನಟಿಯ ಪ್ರತಿ ಕ್ಷಣದ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ವರ್ಷ ಜನವರಿ 22ರಂದು ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ಅಮ್ಮನಾಗಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಧ್ಯರಾತ್ರಿ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಪಿಗ್ಗಿ ಅಮ್ಮ ತಮ್ಮ ಮೊಮ್ಮಗಳ ಬಗ್ಗೆ ಹೇಳಿದ್ದಿಷ್ಟು...

ತಾಯಿಯಾದಾಗಿನಿಂದಲೂ ಪ್ರಿಯಾಂಕಾಯ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿದೆ. ಅಭಿಮಾನಿಗಳು (Fans) ತಮ್ಮ ಮಗುವಿನ ಫಸ್ಟ್‌ ಲುಕ್‌ (First Look) ನೋಡಲು ಎದುರು ನೋಡುತ್ತಿದ್ದಾರೆ, ಹಾಗೂ  ಮಗುವಿನ ಹೆಸರೇನು ಎಂದು ತಿಳಿಯಲು ಉತ್ಸುಕರಾಗಿದ್ದಾರೆ. 

ಆದಾಗ್ಯೂ, ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಮಗಳ ಪೂರ್ಣ ವಿಷಯವನ್ನು ರಹಸ್ಯವಾಗಿಡಲು ಬಯಸುತ್ತಾರೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ (Madhu Chopra) ಈ ವಿಚಾರವಾಗಿ ಬಾಯಿ ಬಿಟ್ಟಿದ್ದರು.

Tap to resize

ತಮ್ಮ ಸೌಂದರ್ಯವರ್ಧಕ ಚಿಕಿತ್ಸಾಲಯದ 14ನೇ ವಾರ್ಷಿಕೋತ್ಸವವನ್ನು ಡಾ. ಮಧು ಚೋಪ್ರಾ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಾಧ್ಯಮಗಳ ಮುಂದೆ ಬಾಯಿ ತೆರೆದರು. ತಮ್ಮ ಮೊಮ್ಮಗುವಿನ ಬಗ್ಗೆ ಒಂದಿಷ್ಟು ವಿಷಯಗಳನ್ನು ಮಾಧ್ಯಮದ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ಮೊಟ್ಟಮೊದಲ ಬಾರಿಗೆ ಅಜ್ಜಿ ಎಂಬ ಭಾವ ಅವರಲ್ಲಿ ಮೂಡಿದೆ ಎಂದರು. ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಅವರು ಇನ್ನೂ ನಿಕ್ ಮತ್ತು ಪ್ರಿಯಾಂಕಾ ಅವರ ಮಗುವಿಗೆ ಯಾವುದೇ ಅಡ್ಡ ಹೆಸರನ್ನು (Pet Name) ಇಟ್ಟಿಲ್ಲವಂತೆ ಪಂಡಿತರೇ ಒಳ್ಳೆಯ ಹೆಸರನ್ನು ಆರಿಸಲ ಆಗ ಮಗುವಿಗೆ ಹೆಸರಿಡಲಾಗುತ್ತದೆ ಎಂದು ಪ್ರಿಯಾಂಕಾರ ತಾಯಿ ಹೇಳಿದ್ದಾರೆ.

ಮೂಲಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಏಪ್ರಿಲ್‌ನಲ್ಲಿ ಮಗು ಜನಿಸಲಿದೆ ಎಂದು ಭಾವಿಸಿ ,ಹಲವಾರು ಫೋಟೋ ವರ್ಕ್‌ಗಳನ್ನು ತೆಗೆದುಕೊಂಡಿದ್ದರು. ಆದರೆ ಜನವರಿಯಲ್ಲಿ ಹೆರಿಗೆಯಾದ ಪರಿಣಾಮ ಹೊಸ ತಾಯಿ ಎಲ್ಲಾ ಪೂರ್ವ ಯೋಜಿತ ಕೆಲಸಗಳಿಂದ ವಿರಾಮ ತೆಗೆದುಕೊಂಡಿದ್ದಾರೆ. ಪ್ರಿಯಾಂಕಾ ತಮ್ಮ ಮುಂದಿನ ಚಿತ್ರವನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ. 
 

Latest Videos

click me!