ಇದೇ ನನ್ನ ಹೆಂಡ್ತಿಯ ಜೀವ ಉಳಿಸಿದ್ದು; ಭೀಕರ ಅಪಘಾತದಲ್ಲಿ ಪತ್ನಿ ಬದುಕಿದ್ದೇಗೆ ಎಂದು ಹೇಳಿದ ಸೋನು ಸೂದ್

Published : Apr 12, 2025, 09:26 AM ISTUpdated : Apr 12, 2025, 09:33 AM IST

Actor Sonu Sood Wife Sonali: ನಟ ಸೋನು ಸೂದ್ ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸುವಂತೆ ಸೋನು ಸೂದ್ ಜನರಲ್ಲಿ ಮನವಿ ಮಾಡಿದ್ದಾರೆ.

PREV
15
ಇದೇ ನನ್ನ ಹೆಂಡ್ತಿಯ ಜೀವ ಉಳಿಸಿದ್ದು; ಭೀಕರ ಅಪಘಾತದಲ್ಲಿ ಪತ್ನಿ ಬದುಕಿದ್ದೇಗೆ ಎಂದು ಹೇಳಿದ ಸೋನು ಸೂದ್

ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಜನರ ಜೀವ ಹೇಗೆ ಉಳಿಸಬಹುದು ಎಂಬುದನ್ನು ನಟ ಸೋನು ಸೂದ್ ವಿವರಿಸಿದ್ದಾರೆ. ಸೋನು ಅವರ ಕುಟುಂಬದ ಜೀವಗಳನ್ನು ಉಳಿಸುವಲ್ಲಿ ಕಾರಿನ ಸುರಕ್ಷತಾ ವೈಶಿಷ್ಟ್ಯಗಳು ಪ್ರಮುಖ ಪಾತ್ರ ವಹಿಸಿದವು. ಭೀಕರ ಅಪಘಾತದಲ್ಲಿ ಪತ್ನಿಯ ಜೀವ ಉಳಿದಿದ್ದು ಹೇಗೆ ಎಂಬುದನ್ನು ಸೋನು ಸೂದ್ ಹೇಳಿದ್ದಾರೆ.

25
sonu sood accident

ಮುಂಬೈ-ನಾಗ್ಪುರ ಹೆದ್ದಾರಿಯಲ್ಲಿ ಪತ್ನಿಯ ಅಪಘಾತದ ನಂತರ ಸೋನು ಸೂದ್ ಹಿಂಬದಿಯ ಸೀಟ್ ಬೆಲ್ಟ್ ಸುರಕ್ಷತೆಯ ಬಗ್ಗೆ ಮಾತನಾಡಿದ್ದಾರೆ. ಕೊರೊನಾ ಅವಧಿಯಲ್ಲಿ ನಟ ಸೋನು ಸೂದ್ ಜನರ ಕಷ್ಟಕ್ಕೆ ನೆರವಾಗಿದ್ದರು. ಇಂದಿಗೂ ವಿವಿಧ ಸಮಾಜಸೇವೆಗಳಲ್ಲಿ ನಟ ಸೋನು ಸೂದ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಟ ಸೋನು ಸೂದ್ ಈಗ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋದಲ್ಲಿ ಹಲವು ವಿಷಯಗಳನ್ನು ಸೋನು ಹಂಚಿಕೊಂಡಿದ್ದಾರೆ. 

35

ಸೋನು ಸೂದ್ ಅವರು ತಮ್ಮ ಪತ್ನಿ ಸೋನಾಲಿ ಅವರ ಸಹೋದರಿ ಮತ್ತು ಅಳಿಯನೊಂದಿಗೆ ಇತ್ತೀಚೆಗೆ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಕಾರ್ ಅಪಘಾತಕ್ಕೊಳಗಾಗಿತ್ತು. ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕಾರ್ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಆದ್ರೂ ಕಾರ್‌ನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದರು. ಇದಕ್ಕೆ ಕಾರಣ ಮೂವರು  ಸೀಟ್ ಬೆಲ್ಟ್ ಧರಿಸಿದ್ದರು. ಭಾರತದಲ್ಲಿ, 100 ರಲ್ಲಿ 99 ಜನರು ಹಿಂದಿನ ಸೀಟಿನಲ್ಲಿ ಕುಳಿತಾಗ ಸೀಟ್ ಬೆಲ್ಟ್ ಧರಿಸುವುದಿಲ್ಲ.

45

ಸೋನು ಸೂದ್ ತಮ್ಮ ವಿಡಿಯೋದಲ್ಲಿ ಸೀಟ್ ಬೆಲ್ಟ್ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ್ದಾರೆ. ಹಿಂದಿನ ಆಸನನಲ್ಲಿದ್ದವರು ಸೀಟ್ ಬೆಲ್ಟ್‌ ಧರಿಸಲ್ಲ. ಜನರು ಈ ಅಸಡ್ಡೆ ಅಭ್ಯಾಸವನ್ನು ತ್ಯಜಿಸಿಬೇಕು.  ಕಾರ್‌ನಲ್ಲಿ ಎಲ್ಲೇ ಕುಳಿತರೂ ನಿಯಮಿತವಾಗಿ ಸೀಟ್ ಬೆಲ್ಟ್ ಧರಿಸಬೇಕು ಎಂದು ಸೋನು ಸೂದ್ ಹೇಳಿದ್ದಾರೆ.

55

ಸೀಟ್ ಬೆಲ್ಟ್ ಧರಿಸಿದ್ದರಿಂದ ಸೋನ್ ಸೂದ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಷಯವನ್ನು ಹಂಚಿಕೊಂಡಿರುವ ಸೋನ್ ಸೂದ್, ಎಲ್ಲರೂ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಬೇಕು. ಇದು ಜೀವದ ಪ್ರಶ್ನೆಯಾಗಿರುತ್ತದೆ ಎಂದಿದ್ದಾರೆ.

Read more Photos on
click me!

Recommended Stories