ಸೋನು ಮತ್ತು ಮಾಧುರಿಮಾ ಕೋಲ್ಕತ್ತಾದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು. ವಾಸ್ತವವಾಗಿ, ಮಾಧುರಿಮಾ ಸೋನುವನ್ನು ಇಂಟರ್‌ವ್ಯೂ ಮಾಡಲು ಬಂದಿದ್ದರು, ಸೋನು ಬಂಗಾಳಿ ಹಾಡಿನ ಉಚ್ಚಾರಣೆಯನ್ನು ತಪ್ಪಾಗಿ ಗ್ರಹಿಸಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಬಂಗಾಳಿ ಬಾಲೆ ಮಾಧುರಿಮಾ ಸೋನುವಿನ ಈ ತಪ್ಪನ್ನು ಸರಿಪಡಿಸಿ, ನೋಡಿ ನಕ್ಕಳು.
ಈ ಭೇಟಿಯ ನಂತರ, ಸ್ನೇಹಿತರಾದ ಸೋನು ಮತ್ತು ಮಾಧುರಿಮಾ ಸ್ವಲ್ಪ ಸಮಯ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
'ನಾವು ಭೇಟಿಯಾದಾಗ ನಾವು ಸಂಗೀತವನ್ನು ಕೇಳುತ್ತಿದ್ದೆವು. ನಾನು ಮಧುರಿಮಾಗೆ ಲವ್‌ಸಾಂಗ್‌ಗಳನ್ನು ಹಾಡುತ್ತಿದ್ದೆ' ಎಂದು ಸೋನು ಸಂದರ್ಶನವೊಂದರಲ್ಲಿ ಹೇಳಿದ್ದರು.
ಫೆಬ್ರವರಿ 2002 ರಲ್ಲಿ ವಿವಾಹವಾದ ಈ ಜೋಡಿಗೆ ನ್ಯೂವಾನ್ ಎಂಬ ಮಗನಿದ್ದಾನೆ. ಮಗ ನ್ಯೂವಾನ್ ಕೂಡ ಸಂಗೀತದ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದು ಸೋನು ಹಾಡಲು ಕಲಿಸುತ್ತಾರೆ.
ಫ್ಯಾಮಿಲಿಯ ಕೇರ್ ತೆಗೆದು ಕೊಳ್ಳುವುದರಲ್ಲಿ ನಿರತರಾಗಿರುವ ಸೋನು ಪತ್ನಿ ಬಾಲಿವುಡ್ ಪಾರ್ಟಿಗಳಿಂದಲೂ ದೂರವಿರುತ್ತಾರೆ.
ಆದರ್ಶ ಹೆಂಡತಿ ಹೊಂದಿರಬೇಕಾದ ಎಲ್ಲಾ ಗುಣಗಳನ್ನು ಮಾಧುರಿಮಾ ಹೊಂದಿದ್ದಾಳೆ ಎಂದು ಸೋನು ಒಮ್ಮೆ ಹೇಳಿದರು. ಸೋನು ಅವರ ಕೆಲಸಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಪ್ರವಾಸದಲ್ಲಿರುತ್ತಾರೆ. ಈ ಸಮಯದಲ್ಲಿ, ಮಧುರಿಮಾ ಮನೆ ಮತ್ತು ಕುಟುಂಬದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ.
ವಿದೇಶ ಪ್ರವಾಸಕ್ಕೆ ಹೋದಾಗ ಅಥವಾ ಸಂಗೀತ ಕಚೇರಿ ಅಥವಾ ಕಾರ್ಯಕ್ರಮಕ್ಕಾಗಿ ಸೋನು ಬಟ್ಟೆಗಳನ್ನು ಮಾಧುರಿಮಾ ಸ್ವತಃ ವಿನ್ಯಾಸಗೊಳಿಸುತ್ತಾರೆ. ಮಾಧುರಿಮಾ ತನ್ನದೇ 'ಮಾಧುರಿಮಾ ನಿಗಮ್' ಎಂಬ ಬ್ರಾಂಡ್ ಅನ್ನು ಹೊಂದಿದ್ದಾರೆ.
ಹಿಂದಿ ಸಿನಿಮಾರಂಗದಿಂದ ಫೇಮ್‌ಗೆ ಬಂದ ನಿಗಮ್ ಸಾಕಷ್ಟು ಮುಂಗಾರು ಮಳೆಯಂಥ ಕನ್ನಡ ಚಿತ್ರಗಳಹಾಡುಗಳನ್ನೂ ಹಾಡಿ ಕನ್ನಡಿಗರ ಹೃದಯದಲ್ಲಿಯೂ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮುಂಗಾರು ಮಳೆ, ಮಿಲನ, ಮುಸ್ಸಂಜೆ ಮಾತು, ಸಂಜು ವೆಂಡ್ಸ್ ಗೀತಾ, ಗಾಳಿಪಟ, ಮಳೆಯಲ್ಲಿ ಜೊತೆಯಲ್ಲಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸೋನು ಹಾಡಿದ ಹಾಡು ಸಖತ್ ಹಿಟ್ ಆಗಿವೆ.