ಕೇವಲ 5500 ರೂಗಳೊಂದಿಗೆ ಮುಂಬೈಗೆ ಬಂದಿದ್ದ ಲಾಕ್‌ಡೌನ್‌ ಹೀರೋ ಸೋನುಸೂದ್‌

First Published | Jul 30, 2020, 4:53 PM IST

ಕೊರೋನಾ ಮತ್ತು ಲಾಕ್‌ಡೌನ್ ನಡುವೆ, ಬಡವರ ಪಾಲಿಗೆ  ನೆರವಾದ  ನಟ ಸೋನು ಸೂದ್ ಜುಲೈ 30 ರಂದು  47 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಜುಲೈ 30, 1973 ರಂದು ಮೊಗಾದಲ್ಲಿ ಜನಿಸಿದರು. ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರನ್ನು  ತಮ್ಮ ಮನೆಗಳಿಗೆ ಕಳುಹಿಸುವ  ವ್ಯವಸ್ಥೆ ಮಾಡಲು  ತುಂಬಾ ಶ್ರಮವಹಿಸಿದ್ದಾರೆನಟ. ಸೋನು ಸೂದ್ ಮುಂಬೈಗೆ ಬಂದಾಗ,  ಕೇವಲ ಐದುವರೆ ಸಾವಿರ ರೂಪಾಯಿಗಳನ್ನು ಹೊಂದಿದ್ದರಂತೆ. ಇಲ್ಲಿದೆ ನೋಡಿ   ಲಾಕ್‌ಡೌನ್‌ ಹೀರೋ ಸೋನುವಿನ ಲೈಫ್‌ನ ಹೋರಾಟದ ವಿವರಗಳು.

ಪಂಜಾಬ್ ಮೂಲದ ನಟ ಸೋನು ಸೂದ್ ಓದಿದ್ದು ನಾಗ್ಪುರದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್.
undefined
ಹೀರೋ ಆಗುವ ಕನಸು ಅವರನ್ನು ಮುಂಬೈಗೆ ಎಳೆತಂದಿತು.
undefined

Latest Videos


ಚಿತ್ರಗಳಲ್ಲಿ ಕೆಲಸ ಮಾಡುವ ಆಸೆಯೊಂದಿಗೆ ಸೋನು ಸೂದ್ ಮೊದಲ ಬಾರಿಗೆ ಮುಂಬೈಗೆ ಬಂದಾಗ ಸಿಂಗಲ್‌ ರೂಮ್‌ ಮನೆಯಲ್ಲಿ ಜೀವನ ಪ್ರಾರಂಭಿಸಿದರು.
undefined
ಈ ಕೋಣೆಯಲ್ಲಿ ಜೊತೆ 3-4 ಜನ ಇತರರು ವಾಸಿಸುತ್ತಿದ್ದರು. ಲೋಕಲ್‌ ಟ್ರೈನ್‌ನಲ್ಲಿ ಕೆಲಸದ ಹುಡುಕಾಡಲು ಓಡಾಡುತ್ತಿದ್ದರು ಸೋನು.
undefined
ಸರಿಯಾಗಿ, ಒಂದು ವರ್ಷದ ನಂತರ, ಅವರು ಹಿಂದಿಯಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಕೆಲಸ ಪಡೆದರು.
undefined
ಸೋನು 1999 ರಲ್ಲಿ ತೆಲುಗು ಚಿತ್ರ 'ಕಲ್ಲಾಜ್ಗರ್' ಮೂಲಕ ತಮ್ಮ ಸಿನಿ ಜರ್ನಿ ಪ್ರಾರಂಭಿಸಿದರು. ಆದರ ನಂತರವೂ ಸಿಕ್ಕಿದ್ದು ಕೇವಲ 4-5 ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅವಕಾಶ ಮಾತ್ರ.
undefined
2001 ರಲ್ಲಿ ಅಂತಿಮವಾಗಿ ಸೂನ್‌ಗೆ ಬಾಲಿವುಡ್‌ ಬಾಗಿಲು ತೆರೆಯಿತು.
undefined
ಹಳೆಯ ದಿನಗಳ ಬಗ್ಗೆ ಮಾತನಾಡುತ್ತಾ ದೆಹಲಿಯಲ್ಲಿ ಮಾಡೆಲಿಂಗ್‌ನಲ್ಲಿ ತಮ್ಮ ಕೆರಿಯರ್‌ ಪ್ರಾರಂಭಿಸಿದರು ಎಂದು ಹೇಳಿದರು.
undefined
ಸ್ವಲ್ಪ ಹಣ ಒಟ್ಟುಮಾಡಿಕೊಂಡು ನಂತರ ಮುಂಬೈಗೆ ಹೋಗುವುದು ಅವರ ಪ್ಲಾನ್‌ ಯೋಜನೆಯಾಗಿತ್ತು. ಒಂದೂವರೆ ವರ್ಷಗಳ ಕಾಲ ದೆಹಲಿಯಲ್ಲಿ ಶೋಗಳನ್ನು ಮಾಡಿದ ನಂತರ ಐದೂವರೆ ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಸೋನು ಹೇಳಿದ್ದರು.
undefined
ಮೊದಲ ಹಣವನ್ನು ಸಂಗ್ರಹಿಸಿದಾಗ ಸೋನು ಸೂದ್ ಮುಂಬೈನಲ್ಲಿ ಒಂದು ತಿಂಗಳು ಬದುಕಲು ಸಾಧ್ಯವಾಗುತ್ತದೆ ಎಂದು ಭಾವಿಸಿದರು, ಆದರೆ ಆ ಹಣ ಕೇವಲ 5-6 ದಿನಗಳಲ್ಲಿ ಖಾಲಿಯಾಯಿತಂತೆ.
undefined
ಮನೆಯಿಂದ ಸಹಾಯ ಪಡೆಯಬೇಕು ಎಂದು ಯೋಚಿಸಿತ್ತಿರುವಾಗ ಅವರ ಜೀವನದಲ್ಲಿ ನಿರೀಕ್ಷಿಸಿದ ಒಂದು ಪವಾಡ ನೆಡೆಯಿತು, ಮೊದಲ ಬ್ರೇಕ್‌ ದೊರೆಯಿತು. ಒಂದು ಜಾಹೀರಾತಿಗಾಗಿ ಕರೆ ಬಂತು. ಅದಕ್ಕೆ ಸೋನು ದಿನಕ್ಕೆ ಪಡೆದ ಹಣ 2000 ರೂಪಾಯಿಗಳು.
undefined
ಮುಂಬೈಗೆ 5500 ರೂಪಾಯಿಗಳನ್ನು ತಂದ ಸೋನು ಸೂದ್ ಅವರ ಒಟ್ಟು ಆಸ್ತಿ ಇಂದು ಸುಮಾರು 17 ಮಿಲಿಯನ್ ಡಾಲರ್‌ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಅ ಭಾರತೀಯ ಕರೆನ್ಸಿಯಾಗಿ ಪರಿವರ್ತಿಸಿದರೆ 30 ಕೋಟಿ.
undefined
ತಮ್ಮ ಮನೆಯನ್ನು ಸ್ವರ್ಗವೆಂದು ಭಾವಿಸುತ್ತೇನೆ ಸೋನು ಸೂದ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಲಾಕ್‌ಡೌನ್‌ ಹೀರೋವಿನ ಐಷಾರಾಮಿ ಮನೆ , ನಾಲ್ಕು ಬೆಡ್‌ರೂಮ್‌ ಮತ್ತು ಹಾಲ್ ಹೊಂದಿರುವ 2600 ಚದರ ಅಡಿ ವಿಸ್ತೀರ್ಣದ ಅಪಾರ್ಟ್ಮೆಂಟ್ ಆಗಿದೆ.
undefined
ಸೋನ್‌ ಸೂದ್‌ ಫ್ಯಾಮಿಲಿ ಫೋಟೊ.
undefined
click me!