ಅಷ್ಟಕ್ಕೂ ಈ ಬಾಲಿವುಡ್ ನಟಿಯರಿಗೆ ಐಶ್ವರ್ಯಾ ರೈ ಕಂಡರೇಕೆ ಇಷ್ಟು ಉರಿ?

First Published | Nov 24, 2020, 3:24 PM IST

ಬ್ಯೂಟಿ ವಿತ್‌ ಬ್ರೈನ್‌ ಐಶ್ವರ್ಯಾ ರೈ ಇಷ್ಟಪಡದಿರುವರು ವಿರಳ. ಇಡೀ ವಿಶ್ವದಲ್ಲೇ ಮೆಚ್ಚುಗೆ ಗಳಿಸಿದ್ದಾರೆ ಈ ಸುಂದರಿ. ಆದರೆ ಕೆಲವು ಸೆಲೆಬ್ರೆಟಿಗಳು ಇವರ ಬಗ್ಗೆ  ಬೇರೆ ರೀತಿಯೇ ಯೋಚಿಸುತ್ತಾರೆ. ಬಾಲಿವುಡ್‌ನ ಸ್ಟಾರ್‌ಗಳಾದ ಕರೀನಾ ಕಪೂರ್, ಸೋನಮ್‌ ಕಪೂರ್‌, ಹೃತಿಕ್‌ ರೋಶನ್‌ ಮೊದಲಾದವರು ಐಶ್‌ ಮೇಲೆ ಟೀಕೆ ಮಾಡಿದ್ದಾರೆ. 

ಬಾಲಿವುಡ್‌ನ ಅನೇಕ ಸ್ಟಾರ್‌ಗಳುಐಶ್ವರ್ಯಾ ರೈ ಮೇಲೆ ವಾಗ್ದಾಳಿ ನೆಡೆಸಿದ್ದಾರೆ. ಸೋನಮ್ ಕಪೂರ್ ನಿಂದ ವಿವೇಕ್ ಒಬೆರಾಯ್, ಎಮ್ರಾನ್ ಹಶ್ಮಿವರೆಗೆ ಎಲ್ಲರೂ ಈ ಸುಂದರ ನಟಿಯನ್ನು ಟೀಕಿಸಿದವರೇ.
ಪ್ಲಾಸ್ಟಿಕ್ ಫೇಸ್‌, ಪ್ಲಾಸ್ಟಿಕ್‌ ಹಾರ್ಟ್‌,ಆಂಟಿ ಮುಂತಾದ ಹೆಸರಿನಿಂದ ನಟಿಯ ಕಾಲೆಲೆದಿದ್ದಾರೆ. ಒಮ್ಮೆ ಕರೀನಾ ಕಪೂರ್ ಕೂಡ ಐಶ್ವರ್ಯಾ ಬಗ್ಗೆ ಕೇವಲವಾಗಿ ಮಾತನಾಡಿದ್ದು ಸುದ್ದಿಯಾಗಿತ್ತು.
Tap to resize

ಐಶ್ವರ್ಯಾ ರೈ ಪ್ರೆಗ್ನೆಂಟ್‌ ಆದ ಕಾರಣದಿಂದ ಮಾಧುರ್ ಭಂಡಾರ್ಕರ್‌ರ ಹೀರೊಯಿನ್‌ ಸಿನಿಮಾವನ್ನು ಬಿಟ್ಟ ನಂತರ ಆ ಪಾತ್ರ ಕರೀನಾ ಕಪೂರ್‌ಗೆ ಸಿಕ್ಕಿತು.
ಆ ಸಮಯದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಪತ್ರಿಕಾಗೋಷ್ಠಿಯಲ್ಲಿ ವರದಿಗಾರರು ಕರೀನಾ ಅವರನ್ನು ಐಶ್ವರ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಚಿತ್ರ ಎಷ್ಟು ವಿಭಿನ್ನವಾಗಿರಬಹುದು ಎಂದು ಕೇಳಿದ್ದರು.'ಐಶ್ ಅದ್ಭುತ ನಟಿ ಮತ್ತು ನಮ್ಮ ದೇಶದ ಐಕಾನ್. ನಮ್ಮಿಬ್ಬರ ಹೋಲಿಕೆ ಮಾಡುವುದು ಅನ್ಯಾಯ, ನಾವು ಎರಡು ವಿಭಿನ್ನ ತಲೆಮಾರಿನವರು' ಎಂದು ಉತ್ತರಿಸಿದ ಕರೀನಾ, ಐಶ್ವರ್ಯಾಗಿಂತ ತಾನು ಬಹಳ ಚಿಕ್ಕವಳೆಂದು ಹೇಳಿ ಕೊಂಡಿದ್ದರು.
ಅತ್ಯಂತ ವಿವಾದಾತ್ಮಕ ಸಂಗತಿಯೆಂದರೆ, ಯುವ ನಟಿ ಸೋನಮ್ ಕಪೂರ್ ಸಿನಿಯರ್‌ ನಟಿ ಐಶ್ವರ್ಯಾರನ್ನು ಗುರಿಯಾಗಿಸಿಕೊಂಡು ಮಾತಾನಾಡಿದ್ದು.
2011 ರಲ್ಲಿ ಪ್ರಕಟವಾದ ಹಳೆಯ ವರದಿಗಳ ಪ್ರಕಾರ, ಲೋರಿಯಲ್‌ನ ಬ್ರಾಂಡ್ ಅಂಬಾಸಿಡರ್‌ಗಳಾಗಿದ್ದ ಐಶ್ವರ್ಯಾ ಮತ್ತು ಸೋನಮ್ ಅವರು ಫ್ರಾನ್ಸ್‌ನಲ್ಲಿ ನಡೆದ ಕೇನ್ಸ್ ಚಲನಚಿತ್ರೋತ್ಸವದ ಪ್ರತಿಷ್ಠಿತ ರಾಂಪ್‌ನಲ್ಲಿ ನಡೆಯಬೇಕಿತ್ತು. 45 ವರ್ಷದ ಐಶ್ವರ್ಯಾ ರೈ 34 ವರ್ಷದ ಸೋನಮ್ ಅವರೊಂದಿಗೆ ರೆಡ್ ಕಾರ್ಪೆಟ್ ನಡೆಯಲು ನಿರಾಕರಿಸಿದ್ದರು.
'ಇದು ಎಲ್ಲಾ ಗಾಸಿಪ್‌ಗಳು.ನಾನು ಅದರಲ್ಲಿ ಯಾವುದನ್ನೂ ಹೇಳಲಿಲ್ಲ. ನಾನು ಇನ್ನು ಮುಂದೆ ಅದರ ಬಗ್ಗೆ ಹೇಳಲು ಬಯಸುವುದಿಲ್ಲ. ಬಹಳಷ್ಟು ಮುದ್ರಿಸಲಾಗಿದೆ ಮತ್ತು ಹೇಳಲಾಗಿದೆ ಮತ್ತು ಇವೆಲ್ಲವೂ ತುಂಬಾ ಸುಳ್ಳು ಮತ್ತು ಹೊಲಸಾಗಿದೆ. ನಾನು ಐಶ್ವರ್ಯಾರನ್ನು ಗೌರವಿಸುತ್ತೇನೆ. ಆದರೆ ನಾನು ಅವರನ್ನು ಎಂದಿಗೂ ಆಂಟಿ ಎಂದು ಕರೆಯುವುದಿಲ್ಲ,' ಆರೋಪಗಳಿಗೆ ತೆರೆ ಎಳೆಯಲು ಯತ್ನಿಸಿದ್ದರು ನೀರಜಾ ನಟಿ.
ಹೇಗಾದರೂ, ಸೋನಂ ಆ ಕಾಮೆಂಟ್‌ನಿಂದಾಗಿ ಕೇನ್ಸ್‌ನ ರೆಡ್ ಕಾರ್ಪೆಟ್ ಮೇಲೆ ಆ ವರ್ಷ ನಡೆಯುವ ಅವಕಾಶವನ್ನು ಕಳೆದು ಕೊಂಡಿರಬಹುದು. ವದಂತಿಗಳ ಪ್ರಕಾರ, ಕೋಪಗೊಂಡ ಐಶ್ವರ್ಯಾ ರೈ ಲೋರಿಯಲ್‌ನ ಟಾಪ್‌ ಅಧಿಕಾರಿಗಳೊಂದಿಗೆ ಲಾಬಿ ಮಾಡಿ ಸೋನಂನನ್ನು ಆ ಫಂಕ್ಷನ್‌ನಿಂದ ಹೊರಹಾಕಿದರು.
ದೀರ್ಘಕಾಲದಿಂದ ರಾಯಭಾರಿಯಾಗಿದ್ದ ಐಶ್ವರ್ಯಾ, ಅದೇ ವೇದಿಕೆಯನ್ನು ಹಂಚಿಕೊಳ್ಳಲು ಸೋನಮ್‌ಗೆ ಅವಕಾಶ ನೀಡಿದರೆ ಲೋರಿಯಲ್‌ ಅನ್ನು ತೊರೆಯುವುದಾಗಿ ಬೆದರಿಕೆ ಹಾಕಿದರು ಎಂದು ಮೂಲಗಳು ಹೇಳುತ್ತವೆ.

Latest Videos

click me!