ನಟಿ ಸೋನಮ್ ಕಪೂರ್ ತನ್ನ ಇನ್ಸ್ಟಾಗ್ರಾಮ್ ಸ್ಟೋರೀಸ್‌ಗೆ ತನ್ನದೇ ಬೂಮ್‌ರಂಗ್ ವೀಡಿಯೊವನ್ನು ಶೇರ್ ಮಾಡಿದ್ದಾರೆ.
ಹೊಚ್ಚ ಹೊಸ ಅವತಾರದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಫಿಲ್ಟರ್ ಸಹಾಯದಿಂದ ಅವರು ನೇರಳೆ ಕೂದಲನ್ನು ಟ್ರೈ ಮಾಡಿದ್ದಾರೆ.
ಪತಿ ಆನಂದ್ ಅಹುಜಾ ಅವರ ಕಾರಣದಿಂದಾಗಿ ಮಾತ್ರ ಅವರು ಹಾಗೆ ಮಾಡಿದ್ದಾರೆಂದೂ ಹೇಳಿದ್ದಾರೆ.
ಪೋಸ್ಟ್ ಹಂಚಿಕೊಂಡ ಅವರು,ಆನಂದ್ ಅಹುಜಾಗೆ ನೇರಳೆ ಮತ್ತು ಹಳದಿ" ಎಂದು ಬರೆದಿದ್ದಾರೆ.
ನೇರಳೆ ಅಲೆಗಳಲ್ಲಿ ನಟಿಯ ಉದ್ದನೆಯ ಕೂದಲು ಮೃದುವಾಗಿ ಬೀಳುತ್ತಿರುವುದನ್ನು ಕಾಣಬಹುದು.
ಸೋನಮ್ ತನ್ನ ಮುಂಬರುವ ಚಿತ್ರ ಬ್ಲೈಂಡ್ ಇನ್ ಗ್ಲ್ಯಾಸ್ಗೋ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
ಕಳೆದ ಜುಲೈನಿಂದ ಸೋನಮ್ ಭಾರತದಿಂದ ದೂರವಿದ್ದಾರೆ.
ಮುಂಬೈಯಲ್ಲಿರುವ ತನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
Suvarna News