ಐಶ್ವರ್ಯಾ ರೈಗೆ ಆಂಟಿ ಎಂದಿದ್ದ ಸೋನಂ ಕಪೂರ್‌!

First Published Jun 9, 2020, 6:40 PM IST

ಬಾಲಿವುಡ್‌ನ ಫ್ಯಾಷನ್ ಐಕಾನ್ ಎಂದೇ ಫೇಮಸ್‌ ಅನಿಲ್‌ ಕಪೂರ್‌ ಪುತ್ರಿ ಸೋನಮ್ ಕಪೂರ್. 9 ಜೂನ್ 1985 ರಂದು ಮುಂಬೈನಲ್ಲಿ ಜನಿಸಿದ ಸೋನಂಗೆ  35 ವರ್ಷದ ಸಂಭ್ರಮ. ವೃತ್ತಿಜೀವನವನ್ನು ಸಾವಾರಿಯಾ ಚಿತ್ರದೊಂದಿಗೆ ಪ್ರಾರಂಭಿಸಿದ ಇವರು ನಂತರ  ತಮ್ಮ ಕಠಿಣ ಪರಿಶ್ರಮದಿಂದ ಬಾಲಿವುಡ್‌ನಲ್ಲಿ ನೆಲೆಕಂಡು ಕೊಂಡಿದ್ದಾರೆ. ನೀರ್ಜಾ ಚಿತ್ರಕ್ಕಾಗಿ ಸೋನಮ್‌ಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಆಗಾಗ್ಗೆ ತನ್ನ ಹೇಳಿಕೆಗಳಿಂದ ಚರ್ಚೆಯಲ್ಲಿರುತ್ತಾರೆ ಈ ನಟಿ ಹಾಗೂ  ಕಾರಣಕ್ಕಾಗಿ  ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ.

ಫ್ಯಾಷನ್ ಐಕಾನ್ ಎಂದೇ ಫೇಮಸ್‌ ಅನಿಲ್‌ ಕಪೂರ್‌ ಪುತ್ರಿ ಸೋನಮ್ ಕಪೂರ್.
undefined
ಆಗಾಗ್ಗೆ ತನ್ನ ಹೇಳಿಕೆಗಳಿಗೆ ಟ್ರೋಲ್‌ಗೆ ಗುರಿಯಾಗುತ್ತಾರೆ ಈ ನಟಿ.
undefined
ಸೋನಮ್‌ ಒಮ್ಮೆ ಐಶ್ವರ್ಯಾ ರೈ ಬಚ್ಚನ್‌ಗೆ ಆಂಟಿ ಎಂದುಕರೆದು, ಐಶ್ವರ್ಯಾಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ಜನರೇಷನ್‌ ಗ್ಯಾಪ್‌ ನೋಡಿದ ನಂತರ ಹೇಳಿದ್ದು - ಐಶ್ವರ್ಯಾ ನನ್ನ ತಂದೆಯೊಂದಿಗೆ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಹಾಗಾಗಿ ನಾನು ಅವರನ್ನು ಆಂಟಿ ಎಂದೇ ಕರೆಯುತ್ತೇನೆ ಅಲ್ವಾಎಂದು ಸ್ಪಷ್ಟೀಕರಣ ನೀಡಿದ್ದರು.
undefined
ಸೋನಮ್ ಕಪೂರ್ ಯಾವಾಗಲೂ ಫ್ಯಾಷನ್ ಸೆನ್ಸ್‌ ಮತ್ತು ಸ್ಟೈಲ್‌ಗೆ ಹೆಸರುವಾಸಿ. ಅದರ ಜೊತೆಗೆ ಇತರರಿಗೆ ಫ್ಯಾಷನ್ ಟಿಪ್ಸ್ ನೀಡುವಲ್ಲಿ ಸಹ ಹಿಂದೆ ಇಲ್ಲ. ಹಾಗೆ ಮಾಡುವಾಗ, ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ ಆಗುತ್ತಾರೆ.ಕರಣ್ ಜೋಹರ್ ಚಾಟ್ ಶೋನಲ್ಲಿ ಪರಿಣಿತಿ ಚೋಪ್ರಾ ಟೈಟ್‌ ಡ್ರೆಸ್‌ ಧರಿಸಬಾರದು ಎಂದು ಕಾಮೆಂಟ್‌ ಮಾಡಿದ್ದರು ನಟಿ.
undefined
ಆಲಿಯಾ ಭಟ್ ತಮ್ಮ ವಯಸ್ಸಿಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಬೇಕೆಂದು ಹೇಳಿದ್ದರು. ಆಲಿಯಾ ಫ್ಯಾನ್ಸ್‌ಗೆ ಸೋನಮ್‌ರ ಈ ಸಲಹೆಯನ್ನು ಹೆಚ್ಚು ಇಷ್ಟವಾಗದೆ ಟ್ರೋಲ್ ಮಾಡಿದ್ದರು.
undefined
ಪಾಕಿಸ್ತಾನದ ಮೂಲಭೂತವಾದಿ ಮುಸ್ಲಿಮರು ಮತ್ತು ಭಾರತದ ಕೆಲವು ಮೂಲಭೂತ ಹಿಂದೂಗಳ ಬಗ್ಗೆ ಸೋನಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದ ಕಾರಣದಿಂದ ನಟಿಯನ್ನು ರಾಷ್ಟ್ರ ವಿರೋಧಿ ಮತ್ತು ಹಿಂದೂವಿರೋಧಿ ಎಂದು ಕರೆಯಲಾಯಿತು.
undefined
ಚಿತ್ರರಂಗಕ್ಕೆ ಸೇರುವ ಮೊದಲು ಸೋನಮ್ ಟೀನೇಜ್‌ನಲ್ಲಿ ಒಬ್ಬ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಆತ ಸೋನಮ್‌ಳ ಅತಿಯಾದ ದೇಹ ತೂಕದ ಬಗ್ಗೆ ಕೀಳಾಗಿ ಮಾತಾನಾಡಿದ್ದು, ಬ್ರೇಕಪ್‌ಗೆ ಕಾರಣವಾಯಿತು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಆದರೆ, ಆ ಗೆಳೆಯ ಯಾರೆಂದು ಈವರೆಗೂ ನಟಿ ಬಹಿರಂಗಪಡಿಸಿಲ್ಲ.
undefined
ಮೊದಲ ಸಿನಿಮಾ ಸಾವರಿಯಾ ಸೂಪರ್ ಫ್ಲಾಪ್‌ ಆಗಿತ್ತು. ಆದರೆ ಸೋನಮ್ ನಿರಾಶೆಗೊಳ್ಳದೆ ಹಾರ್ಡ್‌ವರ್ಕ್‌ನಿಂದ ಯಶಸ್ಸು ಗಳಿಸಿದ್ದರು.
undefined
ನಂತರ ಸೋನಮ್‌ ನಟಿಸಿದ ಸಿನಿಮಾಗಳ ಪಟ್ಟಿ ಉದ್ದವಾಗಿದೆ -ದೆಹಲಿ 6, ಐ ಹೇಟ್ ಲವ್ ಸ್ಟೋರೀಸ್, ಆಯೆಷಾ, ಮೌಸಮ್, ಪ್ಲೇಯರ್ಸ್, ರಂಜನಾ, ಭಾಗ್ ಮಿಲ್ಖಾ ಭಾಗ್, ಸುಂದರ್, ಡಾಲಿ ಕಿ ಡೋಲಿ, ಪ್ರೇಮ್ ರತನ್ ಧನ್ ಪಾಯೊ, ನೀರ್ಜಾ, ವೀರಾ ದೆ ವೆಡ್ಡಿಂಗ್, ಸಂಜು ಮುಂತಾದವು.
undefined
ಮೊದಲ ಸಿನಿಮಾ ನಾಯಕ ರಣಬೀರ್ ಕಪೂರ್ ಜೊತೆ ಸೋನಮ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ ಇವರ ಸಂಬಂಧ ಹೆಚ್ಚು ದಿನ ನೆಡೆಯಲಿಲ್ಲ.ಬ್ರೇಕಪ್‌ಗೆ ದೀಪಿಕಾ ಪಡುಕೋಣೆ ಕಾರಣ ಎಂದು ನಂಬಲಾಗಿದೆ. ಆದರೆ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ.
undefined
2018ರಲ್ಲಿ ಸೋನಮ್ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾರೊಂದಿಗೆ ಮ್ಯಾರೀಡ್‌ ಲೈಫ್‌ ಶುರುಮಾಡಿದರು.
undefined
click me!