Lakme ಫ್ಯಾಶನ್ ವೀಕ್‌ನಲ್ಲಿ Ramp Walk ಮಾಡಿದ ಸೆಲೆಬ್ರೆಟಿಗಳು

Published : Oct 14, 2022, 07:12 PM IST

ದೇಶದ ಅತ್ಯಂತ ಪ್ರಸಿದ್ಧ ಫ್ಯಾಷನ್ ಶೋ ಲ್ಯಾಕ್ಮೆ ಫ್ಯಾಶನ್ ವೀಕ್ 2022, (Lakme Fashion Week 2022) ಪ್ರಾರಂಭವಾಗಿದೆ. ಅಕ್ಟೋಬರ್ 12 ರಿಂದ 16 ರವರೆಗೆ ಐದು ದಿನಗಳ ಪ್ರದರ್ಶನದಲ್ಲಿ ಖ್ಯಾತ ಫ್ಯಾಷನ್ ವಿನ್ಯಾಸಕರು ತಮ್ಮ ವಿನ್ಯಾಸಗಳನ್ನು ಪ್ರದರ್ಶಿಸುತ್ತಾರೆ. ಈವೆಂಟ್‌ನಲ್ಲಿ ಪ್ರಸಿದ್ಧ ವಿನ್ಯಾಸಕರಾದ ಶಾಂತನು ಮತ್ತು ನಿಖಿಲ್, ಅಂಜು ಮೋದಿ, ಗೌರಿ ಮತ್ತು ನೈಂಕಾ, ಅಮಿತ್ ಅಗರ್ವಾಲ್, ಗೌರವ್ ಗುಪ್ತಾ ಮತ್ತು ನಚಿಕೇತ್ ಬರ್ವೆ ಅವರಂತಹ ಪ್ರಸಿದ್ಧ ನಟ-ನಟಿಯರು Ramp Walk ಮಾಡುತ್ತಾರೆ. ಅಲ್ಲಿ ಮೊದಲ ದಿನದ ಗ್ರ್ಯಾಂಡ್ ಓಪನಿಂಗ್ ಬ್ಲಿಂಗಿ ಕಾಕ್‌ಟೈಲ್ ಡ್ರೆಸ್‌ಗಳು, ರೇಷ್ಮೆ ಸಿಲ್ಹೌಟ್‌ಗಳು ಮತ್ತು ಸಾಕಷ್ಟು ಗ್ಲಾಮ್ ವಿನ್ಯಾಸಗಳು ಕಂಡಬಂದವು. ಪ್ರದರ್ಶನದ ಎರಡನೇ ದಿನದಂದು, ವಾರೀನ್ ಹುಸೇನ್, ಕನಿಕಾ ಕಪೂರ್ ಮತ್ತು ಸಂಜನಾ ಸಂಘಿ ಶೋಸ್ಟಾಪರ್ಸ್ ಆಗಿದ್ದ ಎರಡು ಶೋಗಳು ಇದ್ದವು. ಈ ಫ್ಯಾಷನ್ ಶೋನ ಕೆಲವು ಫೋಟೋಗಳು ಇಲ್ಲಿವೆ.    

PREV
15
Lakme ಫ್ಯಾಶನ್ ವೀಕ್‌ನಲ್ಲಿ  Ramp Walk ಮಾಡಿದ ಸೆಲೆಬ್ರೆಟಿಗಳು

ಎರಡನೇ ದಿನ, ಡಿಸೈನರ್ ಅಂಜು ಮೋದಿ ಅವರು ವಿನ್ಯಾಸಗೊಳಿಸಿದ ಔಟ್ ಫಿಟ್‌ಗಳನ್ನು ಪ್ರದರ್ಶಿದರು.,  ರಾಕ್‌ಸ್ಟಾರ್, ಬಾರ್ ಬಾರ್ ದೇಖೋ, ಹಿಂದಿ ಮೀಡಿಯಂ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡ ಸಂಜನಾ ಸಂಘಿ ಇವರ ಶೋ ಸ್ಟಾಪರ್‌ ಆಗಿ ರಾಂಪ್ ಮೇಲೆ ಹೆಜ್ಜೆ ಹಾಕಿದರು. ಸಂಜನಾ ಮರಾಠಿ ಲುಕ್‌ನಲ್ಲಿ ವೇದಿಕೆಯ ಮೇಲೆ ಕಾಣಿಸಿಕೊಂಡರು.ಅವರು ಮಹಾರಾಷ್ಟ್ರೀಯ ರೀತಿಯ ಮೆರೂನ್ ಬ್ಲೌಸ್‌ನ ಮೇಲೆ ಕಪ್ಪು ಸೀರೆ ಧರಿಸಿದ್ದರು, ಜೊತೆಗೆ ಗೋಲ್ಡನ್ ಎಂಬ್ರಾಯ್ಡರಿ ವರ್ಕ್ ಹೊಂದಿರುವ ಕಪ್ಪು ಕ್ರಾಪ್ ಜಾಕೆಟ್ ಅನ್ನು ಧರಿಸಿದ್ದರು.

25

'ಬೇಬಿ ಡಾಲ್...' ಮತ್ತು 'ಬೂಟ್ ಪರ್ ಬೂಟಿ...' ಹಾಡುಗಳನ್ನು ಹಾಡಿರುವ ಗಾಯಕಿ ಕನಿಕಾ ಕಪೂರ್ ಸ್ಟೈಲಿಶ್ ಬ್ರೌನ್ ಕ್ರಾಪ್ ಟಾಪ್‌ನಲ್ಲಿ ರಾಂಪ್ ಅನ್ನು ಅಲಂಕರಿಸಿದರು. ಇದರೊಂದಿಗೆ ಅವರು ಉದ್ದವಾದ ಕಂದು ಬಣ್ಣದ ಸ್ಕರ್ಟ್ ಅನ್ನು ಪೇರ್‌ ಮಾಡಿದ್ದರು.


 

35

ಫ್ಯಾಷನ್ ಡಿಸೈನರ್ (Fashion Designer) ಮನಿಶಾ ಮಲ್ಹೋತ್ರಾ ಕೂಡ ಈ ಇವೆಂಟ್‌ನಲ್ಲಿ ಭಾಗವಹಿಸಿದ್ದರು. ಇವರೊಂದಿಗೆಗೆ 'ಬಿಗ್ ಬಾಸ್' (Bigg Boss) ಮೊದಲ ಸೀಸನ್ ನ ರನ್ನರ್ ಅಪ್ ಆಗಿದ್ದ ಮಾಡೆಲ್ ಕರೋಲ್ ಗ್ರಾಸಿಯಾಸ್ ಕೂಡ ರಾಂಪ್ ವಾಕ್ ಮಾಡಿದ್ದು ಕಂಡುಬಂತು.


 

45

ಫ್ಯಾಷನ್ ಡಿಸೈನರ್ ಶಾಂತನು ಮತ್ತು ನಿಖಿಲ್ ಅವರ ಸಮಾರೋಪ ಸಮಾರಂಭದಲ್ಲಿ ನಟಿ ಕೃತಿ ಸನೊನ್ ಕಾಣಿಸಿಕೊಂಡರು. ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ರಾಂಪ್ ವಾಕ್ ಮಾಡುವ ಮೂಲಕ ನಟಿ ಪ್ರೇಕ್ಷಕರು ಮತ್ತು ಅಭಿಮಾನಿಗಳ ಹೃದಯವನ್ನು ಗೆದ್ದರು. ಇವರಲ್ಲದೆ ಜಾವೇದ್ ಜಾಫ್ರಿ ಅವರ ಪುತ್ರ ಮೀಜನ್ ಜಾಫ್ರಿ ಕೂಡ ಉಪಸ್ಥಿತರಿದ್ದರು.

55

ಮತ್ತೊಂದೆಡೆ, ವಾರಿನಾ ಹುಸೇನ್ ಬಹುವರ್ಣದ ಉಡುಪಿನಲ್ಲಿ ರಾಂಪ್ ಮೇಲೆ ಕಾಣಿಸಿಕೊಂಡರು. ಅವರು ಮ್ಯಾಚಿಂಗ್ ಪ್ಯಾಂಟ್ ಮತ್ತು ಕ್ರಾಪ್ ಟಾಪ್ ಜೊತೆಗೆ ಲಾಂಗ್ ಕೋಟ್ ಅನ್ನು ಸಹ ಧರಿಸಿದ್ದರು. ವಾರಿನಾಳ ಈ ಕೂಲ್ ಲುಕ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories