ಸಲಾಂ ಬಾಂಬೆ - ಕಾಮಸೂತ್ರ: ನಿರ್ದೇಶಕಿ ಮೀರಾ ನಾಯರ್ ಬಗ್ಗೆ ಇಂಟರೆಸ್ಟಿಂಗ್‌ ಸಂಗತಿಗಳು

First Published Oct 16, 2022, 11:32 AM IST

'ಸಲಾಮ್ ಬಾಂಬೆ', 'ಮಿಸ್ಸಿಪ್ಪಿ ಮಸಾಲಾ', 'ಕಾಮಸೂತ್ರ' ಮತ್ತು 'ದಿ ನೇಮ್‌ಸೇಕ್' ಚಿತ್ರಗಳನ್ನು ನಿರ್ಮಿಸಿರುವ ನಿರ್ದೇಶಕಿ ಮೀರಾ ನಾಯರ್ (Mira Nair)ಅವರು ಅಕ್ಟೋಬರ್ 15, ಶನಿವಾರದಂದು ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1979 ರಲ್ಲಿ 'ಜಾಮಾ ಸ್ಟ್ರೀಟ್ ಮಸೀದಿ ಜರ್ನಲ್' ಸಾಕ್ಷ್ಯಚಿತ್ರದಿಂದ 2020 ರಲ್ಲಿ ಬಿಡುಗಡೆಯಾದ 'ದಿ ಸೂಟಬಲ್ ಬಾಯ್' ಟಿವಿ ಸರಣಿಯವರೆಗೆ, ಮೀರಾ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರಗಳನ್ನು ನಿರ್ಮಿಸಿದರು ಮತ್ತು ಅನೇಕ ದೊಡ್ಡ ಪ್ರಶಸ್ತಿಗಳನ್ನು ಗೆದ್ದರು. ಈ ನಡುವೆ  ಕೆಲವು ಚಿತ್ರಗಳು ವಿವಾದಾತ್ಮಕವಾಗಿದ್ದವು, ಆದರೆ ಕೆಲವು ಚಿತ್ರಗಳು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿವೆ.  ಮೀರಾ ಅವರ ಸಿನಿಮಾ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ .

 ಒಡಿಶಾದ ರೂರ್ಕೆಲಾದಲ್ಲಿ ಜನಿಸಿದ ಮೀರಾ ದೆಹಲಿಯಲ್ಲಿ ತಮ್ಮ ಆರಂಭಿಕ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ನಂತರ ಶಿಮ್ಲಾದಲ್ಲಿ  ತಮ್ಮ ಶಾಲಾ ಶಿಕ್ಷಣವನ್ನು ಮುಂದುವರೆಸಿದರು. ಶಾಲಾ ದಿನಗಳಿಂದಲೂ ಮೀರಾ ಅವರ ಆಸಕ್ತಿ ಸಾಹಿತ್ಯದ ಮೇಲಿತ್ತು. ನಂತರ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ಅಲ್ಲಿಂದ  ಅವರ ಒಲವು  ನಟನೆ ಕಡೆಗೆ ತಿರುಗಿತು. 

ಆರಂಭದಲ್ಲಿ ಮೀರಾಗೆ ನಟನೆಯಲ್ಲಿ ಆಸಕ್ತಿ ಇತ್ತು. ಅವರು ಬಂಗಾಳಿ ಕಲಾವಿದ ಬಾದಲ್ ಸರ್ಕಾರ್ ಬರೆದ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದಾದ ನಂತರ ಅವರಿಗೆ ಚಿತ್ರೀಕರಣದಲ್ಲಿ ಆಸಕ್ತಿ ಮೂಡಿತು ಮತ್ತು ಅವರು ಸಣ್ಣ ಸಾಕ್ಷ್ಯಚಿತ್ರಗಳನ್ನು ಮಾಡಲು ಪ್ರಾರಂಭಿಸಿದರು.

ಮೊದಲು ‘ಜಾಮಾ ಮಸೀದಿ ಸ್ಟ್ರೀಟ್ ಜನರಲ್’ ಎಂಬ ಕಪ್ಪು ಬಿಳುಪು ಸಿನಿಮಾ ಮಾಡಿದರು. 18 ನಿಮಿಷಗಳ ಈ ಚಿತ್ರದಲ್ಲಿ ಮೀರಾ ಹಳೆ ದೆಹಲಿಯ ಕಥೆಯನ್ನು ಹೇಳಿದ್ದಾರೆ. 1982 ರಲ್ಲಿ ಬಿಡುಗಡೆಯಾದ ಅವರ ಎರಡನೇ ಸಾಕ್ಷ್ಯಚಿತ್ರ 'ಸೋ ಫಾರ್ ಫ್ರಮ್ ಇಂಡಿಯಾ', ಅಮೇರಿಕನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ನೀಡಲಾಯಿತು.

ಹಲವಾರು ಸಾಕ್ಷ್ಯಚಿತ್ರಗಳನ್ನು ಮಾಡಿದ ನಂತರ, ಮೀರಾ 1983 ರಲ್ಲಿ ತನ್ನ ಮೊದಲ ಚಲನಚಿತ್ರ 'ಸಲಾಮ್ ಬಾಂಬೆ' ಕಥೆಯನ್ನು ಬರೆಯಲು ಪ್ರಾರಂಭಿಸಿದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ ಆದರೆ ಇದು 23 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ದಾಖಲೆಯನ್ನು ಮಾಡಿದೆ. ಈ ಚಿತ್ರವು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು ಮತ್ತು ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿತು. ಈ ಚಿತ್ರದಲ್ಲಿ ದಿವಂಗತ ನಟ ಇರ್ಫಾನ್ ಖಾನ್ ಕೂಡ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ.
 

1996 ರಲ್ಲಿ ಮೀರಾ ಅವರ 'ಕಾಮಸೂತ್ರ: ಎ ಟೇಲ್ ಆಫ್ ಲವ್' ಅನ್ನು ಐತಿಹಾಸಿಕ ಕಾಮಪ್ರಚೋದಕ ಪ್ರಣಯ ಚಿತ್ರವಾಗಿತ್ತು. ಚಿತ್ರದಲ್ಲಿ ಬಾಲಿವುಡ್ ನಟಿ ರೇಖಾ ಸೆಕ್ಸ್ ಗುರು ಪಾತ್ರದಲ್ಲಿ ನಟಿಸಿದ್ದಾರೆ. ಇದು ರೇಖಾ ಅವರ ಮೊದಲ ಇಂಗ್ಲಿಷ್ ಚಿತ್ರವಾಗಿತ್ತು. ಆದರೆ, ನಗ್ನತೆ ಮತ್ತು ಬೋಲ್ಡ್ ದೃಶ್ಯಗಳಿಂದಾಗಿ ಭಾರತದಲ್ಲಿ ಚಲನಚಿತ್ರವನ್ನು ನಿಷೇಧಿಸಲಾಯಿತು.

ಇದರ ನಂತರ ಮೀರಾ 'ಮಿಸಿಸಿಪ್ಪಿ ಮಸಾಲಾ', 'ಮಾನ್ಸೂನ್ ವೆಡ್ಡಿಂಗ್', 'ಕಾಮಸೂತ್ರ' ಮತ್ತು 'ದಿ ನೇಮ್ಸೇಕ್' ಮುಂತಾದ ಹಲವು ಚಿತ್ರಗಳನ್ನು ನಿರ್ದೇಶಿಸಿದರು. 2007 ರಲ್ಲಿ ಮೀರಾ 'ದಿ ನೇಮ್‌ಸೇಕ್' ಅನ್ನು ನಿರ್ದೇಶಿಸುತ್ತಿದ್ದಾಗ, 'ಹ್ಯಾರಿ ಪಾಟರ್' ಸರಣಿಯ ಐದನೇ ಚಿತ್ರವಾದ 'ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್' ಅನ್ನು ನಿರ್ದೇಶಿಸಲು ಆಫರ್ ಬಂದಿತು, ಆದರೆ ಅವರು ಅದನ್ನು ಅವರು ರಿಜೆಕ್ಟ್‌ ಮಾಡಿದ್ದರು.

2008 ರಲ್ಲಿ, ಮೀರಾ ಹಾಲಿವುಡ್ ಚಿತ್ರ 'ಪೈರೇಟ್ಸ್ ಆಫ್ ದಿ ಕೆರಿಬಿಯನ್' ಖ್ಯಾತಿಯ ಜಾನಿ ಡೆಪ್ ಮತ್ತು ಹಿಂದಿ ಚಿತ್ರರಂಗದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸುವ ಚಿತ್ರವನ್ನು ಮಾಡಲು ಹೊರಟಿದ್ದಾರೆ ಎಂದು ಚರ್ಚೆಯಾಗಿತ್ತು.  ಚಿತ್ರದ ಹೆಸರು 'ಶಾಂತಾರಾಮ್' ಇದು ಸತ್ಯ ಘಟನೆಗಳ ಕುರಿತು ಬರೆದ ಕಾದಂಬರಿಯನ್ನು ಆಧರಿಸಿದೆ.  ಜಾನಿ ಡೆಪ್ ಅವರೇ ಈ ಚಿತ್ರದ ನಿರ್ಮಾಪಕರಾಗಲು ಸಿದ್ಧರಾಗಿದ್ದರು. ಚಿತ್ರದ ಶೂಟಿಂಗ್ ಫೆಬ್ರವರಿ 2008 ರಲ್ಲಿ ಪ್ರಾರಂಭವಾಗಬೇಕಿತ್ತು, ಆದರೆ ಬರಹಗಾರರ ಮುಷ್ಕರದಿಂದಾಗಿ, ಚಲನಚಿತ್ರವನ್ನು ಸೆಪ್ಟೆಂಬರ್‌ಗೆ ಮುಂದೂಡಲಾಯಿತು. ನಂತರ ಈ ಚಿತ್ರವು ಒಂದಲ್ಲ ಒಂದು ಕಾರಣದಿಂದ ಮುಂದೂಡಲ್ಪಟ್ಟಿತು ಮತ್ತು ಅಂತಿಮವಾಗಿ ಈ ಚಿತ್ರವು ಮಾಡಲೇ ಇಲ್ಲ.
 

ಮೀರಾ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು ಮತ್ತು ಇದರೊಂದಿಗೆ ಅವರು 2012 ರಲ್ಲಿ ದೇಶದ ಮೂರನೇ ಅತ್ಯಂತ ಗೌರವಾನ್ವಿತ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದರು. ಮೀರಾ ಕಳೆದ ಹಲವು ವರ್ಷಗಳಿಂದ ಆಕೆಯೇ ಯೋಗಾಭ್ಯಾಸ ಮಾಡುತ್ತಿದ್ದು, ಚಿತ್ರವೊಂದಕ್ಕೆ ತನ್ನ ತಾರಾಬಳಗ ಮತ್ತು ಸಿಬ್ಬಂದಿಯನ್ನು ಅಂತಿಮಗೊಳಿಸಿದಾಗಲೆಲ್ಲಾ ಸೆಟ್‌ನಲ್ಲಿ ಪ್ರತಿದಿನ ಎಲ್ಲರ ಜೊತೆ ಯೋಗದೊಂದಿಗೆ ಪ್ರಾರಂಭವಾಗುತ್ತದೆ. 2020 ರಲ್ಲಿ ಬಿಡುಗಡೆಯಾದ ಟಿವಿ ಸರಣಿ 'ದಿ ಸೂಟಬಲ್ ಬಾಯ್' ಮೀರಾ ಅವರ ಕೊನೆಯ ಸರಣಿಯಾಗಿದೆ. ಇದರಲ್ಲಿ ಇಶಾನ್ ಖಟ್ಟರ್ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೀರಾ ವಿಶ್ರಾಂತಿಯಲ್ಲಿದ್ದರು.
 

click me!