ಹನ್ಸಿಕಾ ಮದುವೆಯಾಗುತ್ತಿರುವ ಅರಮನೆ ಹೇಗಿದೆ ಗೊತ್ತಾ? ನೋಡಿದ್ರೆ ಕಳೆದೋಗ್ತೀರಾ

Published : Dec 02, 2022, 01:10 PM ISTUpdated : Dec 02, 2022, 01:14 PM IST

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಕಥರಿಯಾ ಮದುವೆ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ನಡೆಯುತ್ತಿದೆ. 

PREV
18
ಹನ್ಸಿಕಾ ಮದುವೆಯಾಗುತ್ತಿರುವ ಅರಮನೆ ಹೇಗಿದೆ ಗೊತ್ತಾ? ನೋಡಿದ್ರೆ ಕಳೆದೋಗ್ತೀರಾ

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈಗಾಗಲೇ ಮದುವೆ ಸಮಾರಂಭ ಪ್ರಾರಂಭವಾಗಿದೆ. ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಕಥರಿಯಾ ಮದುವೆ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ನಡೆಯುತ್ತಿದೆ. ಅತೀ ಪುರಾತನವಾದ ಅರಮನೆ ಇದಾಗಿದೆ. ಐಷಾರಾಮಿಯಾಗಿದ್ದು ಅರಮನೆ ಒಳಗಡೆಯ ದೃಶ್ಯ ನೋಡಿದ್ರೆ ನಿಜಕ್ಕೂ ಕಳೆದು ಹೋಗುತ್ತೀರಿ. 

28

ಮಂಡೋಟಾ ಅರಮನೆ ಪ್ರಾಚೀನ ನಂಬಿಕೆಗಳು, ಗಾಲ್ಫ್ ಕೋರ್ಟ್, ಐಷಾರಾಮಿಯೊಂದಿಗೆ ಪರಂಪರೆ ತಾಣವಾಗಿದೆ. ಇದು ಕನಸಿನ ಅರಮನೆ. ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ, ಸುಂದರ ಕೋಟೆಯನ್ನು ಕಣ್ತುಂಬಿ ಕೊಳ್ಳುತ್ತಾರೆ. ಅಂದಹಾಗೆ ಮಂಡೋಟಾ ಕೋಟೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಆರು ಗಂಟೆಗಳ ಸಮಯ ಪಯಣ. 

38
Hansika Motwani

ಮಂಡೋಟಾ ಅರಮನೆ  ಜೈಪುರದ ಅಮೇರ್‌ ಪ್ರದೇಶದಲ್ಲಿದೆ. ಇದೊಂದು ಹಳ್ಳಿಯ ಹೆಸರು. ಸುಮಾರು ಐದರಿಂದ ಆರು ಸಾವಿರ ಜನಸಂಖ್ಯೆಯ ಈ ಗ್ರಾಮ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. 

48

ಹತ್ತು ಎಕರೆಗಳಷ್ಟು ಹರಡಿರುವ ಈ ಹವೇಲಿಯು ಪರಂಪರೆ ಮತ್ತು ಐಷಾರಾಮಿ ಎರಡರ ಅದ್ಭುತ ಮಿಶ್ರಣವಾಗಿದೆ. ಅದ್ಭುತವಾದ ರೀತಿಯಲ್ಲಿ ನಿರ್ವಹಿಸಲಾಗಿದೆ ಅದು ಪಂಚತಾರಾ ಅನುಭವವನ್ನು ನೀಡುತ್ತದೆ. ಕೋಟೆಯು 11 ಸೂಟ್‌ಗಳನ್ನು ಹೊಂದಿದೆ, ಇದರಲ್ಲಿ ಸಣ್ಣ ಮತ್ತು ದೊಡ್ಡ, ಅನೇಕ ದೊಡ್ಡ ಲಾಂಜ್‌ಗಳು, ಸಭಾಂಗಣಗಳು ಮತ್ತು ವಿವಿಧ ಕಾರ್ಯಕ್ರಮಗಳು ನಡೆಯುವ ಇತರ ಸ್ಥಳಗಳು ಸೇರಿವೆ.

58

ಈ ಅರಮನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಭಾಗವು ಸೂಟ್ ಮತ್ತು ಒಂದು ಭಾಗವು ಯುದ್ಧದ ಕೋಟೆಯಾಗಿದೆ. ಸುಮಾರು ನಾಲ್ಕೂವರೆ ನೂರು ವರ್ಷಗಳ ಹಿಂದೆ ನರುಕ ರಜಪೂತ ರಾಜರು ನೆಲೆಸಿದ್ದರು ಎಂದು ಹೇಳಲಾಗುತ್ತದೆ. ಆ ನಂತರ ಅದನ್ನು ಅವರ ತಲೆಮಾರು ಕಾಪಾಡಿಕೊಂಡು ಬಂದಿದೆ. ಅಲ್ಲಿ ರಜಪೂತ ರಾಜರ ನೋಟ, ಅವರ ವೈಭವ, ಶೌರ್ಯ ಎಲ್ಲವನ್ನೂ ನೋಡಬಹುದು.

68
Hansika Motwani

ಕೋಟೆಯ ಬಳಿ ಕುದುರೆ ಲಾಯವಿದ್ದು ಕುದುರೆಗಳನ್ನು ಇಡಲಾಗುತ್ತದೆ. ಈ ಸೂಟ್‌ನ ಬಾಡಿಗೆ ಲಕ್ಷ ರೂಪಾಯಿಗಳಲ್ಲಿದೆ. ಅದ್ದೂರಿ, ಐಷಾರಾಮಿ, ಪುರಾತನವಾಗಿರುವ ಈ ಅರಮನೆಯಲ್ಲಿ ನಟಿ ಹನ್ಸಿಕಾ ಗೆಳೆಯ ಸೊಹೇಲ್ ಕಥರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

78

ಅಂದಹಾಗೆ ಈಗಾಗಲೇ ಹನ್ಸಿಕಾ ಮತ್ತು ಸೊಹೇಲ್ ಕಥರಿಯಾ ಮದುವೆ ಶಾಸ್ತ್ರಗಳು ಪ್ರಾರಂಭವಾಗಿವೆ. ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದೆ. ಹನ್ಸಿಕಾ ಮತ್ತು ಸೊಹೇಲ್ ಕುಟುಂಬ ಈಗಾಗಲೇ ಜೈಪುರ ತಲುಪಿದ್ದು ಮದುವೆ ಸಂಭ್ರಮದಲ್ಲಿ ತೇಲುತ್ತಿದ್ದಾರೆ.  

88

ಡಿಸೆಂಬರ್ 2 ರಾತ್ರಿಯಿಂದನೇ ಮದುವೆ ಸಮಾರಂಭ ಪ್ರಾರಂಭವಾಗಲಿದೆ. ಡಿಸೆಂಬರ್ 3ರಿಂದ ಮೆಹಂದಿ ಮತ್ತು ಅರಿಶಿಣ ಶಾಸ್ತ್ರದ ಸಂಭ್ರಮ ನಡೆಯುತ್ತಿದೆ. ಡಿಸೆಂಬರ್ 4ರಂದು ಹನ್ಸಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಾಗಿದ್ದಾರೆ ಸೊಹೇಲ್. 

click me!

Recommended Stories