ಪ್ರಿಯಾಂಕಾರಿಂದ ಆಲಿಯಾ, ಬಿಪಾಶಾ, ಸೋನಮ್‌ ವರೆಗೆ 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳು

First Published Dec 2, 2022, 12:40 PM IST

ವರ್ಷದ ಕೊನೆ ತಿಂಗಳಿನಲ್ಲಿದ್ದೇವೆ. ಈ ವರ್ಷ ಹಲವು ಅನಿರೀಕ್ಷಿತ ಬೆಳವಣಿಗೆಗಳು ಹಾಗೂ ಅನಿರೀಕ್ಷಿತ ಘಟನೆಗಳು ಕಂಡು ಬಂದಿವೆ . 2022ರ ವರ್ಷವು ಬಾಲಿವುಡ್‌ನಲ್ಲಿ ಸೆಲೆಬ್ರೆಟಿಗಳು ಸಹ ತಮ್ಮ  ಜೀವನದ
ಸಂತೋಷದ ಸುದ್ದಿಗಳು ಹಂಚಿಕೊಂಡಿದ್ದಾರೆ.ಹಲವು ನಟಿಯರು ಈ ವರ್ಷ ತಾಯಿಯಾಗಿದ್ದಾರೆ. ಆಲಿಯಾ ಭಟ್‌ (Alia Bhatt) ನಿಂದ ಹಿಡಿದು ಸೋನಮ್ ಕಪೂರ್ ಅಹುಜಾ (Sonam Kapoor) ಮತ್ತು ಬಿಪಾಶಾ ಬಸು ಸಿಂಗ್ ಗ್ರೋವರ್ (Bipasha Basu) ಸೇರಿ ಹಲವಾರು ಸೆಲೆಬ್ರಿಟಿಗಳು ಈ ವರ್ಷ ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಸ್ವಾಗತಿಸಿದ್ದಾರೆ.

ಆಲಿಯಾ ಭಟ್ - ರಣಬೀರ್ ಕಪೂರ್:

ಬಾಲಿವುಡ್ ಫೇಮಸ್ ಕಪಲ್‌ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ವರ್ಷ ತಮ್ಮ ಮೊದಲ ಮಗುವನ್ನು ಸ್ವಾಗತಿಸಿ, ವರ್ಷವನ್ನು ಸಂತೋಷದಾಯಕವಾಗಿ ಕೊನೆಗೊಳಿಸಿದ್ದಾರೆ. ಈ ದಂಪತಿ ನವೆಂಬರ್ 6, 2022 ರಂದು ಹೆಣ್ಣು ಮಗುವಿನ ಪೋಷಕರಾದ್ದರು.

ಸೋನಮ್ ಕಪೂರ್ ಅಹುಜಾ - ಆನಂದ್ ಅಹುಜಾ:

ವರ್ಷದ ಆರಂಭದಲ್ಲಿ ಪ್ರೆಗ್ನೆಂಸಿ (Pregnancy) ಸುದ್ದಿಯನ್ನು ಪ್ರಕಟಿಸಿದ ನಂತರ ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಆಗಸ್ಟ್‌ನಲ್ಲಿ ಮಗನನ್ನು ಸ್ವಾಗತಿಸಿದರು. ಸೋನಂ ಕಪೂರ್‌ ಅವರ ಪ್ರೆಗ್ನೆಂಸಿ ಫೋಟೋ ಶೂಟ್‌ ಸಾಕಷ್ಷು ಸದ್ದು ಮಾಡಿತ್ತು.

ಪ್ರಿಯಾಂಕಾ ಚೋಪ್ರಾ - ನಿಕ್ ಜೋನಾಸ್:

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಾಸ್ ಜನವರಿ 2022 ರಲ್ಲಿ ತಮ್ಮ ಮೊದಲ ಮಗುವಿನ ಜನನ ಸುದ್ದಿಯನ್ನು ಘೋಷಿಸುವ ಮೂಲಕ ಎಲ್ಲರಿಗೂ ಸರ್ಪ್ರೈಸ್‌ ನೀಡಿದರು. ಪ್ರಿಯಾಂಕಾ ನಿಕ್‌ ದಂಪತಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದು ಮೊದಲ ಬಾರಿಗೆ ಪೋಷಕರಾಗಿದ್ದಾರೆ.

ಕಾಜಲ್ ಅಗರ್ವಾಲ್ - ಗೌತಮ್ ಕಿಚ್ಲು:

ಅಕ್ಟೋಬರ್ 2020 ರಲ್ಲಿ ಮದುವೆಯಾದ ನಂತರ ನಟಿ ಕಾಜಲ್ ಅಗರ್ವಾಲ್ ಮತ್ತು ಅವರ ಪತಿ ಗೌತಮ್ ಕಿಚ್ಲು ಏಪ್ರಿಲ್ 2022 ರಲ್ಲಿ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಂಡರು. ಏಪ್ರಿಲ್ 19, 2022 ರಂದು ಕಾಜಲ್ ಮಗನಿಗೆ ಜನ್ಮ ನೀಡಿದರು. ಸಂಬಂಧಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್:

ಬಾಲಿವುಡ್‌ನ ಮತ್ತೊಂದು ಫೇಮಸ್‌ ಕಪಲ್‌ ಬಿಪಾಶಾ ಬಸು-ಕರಣ್ ಸಿಂಗ್ ತಮ್ಮ ಮೊದಲ ಮಗುವಿಗೆ ಈ ವರ್ಷ ಪೋಷಕರಾಗಿದ್ದಾರೆ. ಈ ದಂಪತಿ ತಮ್ಮ ಮಗಳಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ಹೆಸರಿಟ್ಟಿದ್ದು ಈ ಸುದ್ದಿಯನ್ನು ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.  

ಹೇಜಲ್ ಕೀಚ್ - ಯುವರಾಜ್ ಸಿಂಗ್:

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ನಟ ಹೇಜೆಲ್ ಕೀಚ್ ಐದು ವರ್ಷಗಳ ಆನಂದದಾಯಕ ದಾಂಪತ್ಯದ ನಂತರ ಈ ವರ್ಷದ ಜನವರಿಯಲ್ಲಿ ಮಗನನ್ನು ಸ್ವಾಗತಿಸಿದರು. ಹ್ಯಾಝೆಲ್ ತನ್ನ ಮತ್ತು ತನ್ನ ಮಗುವಿನ ಫೋಟೋಗಳನ್ನು ಪೋಸ್ಟ್ ಮಾಡಿ Instagram ನಲ್ಲಿ ಸುದ್ದಿಯನ್ನು ಪ್ರಕಟಿಸಿದರು.

ಭಾರತಿ ಸಿಂಗ್-ಹರ್ಷ್ ಲಿಂಬಾಚಿಯಾ:

ಭಾರತಿ ಸಿಂಗ್‌ ದಂಪತಿ ತಮ್ಮ ಮೊದಲ ಮಗುವನ್ನು ಏಪ್ರಿಲ್ 3 ರಂದು ಸ್ವಾಗತಿಸಿದರು. ಮಗನಿಗೆ ಲಕ್ಷ್ ಎಂದು ನಾಮಕರಣ ಮಾಡಿದ್ದಾರೆ ಮತ್ತು ಹರ್ಷ್ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಈ ಸುದ್ದಿಯನ್ನು ಹಂಚಿಕೊಳ್ಳಲು Instagram ಸಹಾಯ ಪಡೆದರು.

ಡೆಬಿನಾ ಬೊನ್ನರ್ಜಿ- ಗುರ್ಮೀತ್ ಚೌಧರಿ:

ಜನಪ್ರಿಯ ಈ ಟಿವಿ ದಂಪತಿ ಆಗಸ್ಟ್‌ನಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು. ನಂತರ, ನವೆಂಬರ್ 11 ರಂದು ಡೆಬಿನಾ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಈ ಕಪಲ್‌ ಎರಡನೇ ಬಾರಿಗೆ ಪೋಷಕರಾದರು.

ರಿಹಾನ್ನಾ- ರಾಕಿ:

ಜನವರಿಯಲ್ಲಿ, ರಿಹಾನಾ ಫೋಟೋ ಶೂಟ್‌ ಮೂಲಕ ತನ್ನ ಪ್ರೆಗ್ನೆಂಸಿಯನ್ನು ಘೋಷಿಸಿದರು.  ರಿಹಾನಾ ತಮ್ಮ ಗರ್ಭಾವಸ್ಥೆಯನ್ನು ಜನವರಿಯಲ್ಲಿ ದೊಡ್ಡ ಹೊರಾಂಗಣದಲ್ಲಿ ಪಿಕ್ಚರ್ ಸೆಷನ್‌ನಲ್ಲಿ ಬಹಿರಂಗಪಡಿಸಿದರು

ಕೈಲಿ ಜೆನ್ನರ್-ಟ್ರಾವಿಸ್ ಸ್ಕಾಟ್:

ಫೆಬ್ರವರಿ 2 ರಂದು, ಕೈಲೀ ಜೆನ್ನರ್ ಮತ್ತು ಟ್ರಾವಿಸ್ ಸ್ಕಾಟ್ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ಅವರು ಮೊದಲು ಮಗನಿಗೆ ವುಲ್ಫ್ ಎಂಬ ಹೆಸರನ್ನು ನೀಡಿದರು.ನಂತರ ಅದನ್ನು ಬದಲಾಯಿಸಿದರು. ಆದರೆ ಇನ್ನೂ ಹೊಸ ಹೆಸರನ್ನು ಬಹಿರಂಗಪಡಿಸಿಲ್ಲ.

ಖ್ಲೋ ಕಾರ್ಡಶಿಯಾನ್-ಟ್ರಿಸ್ಟಾನ್ ಥಾಂಪ್ಸನ್:

ಅಗಸ್ಟ್‌ನಲ್ಲಿ, ಖ್ಲೋ ಕಾರ್ಡಶಿಯಾನ್ ಮತ್ತು ಟ್ರಿಸ್ಟಾನ್ ಥಾಂಪ್ಸನ್ ಅವರ ಎರಡನೇ ಮಗುವಿಗೆ ಜನ್ಮ ನೀಡಿದರು. ಆದರೆ ಈ ಮಗ ಮಗು ಹುಟ್ಟುವ ಮುನ್ನವೇ ಬೇರ್ಪಟ್ಟಿದ್ದ ದಂಪತಿ ಇದೀಗ ತಮ್ಮ ಮಕ್ಕಳನ್ನು ಬೆಳೆಸಲು ಸಹ ಪೋಷಕರಾಗಿದ್ದಾರೆ.

ಜೋ ಜೋನಾಸ್-ಸೋಫಿ ಟರ್ನರ್:

ಜುಲೈ 2022 ರಲ್ಲಿ, ಜೋ ಜೋನಾಸ್ ಮತ್ತು ಸೋಫಿ ಟರ್ನರ್ ತಮ್ಮ ಎರಡನೇ ಮಗಳನ್ನು ಸ್ವಾಗತಿಸಿದರು. ವಿಲ್ಲಾ ದಂಪತಿಯ ಮೊದಲ ಮಗು ಜುಲೈ 2020 ರಲ್ಲಿ ಜನಿಸಿತು. 

click me!