ಶೋಭಿತಾ ಧೂಳಿಪಾಲ ಚಲನಚಿತ್ರಗಳ ಜೊತೆಗೆ ವೆಬ್ ಸರಣಿಗಳಲ್ಲಿಯೂ ಕೆಲಸ ಮಾಡಿದ್ದಾರೆ. 'ಮೇಡ್ ಇನ್ ಹೆವನ್', 'ಬಾರ್ಡ್ ಆಫ್ ಬ್ಲಡ್', 'ದಿ ನೈಟ್ ಮ್ಯಾನೇಜರ್' ನಂತಹ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಶೋಭಿತಾ ಧೂಳಿಪಾಲ ಆಂಧ್ರಪ್ರದೇಶದವರು ಮತ್ತು ತೆಲುಗು ಕುಟುಂಬಕ್ಕೆ ಸೇರಿದವರು. ಇವರ ತಂದೆ ಮರ್ಚೆಂಟ್ ನೇವಿಯಲ್ಲಿ ಎಂಜಿನಿಯರ್ ಆಗಿದ್ದರು ಮತ್ತು ತಾಯಿ ಶಾಲಾ ಶಿಕ್ಷಕಿ. ಅವರು ಓರ್ವ ಅತ್ಯುತ್ತಮ ಶಾಸ್ತ್ರೀಯ ನೃತ್ಯಗಾರ್ತಿ ಕೂಡ.