ವಿಲನ್ ಥರಾ ಇರೋ ಹೀರೋ ಪಾತ್ರ ಒಲ್ಲೆ ಅಂದ್ರಾ ತಮಿಳು ನಟ ಸೂರ್ಯ? ಯಾರ ಪಾಲಾಯ್ತು ಬಿಗ್ ರೋಲ್ ?

First Published | Sep 29, 2024, 3:15 PM IST

ಧೂಮ್ ಬಾಲಿವುಡ್‌ ಅಂಗಳದ ಸಕ್ಸಸ್‌ಫುಲ್ ಸೀಕ್ವೆನ್ಸ್ ಸಿನಿಮಾ ಆಗಿದೆ. ಇದೀಗ ಧೂಮ್ -4 ಸಿನಿಮಾವನ್ನು ತೆರೆ ಮೇಲೆ ತರಲು ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಇದೀಗ ವಿಲನ್ ಥರಾ ಹೀರೋ ಪಾತ್ರಕ್ಕೆ ನಟನ ಆಯ್ಕೆಯಾಗಿದೆ.

ಯಶ್ ಬ್ಯಾನರ್ ಅಡಿಯಲ್ಲಿ ಧೂಮ್ -4 ಸಿನಿಮಾ ನಿರ್ಮಾಣವಾಗುತ್ತಿದೆ. ಆದಿತ್ಯ ಚೋಪ್ರಾ ಅವರೇ ಸ್ವತಃ ಕಥೆಯ ಪ್ರತಿಯೊಂದು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಮೊದಲಿನ ಚಿತ್ರದಲ್ಲಿ ಜಾನ್ ಅಬ್ರಾಹಂ, ಹೃತಿಕ್ ರೋಷನ್ ಮತ್ತು ಆಮೀರ್ ಖಾನ್ ನಟಿಸಿದ್ದರು.

ಚಿತ್ರತಂದ ಧೂಮ್-4 ಗಾಗಿ ತಮಿಳು ನಟ ಸೂರ್ಯ ಅವರನ್ನು ಸಂಪರ್ಕಿಸಿತ್ತು ಎಂದು ವರದಿಯಾಗಿತ್ತು. ಈ ಸಂಬಂಧ ಮಾತುಕತೆಯೂ ನಡೆದಿದ್ದು, ಸೂರ್ಯ ಮನವೊಲಿಕೆ ಕಾರ್ಯವೂ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬೇರೊಬ್ಬ ನಟನ ಹೆಸರು ಧೂಮ್-4ಗೆ ಕೇಳಿ ಬರುತ್ತಿದೆ.

Tap to resize

ಈ ಬಾರಿಯೂ ಧೂಮ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಇರಲಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ವಿಲನ್ ಮತ್ತು ನಟಿಯ ರೋಲ್ ಬದಲಾಗುತ್ತಿದೆ. ಈ ಹಿಂದಿನ ಚಿತ್ರದಲ್ಲಿ ಇಶಾ ಡಿಯೋಲ್, ಐಶ್ವರ್ಯಾ ರೈ ಮತ್ತು ಕತ್ರಿನಾ ಕೈಫ್ ನಟಿಸದ್ದರು.

ಧೂಮ್ ಫ್ರಾಂಚೈಸಿ ಹೊಂದಿರುವ ಆದಿತ್ಯ ಚೋಪ್ರಾ, ಮಾಡರ್ನ್ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ಚಿತ್ರದ ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ. ವಿಜಯ್ ಕೃಷ್ಣ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಆದಿತ್ಯ ಚೋಪ್ರಾ ಪ್ರಕಾರ, ಈ ನಟನೇ ಧೂಮ್-4ಗೆ ಒಳ್ಳೆಯ ಆಯ್ಕೆ ಎಂದು ನಿರ್ಧರಿಸಿದ್ದಾರಂತೆ.

ಧೂಮ್-4ಗೆ ಆಯ್ಕೆಯಾಗಿರೋದು ನಟ ರಣ್‌ಬೀರ್ ಕಪೂರ್. ಆದ್ರೆ ಈ ಬಗ್ಗೆ ಚಿತ್ರತಂಡ ಅಥವಾ ರಣ್‌ಬೀರ್ ಕಪೂರ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆರಂಭದಲ್ಲಿ ರಣ್‌ವೀರ್ ಸಿಂಗ್, ಸಲ್ಮಾನ್ ಖಾನ್ ಹೆಸರು ಸಹ ಕೇಳಿ ಬಂದಿತ್ತು.

Latest Videos

click me!