ನ್ಯಾಷನಲ್ ಅವಾರ್ಡ್ ಪಡೆದ ಬಾಲಿವುಡ್ ನಿರ್ದೇಶಕ, ಸಾಲು ಸಿನ್ಮಾ ಫ್ಲಾಪ್‌ ಆಗಿ ಈಗ ಪೋರ್ನ್ ಮೂವಿ ಮಾಡ್ತಾರೆ!

First Published | Jan 25, 2024, 1:17 PM IST

ಬಾಲಿವುಡ್‌ನಲ್ಲಿ ಸೂಪರ್‌ಹಿಟ್ ಸಿನಿಮಾಗಳನ್ನು ಮಾಡಿದ ಹಲವು ನಿರ್ದೇಶಕರಿದ್ದಾರೆ. ಇವರು ಕೂಡಾ ಅಂಥಾ ನಿರ್ದೇಶಕರಲ್ಲಿ ಒಬ್ಬರು.ಸಾಕಷ್ಟು ಹಿಟ್‌ ಸಿನಿಮಾಗಳನ್ನು ಮಾಡಿದ್ದವರು. ನ್ಯಾಷನಲ್ ಅವಾರ್ಡ್ ಸಹ ಪಡೆದಿದ್ದಾರೆ. ಆದರೆ ಆ ನಂತರ ಮಾಡಿದ ಎಲ್ಲಾ ಸಿನಿಮಾಗಳು ಸಾಲು ಸಾಲಾಗಿ ಸೋತು ಹೋದವು. ಈಗ ಸಾಫ್ಟ್ ಪೋರ್ನ್ ಮಾಡ್ತಿದ್ದಾರೆ.

ಬಾಲಿವುಡ್‌ನಲ್ಲಿ ಹಲವಾರು ಹೆಸರಾಂತ ನಿರ್ದೇಶಕರಿದ್ದಾರೆ. ಹಲವಾರು ಫ್ಲಾಪ್, ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಇವರು ಕೂಡಾ ಹಾಗೆಯೇ ಬಾಲಿವುಡ್‌ನ ಹೆಸರಾಂತ ನಿರ್ದೇಶಕ. ಸಾಕಷ್ಟು ಹಿಟ್‌ ಸಿನಿಮಾಗಳನ್ನು ಮಾಡಿದ್ದವರು. ಆದರೆ ಆ ನಂತರ ಮಾಡಿದ ಎಲ್ಲಾ ಸಿನಿಮಾಗಳು ಸಾಲು ಸಾಲಾಗಿ ಸೋತು ಹೋದವು. 

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಿರ್ದೇಶಕರಾಗಿ ಅತಿ ಹೆಚ್ಚು ಫ್ಲಾಪ್‌ಗಳನ್ನು ನೀಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 34 ಚಲನಚಿತ್ರಗಳನ್ನು ಮಾಡಿದ್ದಾರೆ. ಅದರಲ್ಲಿ ಐದು ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದೆ. ಉಳಿದ ಎಲ್ಲಾ ಸಿನಿಮಾಗಳು ಫ್ಲಾಪ್ ಎಂದು ಗುರುತಿಸಿಕೊಂಡಿದೆ.

Tap to resize

ರಾಮ್ ಗೋಪಾಲ್ ವರ್ಮಾ 1989ರಲ್ಲಿ 'ಶಿವ' ಸಿನಿಮಾದಿಂದ ಖ್ಯಾತಿ ಗಳಿಸಿದರು. ಇದು ಯುವ ಪೀಳಿಗೆಯ ತಲ್ಲಣದ ಕಥಾಹಂದರವನ್ನು ಹೊಂದಿದ್ದ ನಾಗಾರ್ಜುನ ಅಭಿನಯದ ಚಿತ್ರ. 'ಶೋಲೆ' ಚಲನಚಿತ್ರವು ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗಳಿಸಿತು. 'ಸರ್ಕಾರ್' ಮತ್ತು 'ರಕ್ತ ಚಾರಿತ್ರ'ದಂತಹ ಸಿನ್ಮಾಗಳು ಸೂಪರ್‌ಹಿಟ್ ಆದವು.

ಅವರ ಕೊನೆಯ ಹಿಟ್ ಸಿನಿಮಾ 'ಸತ್ಯ' ಇದು 1998ರಲ್ಲಿ ಬಿಡುಗಡೆಯಾಯಿತು. ಅಂದಿನಿಂದ, ಅವರು ಕೆಲವು ಸೆಮಿ ಹಿಟ್‌ಗಳನ್ನು ಹೊಂದಿದ್ದಾರೆ. 'ಕಂಪೆನಿ' ಅಥವಾ 'ಸರ್ಕಾರ್‌'ನಂತಹ ಸರಾಸರಿ ಗಳಿಕೆಗಳ ಸಿನಿಮಾವನ್ನು ಸಹ ಮಾಡಿದರು. 

ಶಿವ, ಸತ್ಯ, ರಂಗೀಲಾ ಮತ್ತು ಇತರ ಚಲನಚಿತ್ರಗಳು ಭಾರತೀಯ ಚಲನಚಿತ್ರ ಮತ್ತು ಚಲನಚಿತ್ರ ನಿರ್ಮಾಪಕರ ಮೇಲೆ ಉತ್ತಮ ಪ್ರಭಾವ ಬೀರಿವೆ. RGVಯನ್ನು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

2010ರ ರಾಜ್‌ ಗೋಪಾಲ್‌ ವರ್ಮಾ ಯಶಸ್ಸು ಕಡಿಮೆಯಾಗುತ್ತಾ ಹೋಯಿತು. 2018ರ ನಂತರ, ಸಾಫ್ಟ್ ಪೋರ್ನ್ ಫಿಲ್ಮ್ ಮಾಡಲು ಆರಂಭಿಸಿದರು.

2018ರ ಕಿರುಚಿತ್ರ ಗಾಡ್, ಸೆಕ್ಸ್ ಮತ್ತು ಟ್ರುತ್. ವಯಸ್ಕ ಚಲನಚಿತ್ರ ನಟಿ ಮಿಯಾ ಮಲ್ಕೋವಾ ನಾಯಕಿಯಾಗಿ ನಟಿಸಿದ್ದಾರೆ. ಅವರ ಇತ್ತೀಚಿನ ಚಲನಚಿತ್ರ 12 O ಕ್ಲಾಕ್ ಕೂಡ ವಿಮರ್ಶಕರಿಂದ ಅಪಹಾಸ್ಯಕ್ಕೊಳಗಾಯಿತು.
 

Latest Videos

click me!