ಮೊದಲೇ ಮದುವೆಯಾಗಿದ್ದು ಮಗು ಹೋಯ್ತು, ಈಗ ನಾನು ಬೇರೆ ಮನೆ ಮುರಿದಿಲ್ಲ: Actor Ravi Mohan ಪ್ರೇಯಸಿ ಕೆನಿಷಾ

Published : May 16, 2026, 09:39 AM IST

Actor Ravi Mohan: ನಟ ರವಿ ಮೋಹನ್ ಹಾಗೂ ಅವರ ಪತ್ನಿಗೆ ಡಿವೋರ್ಸ್‌ ಸಿಕ್ಕಿಲ್ಲ. ಕೆನಿಷಾ ಜೊತೆ ರವಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರತಿ ರವಿ ಆರೋಪ ಮಾಡಿದ್ದರು. ಇನ್ನೂ ಈ ಕೇಸ್‌ ಕೋರ್ಟ್‌ನಲ್ಲಿದೆ. ಈ ಬಗ್ಗೆ ಕೆನಿಶಾ ಫ್ರಾನ್ಸಿಸ್ ತಿರುಗೇಟು ನೀಡಿದ್ದಾರೆ.

PREV
14
ನಾನು ಯಾಕೆ ಮಾತನಾಡ್ತಿಲ್ಲ

ಈ ಆರೋಪಗಳಿಗೆ ನಾನು ಯಾಕೆ ಪ್ರತಿಕ್ರಿಯೆ ಕೊಡ್ತಿಲ್ಲ ಎಂದು ಅನೇಕರು ಕೇಳುತ್ತಿದ್ದಾರೆ. ಇದನ್ನೆಲ್ಲ ಕೇಳಿದ್ಮೇಲೆ ನಾನು ಸುಮ್ಮನಿರೋಕೆ ಸಾಧ್ಯವಿಲ್ಲ. ನಾನು ಮನೆ ಮುರುಕಿ ಅಲ್ಲ ಎಂದು ಅವರು ಹೇಳಿದ್ದಾರೆ.

ಬಾಲ್ಯದಿಂದಲೂ ಎಷ್ಟುಕಷ್ಟಪಟ್ಟೆ ಎಂದು ಅವರು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರೇ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ಬಳಿಕ ಇದನ್ನು ಡಿಲಿಟ್‌ ಮಾಡಿದ್ದರೂ ಕೂಡ, ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ವೈರಲ್‌ ಆಗ್ತಿದೆ.

24
ಮದುವೆಯಾಗಿ ಮಗು ಹೋಯ್ತು

"ಎಲ್ಲರೂ ನಾನು ಯಾಕೆ ಸುಮ್ಮನಿದ್ದೇನೆ ಎಂದು ಕೇಳುತ್ತಿದ್ದಾರೆ. ಈಗ ನಾನು ಫೈನಲೀ ನನ್ನ ಬಗ್ಗೆ ಮಾತನಾಡುತ್ತಿದ್ದೇನೆ. ಇದು ನನ್ನ ಕೊನೆಯ ಪ್ರತಿಕ್ರಿಯೆಯಾಗಿರಬಹುದು. ನಾನು ನನ್ನ ತಂದೆ-ತಾಯಿಗೆ ಏಕೈಕ ಮಗಳು. ಅವರಿಬ್ಬರು ಈಗ ಈ ಬದುಕಿಲ್ಲ. 4 ವರ್ಷ ವಯಸ್ಸಿನಲ್ಲಿದ್ದಾಗ ನನ್ನ ಸ್ವಂತ ಸಂಬಂಧಿ ನನಗೆ ಲೈಂ*ಗಿಕ ದೌರ್ಜನ್ಯ ಮಾಡಿದನು. 18 ನೇ ವಯಸ್ಸಿನಲ್ಲಿದ್ದಾಗ ನನ್ನ ಮದುವೆಯಾಯ್ತು, ಅವನು ಹೊಡೆಯುತ್ತಿದ್ದನು. ಮದುವೆಯಾಗಿ ನಾಲ್ಕು ತಿಂಗಳಿಗೆ ದೂರ ಆದೆವು. ಆಗ ಪ್ರಗ್ನೆಂಟ್‌ ಆಗಿದ್ದೆ. ಮಾನಸಿಕ ಒತ್ತಡದಿಂದ ಮಗುವನ್ನು ಕಳೆದುಕೊಂಡೆ. ನನಗೆ 19 ರಿಂದ 20 ವರ್ಷ ವಯಸ್ಸಿನವನಾಗಿದ್ದಾಗ ಇದೆಲ್ಲ ಆಯ್ತು" ಎಂದು ಹೇಳಿದ್ದಾರೆ.

34
ಬಾರ್‌ನಲ್ಲಿ ಹಾಡುತ್ತಿದ್ದೆ

ಫಸ್ಟ್‌ ನನ್ನ ತಾಯಿ ಹೋದರು. ಅದಾಗಿ ನಾಲ್ಕು ವರ್ಷ ಆದ್ಮೇಲೆ, ಅಪ್ಪ ಹೋದರು. ಸುಮಾರು ಹತ್ತು ವರ್ಷಗಳ ಕಾಲ ಒಬ್ಬಂಟಿಯಾಗಿದ್ದೆ. ಅನೇಕರು ನನ್ನ ಹಳೇ ಜೀವನವನ್ನು ಕೆದಕುತ್ತಿದ್ದಾರೆ. ಬಾರ್‌ನಲ್ಲಿ ಒಂದು ರಾತ್ರಿಗೆ ಹಾಡಿಗೆ 500 ರೂಪಾಯಿ ಗಳಿಸುತ್ತಿದ್ದೆ. ಇಂದು, ನಾನು ಅದಕ್ಕಿಂತ ಹೆಚ್ಚಾಗಿ ದುಡಿಯುತ್ತೇನೆ. ಈಗ ಎಲ್ಲರೂ ನನ್ನನ್ನು ಗುರಿ ಮಾಡಿಕೊಂಡು, ನನ್ನ ವೈಯಕ್ತಿಕ ವಿಷಯಗಳನ್ನು ತಿಳಿಯಲು ಬೆಂಗಳೂರಿಗೆ ಪತ್ತೇದಾರಿಗಳನ್ನು ಕಳುಹಿಸಿದ್ದಾರೆ. ನಾನು ನನ್ನ ತಂದೆಯನ್ನು ವೃದ್ಧಾಶ್ರಮದಲ್ಲಿ ಇರಿಸಿದ್ದೇನೆ ಎಂದು ಗಾಸಿಪ್‌ ಮಾಡಿದರು, ಇದೆಲ್ಲ ಮಾನವೀಯತೆ ಇಲ್ಲ ಎಂದು ಹೇಳಿದ್ದಾರೆ.

44
ನಾನು ಯಾಕೆ ದೂರ ಮಾಡಲಿ?

ನನ್ನನ್ನು ಮನೆ ಮುರುಕಿ ಎಂದು ಕರೆದರು. ಪ್ರಗ್ನೆಂಟ್‌ ಆಗಿದ್ದಾಗ ನನ್ನ ಸ್ವಂತ ಮಗುವನ್ನು ಕಳೆದುಕೊಂಡ ಮಹಿಳೆ, ಬೇರೆ ಕುಟುಂಬದಲ್ಲಿ ಪಾಲಕರನ್ನು ಮಕ್ಕಳಿಂದ ದೂರ ಮಾಡ್ತಾಳೆ ಎಂದು ನೀವು ನಿಜವಾಗಿಯೂ ನಂಬ್ತೀರಾ? ರವಿ ಮೋಹನ್ ಮಾನಸಿಕವಾಗಿ ಬ್ರೇಕ್‌ ಆಗಿದ್ದಾಗ ನನ್ನ ಬಳಿ ಬಂದರು. ಆಗ ನಾನು ಅವರಿಗೆ ನನ್ನಿಂದ ಏನು ಸಹಾಯ ಸಾಧ್ಯವಿದೆಯೋ ಅದೆಲ್ಲವನ್ನು ಮಾಡಿದೆ. ಕುಟುಂಬದಲ್ಲಿರೋ ಸಮಸ್ಯೆಗಳನ್ನು ಸರಿಮಾಡಿಕೊಳ್ಳಿ ಎಂದು ಹೇಳಿದೆ. ಆದರೆ ನಾನು ಹೇಳುವ ಮೊದಲೇ ಅವರು ತನ್ನ ಕುಟುಂಬದಿಂದ ಮಾನಸಿಕವಾಗಿ ದೂರವಾಗಿದ್ದರು. ಈ ಸಮಯದಲ್ಲಿ ನಾವು ಸ್ನೇಹಿತರಾಗಿದ್ದೇವೆ, ಇಂದಿಗೂ ನಾವು ಸ್ನೇಹಿತರಾಗಿಯೇ ಇದ್ದೇವೆ. ನಾನು ಯಾರ ಕುಟುಂಬವನ್ನೂ ಮುರಿದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಈ ಸಂಬಂಧವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವವರು ಜನರು” ಎಂದು ಕೆನಿಷಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories