ಕ್ಯಾಲಿಫೋರ್ನಿಯಾ(ಜೂ.05) ಕೊರೋನಾ ವೈರಸ್ ಗೆ ಈ ಅಂತಾರಾಷ್ಟ್ರೀಯ ಗಾಯಕ ಬಲಿಯಾಗಿದ್ದಾರೆ. ಡ್ರೀಮ್ ಸ್ಟ್ರೀಟ್ ಬ್ಯಾಂಡ್ ಮುಖಾಂತರ ಹೆಸರು ಮಾಡಿದ್ದ ಕ್ರಿಸ್ ಟ್ರಾಸ್ ಡೇಲ್ ಜೂನ್ 2 ರಂದು ಸಾವನ್ನಪ್ಪಿದ್ದಾರೆ. 34 ವರ್ಷದ ಗಾಯಕನನ್ನು ಕೊರೋನಾ ಹೊತ್ತೊಯ್ದಿದೆ. ಕ್ಯಾಲಿಫೋರ್ನಿಯಾದ ಆಸ್ಪತ್ರೆಯೊಂದಕ್ಕೆ ಗಾಯಕ ದಾಖಲಾಗಿದ್ದರು . ಅವರ ಟ್ವಿಟರ್ ಹ್ಯಾಂಡಲ್ ನಿಂದಲೇ ಜಗತ್ತಿಗೆ ಸಾವಿನ ಸುದ್ದಿ ತಿಳಿಸಲಾಗಿದೆ. ಭಾರವಾದ ಹೃದಯದೊಂದಿಗೆ ಅಭಿಮಾನಿಗಳಿಗೆ ಈ ಸುದ್ದಿ ತಿಳಿಸಲಾಗುತ್ತಿದೆ ಎಂಬ ವಿಷಾದ ಅಲ್ಲಿದೆ. ಅವರ ಫ್ಯಾಮಿಲಿ ಸಾವಿನ ಸುದ್ದಿ ತಿಳಿಸಬಾರದು ಎಂದು ಕೇಳಿಕೊಂಡಿತ್ತು. ಆದರೆ ಗಾಯಕ ನಮ್ಮನ್ನೆಲ್ಲ ರಂಜಿಸುತ್ತಾ ಬಂದವರು. ಅವರು ನಮ್ಮ ಆಸ್ತಿ ಈ ಕಾರಣಕ್ಕೆ ಸಾವಿನ ಸುದ್ದಿ ತಿಳಿಸಿದ್ದೇವೆ ಎಂದು ಮುಂದುವರಿದು ಬರೆಯಲಾಗಿದೆ. 1999 ರಲ್ಲಿ ಡ್ರೀಮ್ ಸ್ಟ್ರೀಟ್ ಜಾಯಿನ್ ಆಗುವುದಕ್ಕೂ ಮುನ್ನ ಕ್ರಿಸ್ ಬೋರ್ಡ್ ವೇ ಮೂಲಕ ಗುರುತಿಸಿಕೊಂಡಿದ್ದರು. ಎರಡು ಆಲ್ಬಂ ಸಾಂಗ್ ಗಳ ಮೂಲಕ ಬ್ಯಾಂಡ್ ವಿಶ್ವದಾಖಲೆ ಮಾಡಿತ್ತು. ಕ್ರಿಸ್ ಮತ್ತು ಅವರ ಕುಟುಂಬ ಹಾಗೂ ಮ್ಯಾನೇಜರ್ ಗಳ ನಡುವೆ ಸಣ್ಣ ಕಾನೂನು ಸಮರವೂ ನಡೆಯುತ್ತಲಿತ್ತು. Former Dream Street singer Chris Trousdale passes away at 34 after Due to Coronavirus ಅಪ್ರತಿಮ ಗಾಯಕ ಕ್ರಿಸ್ ಟ್ರಾಸ್ ಡೇಲ್ ಅವರನ್ನು ಕೊರೋನಾ ಬಲಿ ಪಡೆದಿದೆ.