Arijit Singh Hotel: ಬೇರೆ ಸೆಲೆಬ್ರಿಟಿಗಳು ರೆಸ್ಟೋರೆಂಟ್‌ ಮಾಡ್ತಿದ್ರೆ, ಸಾಮಾನ್ಯ ಜನರಿಗೋಸ್ಕರ ಮಿಡಿದ ಗಾಯಕ ಅರಿಜಿತ್‌ ಸಿಂಗ್‌ ಹೋಟೆಲ್!‌

Published : Jun 16, 2025, 02:10 PM ISTUpdated : Jun 16, 2025, 04:25 PM IST

ಸೆಲೆಬ್ರಿಟಿಗಳು ಹೋಟೆಲ್‌, ಪಬ್‌, ರೆಸ್ಟೋರೆಂಟ್‌ ಉದ್ಯಮದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಅರಿಜಿತ್‌ ಹೋಟೆಲ್‌ ಮಾತ್ರ ಇದಕ್ಕಿಂತ ವಿಭಿನ್ನ.

PREV
15

ರೆಸ್ಟೋರೆಂಟ್‌ ಮಾಡಿ ಹೆಚ್ಚು ಹಣ ಮಾಡುತ್ತಿರುವವರ ಮಧ್ಯೆ ಅರಿಜಿತ್‌ ಸಿಂಗ್‌ ಅವರು ಬಡವರಿಗೆ ಸಹಾಯಕ ಆಗುವಂತೆ ಹೋಟೆಲ್‌ ಆರಂಭಿಸಿದ್ದಾರೆ.

25

ಅರಿಜಿತ್‌ ಸಿಂಗ್‌ ಅವರ ತಂದೆ ಗುರ್ದಯಾಲ್‌ ಸಿಂಗ್‌ ಅವರು ಹೋಟೆಲ್‌ ನಡೆಸುತ್ತಿದ್ದಾರೆ. ಯಾವಾಗಲೂ ಹಾಡಿನ ಮೂಲಕ ಗಮನಸೆಳೆಯೋ ಗಾಯಕ ಈ ಬಾರಿ ಸಾಮಾಜಿಕ ಸೇವೆ ಮೂಲಕ ಸೌಂಡ್‌ ಮಾಡ್ತಿದ್ದಾರೆ.

35

ಅರಿಜಿತ್‌ ಸಿಂಗ್‌ ಅವರು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಜಿಯಾಗಂಜ್‌ನಲ್ಲಿ ʼಹೇಶೆಲ್ʼ ಎಂಬ ಹೋಟೆಲ್ ಆರಂಭಿಸಿದ್ದಾರೆ. 40 ರೂಪಾಯಿಗೆ ಇಲ್ಲಿ ಫುಡ್‌ ಸಿಗುತ್ತದೆಯಂತೆ.

45

ಕೈಗೆಟುಕುವ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಆರೋಗ್ಯಕರ, ರುಚಿಕರವಾದ ಊಟ ಕೊಡುವ ಗುರಿ ಹೊಂದಿದೆ.

55

40 ರೂಪಾಯಿ ಊಟವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸಿಗತ್ತೆ ಎನ್ನಲಾಗಿದೆ. ಬೇರೆಯವರಿಗೆ ಬೇರೆ ರೇಟ್‌ ಎನ್ನಲಾಗಿದೆ. ಸ್ಥಳೀಯರು ವಿದ್ಯಾರ್ಥಿಗಳೇ ಇಲ್ಲಿ ಜಾಸ್ತಿ ಬರುತ್ತಾರೆ. ಇದು ಸತ್ಯವೇ ಎಂಬುದರ ಬಗ್ಗೆ ಅರಿಜಿತ್‌ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಗಡೆ ಬಂದಿಲ್ಲ.

Read more Photos on
click me!

Recommended Stories