ತೆಲುಗಿನ ನಟ ಬಾಲಯ್ಯ ಮೊದಲಿಂದಲೂ ಹಾಸ್ಯಾಸ್ಪದ ಸಂಗತಿಗಳಿಂದಲೇ ಫೇಮಸ್ ಆದವರು. ಇದೀಗ ನಡೆದ ಘಟನೆಯೊಂದರಲ್ಲಿ ಪರಿಸ್ಥಿತಿಯೇ ಅವರನ್ನು ಅಣಕಿಸಿ ನಗುವಂತೆ ಮಾಡಿದೆ.
25
ಬಾಲಯ್ಯ ನಟನೆಯ ‘ಅಖಂಡ 2’ ಸಿನಿಮಾ ಸೆ.25ಕ್ಕೆ ರಿಲೀಸ್ ಆಗಲಿದೆ. ತನ್ನ 65ನೇ ವರ್ಷದ ಜನ್ಮದಿನದಂದು ಈ ಸಿನಿಮಾಕ್ಕೆ ಸಂಬಂಧಿಸಿ ಕಾರ್ಯಕ್ರಮವೊಂದರಲ್ಲಿ ಬಾಲಯ್ಯ ಪಾಲ್ಗೊಂಡಿದ್ದರು.
35
ಈ ವೇಳೆ ವೇದಿಕೆಯಲ್ಲಿ ಎಲ್ಲಿಲ್ಲದ ರೋಷಾವೇಶದಲ್ಲಿ ಮಾತನಾಡಲಾರಂಭಿಸಿದ್ದಾರೆ. ಮಾತಿನ ಭರಕ್ಕೆ ಅವರ ಮುಖಕ್ಕೆ ಅಂಟಿಸಿದ್ದ ಮೀಸೆ ಕಳಚಿಬೀಳಲಾರಂಭಿಸಿದೆ. ಆರಂಭದಲ್ಲಿ ಇದು ಗಮನಕ್ಕೆ ಬರದಿದ್ದರೂ ಗೊತ್ತಾದಾಗ ಅವರಿಗೆ ಮುಜುಗರವಾಗಿದೆ.
‘ಗಮ್ ಕೊಡ್ರೋ ’ ಎಂದು ಆಪ್ತರನ್ನು ಕರೆದು ಗಮ್ ತರಿಸಿ ಮೀಸೆ ಅಂಟಿಸಿಕೊಂಡಿದ್ದಾರೆ. ಆ ಬಳಿಕ ಭಾಷಣವನ್ನು ಮುಂದುವರಿಸಿದ್ದಾರೆ. ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
55
ನೆಟ್ಟಿಗರು ಬಾಲಯ್ಯನ ಮೀಸೆ ಬಗ್ಗೆ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬಾಲಯ್ಯ ಅಭಿಮಾನಿಗಳು ಸಹ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ತಿರುಗೇಟು ಕೊಡುತ್ತಿದ್ದಾರೆ.