ಅಮೆರಿಕಾದಲ್ಲಿ ಇಂಡಿಯನ್‌ ಆಗಿ ಬದುಕುವುದು ಕಷ್ಟ; 10 ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

First Published | Feb 11, 2023, 5:53 PM IST

10 ವರ್ಷಗಳ ಶ್ರಮದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಚೋಪ್ರಾ. ವಿದೇಶದಲ್ಲಿ ನಿಜವಾದ ಇಂಡಿಯನ್‌ ಬದುಕಲು ತುಂಬಾನೇ ಕಷ್ಟ....

ಏಷ್ಯಾದ ಮೋಸ್ಟ್‌ ಬ್ಯೂಟಿಫುಲ್ ವುವೆನ್‌ ಕಿರೀಟ ಪಡೆದಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸದ್ಯಕ್ಕೆ ಅಮೆರಿಕಾದಲ್ಲಿ ಮದರ್‌ಹುಡ್‌ ಎಂಜಾಯ್ ಮಾಡುತ್ತಿದ್ದಾರೆ.
 

ಹಿಂದಿ ಸಿನಿಮಾರಂಗದಲ್ಲಿ ಬ್ಯಾಕ್‌ ಟು ಬ್ಯಾಕ್ ಹಿಟ್‌ ನೀಡಿರುವ ನಟಿ 2010ರಲ್ಲಿ ಹಾಲಿವುಡ್‌ ಸಿನಿಮಾದಲ್ಲಿ ನಟಿಸಬೇಕು ಎಂದು ಅಮೆರಿಕಾಗೆ ಕಾಲಿಡುತ್ತಾರೆ. ಅಲ್ಲಿ ಪಟ್ಟ ಶ್ರಮದ ಬಗ್ಗೆ ಮಾತನಾಡಿದ್ದಾರೆ.
 

Tap to resize

'ಅಮೇರಿಕಾದಲ್ಲಿ ನಾವು ಇಂಡಿಯನ್ ಆಗಿ ಬದುಕುವುದು ಅಷ್ಟು ಸುಲಭವಲ್ಲ. 2010ರಲ್ಲಿ ನಾನು ಅಮೆರಿಕಾದಲ್ಲಿ ಕೆಲಸ ಮಾಡಲು ಆರಂಭಿಸಿದೆ. 2020ರಲ್ಲಿ ಅವಕಾಶ ಗಿಟ್ಟಿಸಿಕೊಂಡೆ.' ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ಮ್ಯೂಸಿಕ್‌ ಮೂಲಕ ಅಮೆರಿಕಾದಲ್ಲಿ ಕೆಲಸ ಶುರು ಮಾಡಿದೆ ಆನಂತರ ಆಕ್ಟಿಂಗ್ ಶುರು ಮಾಡಿದೆ. 2010ರಲ್ಲಿ ಶುರು ಮಾಡಿ 2020ರಲ್ಲಿ ಲೀಡಿಂಗ್ ಅಕ್ಟರ್‌ ಅಗಿ ಅವಕಾಶ ಗಿಟ್ಟಿಸಿಕೊಂಡೆ.'
 

'10 ವರ್ಷ ಬೇಕಿತ್ತು ಈ ಸಾಧನೆ ಮಾಡಲು. ಕೆಲಸದಲ್ಲಿ ನಾವು ಹಾಕು ಶ್ರಮ ಮತ್ತು ಸ್ಥಿರತೆಯನ್ನು ಜನರು ಗಮನಿಸುವುದಿಲ್ಲ. ಮತ್ತೊಂದು ದೇಶಕ್ಕೆ ಕಾಲಿಟ್ಟು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಪುಟ್ಟ ಮಗುವಿನಂತೆ ಪ್ರತಿಯೊಂದನ್ನು ಕಲಿತು ಜೀವನ ಕಟ್ಟಿಕೊಂಡೆ' ಎಂದು ಹೇಳಿದ್ದಾರೆ.  
 

ಕೆಲವು ದಿನಗಳ ಹಿಂದೆ ಅಮೆರಿಕಾದಲ್ಲಿ ನಡೆದ ಹಾಲ್‌ ಆಫ್ ಫೇಮ್‌ನಲ್ಲಿ ಮಗಳು ಮಾಲ್ತಿ ಮೇರಿ ಜೋನಾಸ್‌ನ ಜನರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಮಾಲ್ತಿ ನೋಡಲು ಸೇಮ್‌ ನಿಕ್‌ ರೀತಿ ಎಂದಿದ್ದಾರೆ ನೆಟ್ಟಿಗರು. 
 

Latest Videos

click me!