ಐಶ್ವರ್ಯಾರ ದುರಭ್ಯಾಸದ ಸಿಕ್ರೇಟ್‌ ರೀವಿಲ್‌ ಮಾಡಿದ ಶ್ವೇತಾ ಬಚ್ಚನ್‌!

First Published | Sep 16, 2021, 7:43 PM IST

ಇತ್ತೀಚೆಗೆ, ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಮುಂಬರುವ ಚಿತ್ರ ಪೊನ್ನಿಯಿನ್ ಸೆಲ್ವನ್ ಗಾಗಿ ಹಾಡನ್ನು ಚಿತ್ರೀಕರಿಸಿದರು. ಅವರೊಂದಿಗೆ 400 ಕಿರಿಯ ಕಲಾವಿದರು ಸಹ ಈ ಹಾಡಿನಲ್ಲಿ ಭಾಗವಹಿಸಿದರು. ಆದರೆ, ರೈ ಕೇವಲ 2 ದಿನಗಳ ಕಾಲ ಚಿತ್ರೀಕರಣದಲ್ಲಿ ಹಾಜರಿದ್ದರು. ನಿರ್ದೇಶಕ ಮಣಿರತ್ನಂ ಅವರ ಈ ಸಿನಿಮಾದಲ್ಲಿ(Cinema) ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಬಚ್ಚನ್ ಸೊಸೆಗೆ ಸಂಬಂಧಿಸಿದ ಒಂದು ಪ್ರಸಂಗವು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಐಶ್ವರ್ಯಾರ ನಾದಿನಿ ಶ್ವೇತಾ ಬಚ್ಚನ್(Shwetha Bachchan) ಶೋನಲ್ಲಿ ತನ್ನ ಅತ್ತಿಗೆಯ ಕೊಳಕು ಅಭ್ಯಾಸವನ್ನು ಬಹಿರಂಗಪಡಿಸಿದ್ದರು. ಏನದು? ಕೆಳಗೆ ಓದಿ.

ಅಮಿತಾಭ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ಅತ್ತಿಗೆ ಐಶ್ವರ್ಯಾ ರೈ ಭಯಾನಕ ನಡವಳಿಕೆಯ ಸತ್ಯವನ್ನು ಬಹಿರಂಗಪಡಿಸಿದರು. ಅಂದಹಾಗೆ, ಅತ್ತಿಗೆ ನಾದಿನಿ ಅಂದರೆ ಶ್ವೇತಾ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ಬಾಂಧವ್ಯ ಚೆನ್ನಾಗಿದೆ. 

ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ  ಬ್ಯುಸಿಯಾಗಿರುವುದರಿಂದ ಇಬ್ಬರನ್ನು ಅಪರೂಪವಾಗಿ ಒಟ್ಟಿಗೆ ನೋಡಲಾಗುತ್ತದೆ. ಅದೇ ಸಮಯದಲ್ಲಿ, ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಉತ್ತಮ ಬಾಂಡಿಂಗ್‌ ಹಂಚಿಕೊಂಡಿರುವ ಇಬ್ಬರೂ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದಾರೆ. 

Tap to resize

ಆದರೆ ಶ್ವೇತಾ ಬಚ್ಚನ್ ಅತ್ತಿಗೆ ಐಶ್ವರ್ಯಾ ರೈ ಬಚ್ಚನ್ ಅವರ ಕೆಲವು ಅಭ್ಯಾಸಗಳನ್ನು ಇಷ್ಟ ಪಡುವುದಿಲ್ಲ. ಅವರ  ಈ ಕೊಳಕು ಅಭ್ಯಾಸಗಳಿಂದ ಅವಳು ತೊಂದರೆಗೀಡಾಗಿದ್ದಾರೆ ಎಂದು ಬಹಿರಂಗ ಪಡಿಸಿದ್ದರು.

ಕೆಲವು ವರ್ಷಗಳ ಹಿಂದೆ, ಶ್ವೇತಾ ತನ್ನ ಸಹೋದರ ಅಭಿಷೇಕ್ ಬಚ್ಚನ್ ಜೊತೆಗೆ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಕಾಣಿಸಿಕೊಂಡರು. ಪ್ರದರ್ಶನದಲ್ಲಿ, ಒಡ ಹುಟ್ಟಿದವರು ಪರಸ್ಪರರ ಕೆಲವು ವಿಷಯಗಳನ್ನು ಬಹಿರಂಗಪಡಿಸಿದರು, ಶ್ವೇತಾ ಐಶ್ವರ್ಯಾರ ಬಗ್ಗೆ ಸಹ ಕೆಲವು ವಿಷಯ ಹಂಚಿಕೊಂಡರು.

ಸೆಲ್ಫ್‌ ಮೇಡ್‌ ಮಹಿಳೆಯ ಜೊತೆಗೆ, ಅವಳು ಅದ್ಭುತ ತಾಯಿಯೂ ಹೌದು. ಆದರೆ ಅವಳ ಅಭ್ಯಾಸಗಳಲ್ಲಿ ಒಂದನ್ನು ನಾನು ಇಷ್ಟಪಡುವುದಿಲ್ಲ. ಮತ್ತು ಅವಳಿಗೆ ಫೋನ್‌ ಮಾಡಿದರೆ ಕಾಲ್‌ ಬ್ಯಾಕ್‌ ಮಾಡುವ ಅಭ್ಯಾಸವಿಲ್ಲ. ಇದು ಮಾತ್ರವಲ್ಲ, ಅವರ ಸಮಯ ನಿರ್ವಹಣೆ ತುಂಬಾ ಕೆಟ್ಟದಾಗಿದೆ ಎಂದು ಶ್ವೇತಾ ಬಹಿರಂಗಪಡಿಸಿದರು.
 

ಪತ್ನಿ ಐಶ್ವರ್ಯಾ ರೈ ಬಗ್ಗೆ ಅಭಿಷೇಕ್(Abhishek Bachchan) ಅವರನ್ನು ಕೇಳಿದಾಗ  ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಆದರೆ ಆಕೆಯ ಪ್ಯಾಕಿಂಗ್ ಕೌಶಲ್ಯಗಳು ಚೆನ್ನಾಗಿಲ್ಲ, ಅದನ್ನು ನಾನು ಸಹಿಸುವುದಿಲ್ಲ ಎಂದರು.

ಐಶ್ವರ್ಯ ರೈ ಬಚ್ಚನ್ ಕಳೆದ 14 ವರ್ಷಗಳಿಂದ ಕುಟುಂಬದ ಸೊಸೆಯಾಗಿರುವ ಆಕೆ ತನ್ನ ಎಲ್ಲ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಮನೆಯನ್ನು ನೋಡಿಕೊಳ್ಳುವುದರ ಜೊತೆಗೆ, ಅವರು ತನ್ನ ಕೆಲಸದ ಮೇಲೆ ಸಂಪೂರ್ಣ ಗಮನ ಹರಿಸುತ್ತಾರೆ.

ಗುರು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಭಿಷೇಕ್ ಬಚ್ಚನ್ ಮದುವೆಗೆ ಐಶ್ ಅನ್ನು ಪ್ರಪೋಸ್‌ ಮಾಡಿದ್ದರು ಮತ್ತು ಇಬ್ಬರೂ 2007 ರಲ್ಲಿ ವಿವಾಹವಾದರು(Marriage) ಮತ್ತು ಅವರಿಗೆ ಆರಾಧ್ಯ ಎಂಬ ಮಗಳಿದ್ದಾಳೆ.

ಐಶ್ವರ್ಯ ರೈ ಅವರ ವರ್ಕ್‌ಫ್ರಂಟ್ ಬಗ್ಗೆ ಮಾತನಾಡುತ್ತಾ, ಅವರು ಕೊನೆಯದಾಗಿ 2018ರಲ್ಲಿ ಫನ್ನಿ ಖಾನ್ ಚಿತ್ರದಲ್ಲಿ ಕಾಣಿಸಿಕೊಂಡರು. ಪ್ರಸ್ತುತ, ಅವರು ಯಾವುದೇ ಬಿ ಬಾಲಿವುಡ್ ಚಲನಚಿತ್ರಗಳನ್ನು ಹೊಂದಿಲ್ಲ. ಈ ದಿನಗಳಲ್ಲಿ ಅವರು ದಕ್ಷಿಣದ ಪೊನ್ನಿಯನ್ ಸೆಲ್ವನ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

Latest Videos

click me!