ಬಾಲಿವುಡ್ ನಟ ಅನಿಲ್ ಕಪೂರ್ ಇತ್ತೀಚೆಗೆ ಅರ್ಬಾಜ್ ಖಾನ್ ಅವರ ಚಾಟ್ ಶೋ ಪಿಂಚ್ 2 ನಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಶೋ ಹೋಸ್ಟ್, ಅನಿಲ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಕೆಲವು ಅಸಹ್ಯಕರ ಅಥವಾ ಕೆಟ್ಟ ಟೀಕೆಗಳನ್ನು ತೋರಿಸಿದರು.
ಅನಿಲ್ ಹಿಂದಿ ಚಿತ್ರರಂಗದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು, ಆದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳು ಮತ್ತು ನೆಗೆಟಿವಿಟಿಗಳಿಂದ ದೂರವಿರುತ್ತಾರೆ. ಎಲ್ಲರಂತೆ, ಅನಿಲ್ ಕೂಡ ಅವರ ಬಗ್ಗೆ ಮತ್ತು ಅವರ ಮಗಳು ಸೋನಂ ಕಪೂರ್ ಬಗ್ಗೆ ಕೆಲವು ಕೆಟ್ಟ ಟೀಕೆಗಳನ್ನು ನೋಡಿದ್ದಾರೆ.
'ನನ್ನ ಪ್ರಕಾರ ತಂದೆ ಮತ್ತು ಮಗಳು ನಾಚಿಕೆಯಿಲ್ಲದವರು. ಅವರು ಹಣಕ್ಕಾಗಿ ಏನು ಬೇಕಾದರೂ ಮಾಡಬಹುದು' ಎಂದು ಸೋಶಿಯಲ್ ಮೀಡಿಯಾದ ಯೂಸರ್ ಒಬ್ಬರು ಕಾಮೆಂಟ್ ಮಾಡಿರುವ ಬಗ್ಗೆ ಶೋನ ಹೋಸ್ಟ್ ಅರ್ಬಾಜ್ ಖಾನ್ ಅನಿಲ್‌ಗೆ ಕೇಳಿಸಿದರು.
ಅದನ್ನು ಕೇಳುತ್ತಾ ಅನಿಲ್ ಶಾಂತವಾಗಿದ್ದರು ಮತ್ತು 'ಅವರು ಈ ರೀತಿ ಕಾಮೆಂಟ್ ಮಾಡಿದ್ದಾರೆ ಅಂದರೆ ಬಹುಶಃ ಅವರು ಕೆಟ್ಟ ಮೂಡ್ ನಲ್ಲಿರಬೇಕು ಅಥವಾ ದುಃಖದಲ್ಲಿರಬೇಕು' ಎಂದು ತುಂಬಾ ಡಿಗ್ನಿಫೈಡ್ ಆಗಿ ಅನಿಲ್
ಉತ್ತರಿಸಿದರು.
ಈ ಸಮಯದಲ್ಲಿ ಅರ್ಬಾಜ್ ಅನಿಲ್ ಅವರನ್ನು ರೇಗಿಸಿದ್ದರು ಮತ್ತು ಅವರ ಬಗ್ಗೆ ಕೂದಲಿನ ವೈರಲ್ ಮೀಮ್‌ಗಳ ಬಗ್ಗೆ ಉಲ್ಲೇಖಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅನಿಲ್, ಚೌಲಾ ಮಾಡಿಸಿಕೊಂಡು ಬಂದಿದ್ದೇನೆ ಮತ್ತು ಕೂದಲು ಕಸಿಗಾಗಿ ತಮ್ಮ ದೇಹದ ಕೂದಲನ್ನು ನೀಡಿದ್ದರು ಎಂದು ತಮಾಷೆ ಮಾಡಿದರು.
64 ವರ್ಷದ ಸ್ಟಾರ್ ಅನಿಲ್ ಕಪೂರ್ ಪ್ರಸ್ತುತ ಜುಗ್ ಜುಗ್ಗ್ ಜಿಯೊ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ವರುಣ್ ಧವನ್, ನೀತು ಸಿಂಗ್ ಮತ್ತು ಕಿಯಾರಾ ಅಡ್ವಾಣಿ ಕೂಡ ಇದ್ದಾರೆ.