ಇದೇ ವೇಳೆ, ಪುಟ್ಮಲ್ಲಿ ಖ್ಯಾತಿಯ ಚಿತ್ರ ಹಾಗೂ ರಂಗಭೂಮಿ ನಟಿ ಉಮಾಶ್ರೀ ಅವರು, ಪೆರ್ಡೂರು ಮೇಳದ ಯಕ್ಷಗಾನದಲ್ಲಿ ಬಣ್ಣ ಹಚ್ಚಲಿದ್ದಾರೆ. ರಾಜಕಾರಣಿ ಕಂ ಖ್ಯಾತ ನಟಿಯಾಗಿರುವ ಉಮಾಶ್ರೀ, ಯಕ್ಷಗಾನ ರಂಗದಲ್ಲಿ ಸವಾಲಿನ ಪಾತ್ರ ಎಂದೇ ಪರಿಗಣಿಸಲಾಗುವ ಮಂಥರೆಯ ವೇಷ ಧರಿಸಲಿದ್ದಾರೆ.
ಜನವರಿ 17ರಂದು ಹೊನ್ನಾವರದಲ್ಲಿ ಪೆರ್ಡೂರು ಮೇಳ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಉಮಾಶ್ರೀ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಳೆದ ಎರಡು ದಿನಗಳಿಂದ ಯಕ್ಷಗಾನ ವೇಷವನ್ನು ಧರಿಸಿ ತಾಲೀಮು ಕೂಡಾ ನಡೆಸಿದ್ದಾರೆ. ಈ ಮೊದಲು ಕೂಡ ಹಲವು ಮಂದಿ ಕನ್ನಡ ಚಿತ್ರರಂಗದ ತಾರೆಯರು ಯಕ್ಷಗಾನದಲ್ಲಿ ವೇಷ ಧರಿಸಿದ್ದು, ಇದೀಗ ಪ್ರಮುಖ ಇಬ್ಬರು ನಟರು ಯಕ್ಷರಂಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ಸಂಚಲನ ಮೂಡಿಸಿದೆ.