ಈ ಪ್ರಪಂಚದಲ್ಲಿ ನನಗೆ ಗೊತ್ತಿರೋ ಅತ್ಯುತ್ತಮ ವ್ಯಕ್ತಿಗಳಲ್ಲಿ ಮಹೇಶ್ ಬಾವ ಒಬ್ಬರು. ಮಹೇಶ್ ಬಾವ ಕುಟುಂಬಕ್ಕಾಗಿ ದೃಢವಾಗಿ ನಿಲ್ತಿರೋ ವ್ಯಕ್ತಿ. ಕಡಿಮೆ ಸಮಯದಲ್ಲಿ ತಂದೆ ಕೃಷ್ಣ, ತಾಯಿ ಇಂದಿರಾ ದೇವಿ, ಅಣ್ಣ ರಮೇಶ್ ಬಾಬುರವರನ್ನು ಕಳೆದುಕೊಂಡು ಬಹಳ ದುಃಖದಲ್ಲಿದ್ದಾರೆ. ಅಷ್ಟೆಲ್ಲಾ ಕಷ್ಟದಲ್ಲೂ ಅಭಿಮಾನಿಗಳಿಗಾಗಿ ನಗುಮುಖ ತೋರಿಸ್ತಿದ್ರು. ನಾವು ಕೂಡ ನಮ್ಮ ಪೇರೆಂಟ್ಸ್‌ನ ಕಳೆದುಕೊಂಡಿದ್ವಿ. ಆ ಸಮಯದಲ್ಲಿ ಅಕ್ಕನಿಗೆ ಮಹೇಶ್ ಬಾವ, ನನಗೆ ನನ್ನ ಗಂಡ ಸಹಾಯ ಮಾಡಿದ್ರು ಅಂತ ಶಿಲ್ಪಾ ಶಿರೋಡ್ಕರ್ ಭಾವುಕರಾಗಿ ಹೇಳಿದ್ದಾರೆ.