2020ರಲ್ಲಿ ಕೊರೋನಾ ವೈರಸ್‌ನಿಂದಾಗಿ ಜನರು ಮನೆಯಲ್ಲೇ ಇದ್ದಾರೆ.
ಲಾಕ್‌ಡೌನ್‌ನಿಂದಾಗಿ ಮತ್ತು ಕೊರೋನಾ ಭಯದಿಂದ ಜನರಿಗೆ ಪ್ರವಾಸ ಎಂಬುದು ಕನಸಾಗಿ ಉಳಿದಿದೆ.
ಇದೀಗ ಅನ್‌ಲಾಕ್ ನಿಯಮಗಳು ಸಡಿಲವಾಗಿದ್ದು ಬಹಳಷ್ಟು ಕುಟುಂಬಗಳು ಪ್ರವಾಸ ಹೊರಟಿವೆ.
ಬಾಲಿವುಡ್ ಸೆಲೆಬ್ರಿಟಿಗಳು ಗೋವಾ, ಮಾಲ್ಡೀವ್ಸ್ ಅಂತ ಟ್ರಿಪ್ ಮಾಡ್ತಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಫ್ಯಾಮಿಲಿ ಹಂಗಾಮಾ 2 ಭಾಗವಾಗಿ ಜೊತೆ ಮನಾಲಿಗೆ ಭೇಟಿ ಕೊಟ್ಟಿದ್ದಾರೆ.
ನಟಿ ಮನಾಲಿಯಲ್ಲಿ ಸೇಬಿನ ತೋಟದ ವಿಡಿಯೋ ಶೇರ್ ಮಾಡಿದ್ದಾರೆ.
ಸೇಬಿನ ತೋಟದಲ್ಲಿ ಫುಲ್ ಎಕ್ಸೈಟ್ ಆದ ನಟಿ ಓಡಾಡುತ್ತಾ ಹಣ್ಣು ಕಿತ್ತು ತಿಂದಿದ್ದಾರೆ.
ಆಪಲ್ ಆಪಲ್ ಎವರಿವೇರ್.. ಮರದಲ್ಲಿ ಆಪಲ್ ನೋಡಿ ಎಕ್ಸೈಟ್ ಆಯ್ತು, ಅದು ಸುತ್ತಮುತ್ತ ಎಲ್ಲೆಡೆ.. ಕ್ಯಾಂಡಿ ಶಾಪ್‌ನಲ್ಲಿ ಮಕ್ಕಳಿಗೆ ಹೇಗಾಗುತ್ತೋ ಹಾಗೇ ಆಯ್ತು ಎಂದಿದ್ದಾರೆ.
ನಟಿ ಮನಾಲಿ ಕಣಿವೆಯಲ್ಲಿ ಸೇಬಿನ ಹಣ್ಣುಗಳನ್ನು ನೋಡಿ ಸಂತಸಪಟ್ಟಿದ್ದಾರೆ ನಟಿ.ಬಹಳಷ್ಟು ಫಲಭರಿತ ಆಪಲ್ ಜೊತೆ ಕೆಂಪು ಬಣ್ಣದ ಸೇಬೂ ಇದ್ದವು.
ವೆಕೇಷನ್ ಎಂಜಾಯ್ ಮಾಡೋದ್ರ ಜೊತೆ ಹೆಲ್ತಿ ಆಪಲ್ ಸವಿದಿದ್ದಾರೆ ನಟಿ