ಮಕ್ಕಳೊಂದಿಗೆ ಮ್ಯಾಚಿಂಗ್ ಡ್ರೆಸ್‌ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ

First Published | Sep 12, 2021, 11:20 AM IST
  • ಮಗ, ಮಗಳೊಂದಿಗೆ ಹಬ್ಬ ಆಚರಿಸಿದ ಬಾಲಿವುಡ್ ನಟಿ
  • ಮುದ್ದು ಮಗ, ಮಗಳೊಂದಿಗೆ ಶಿಲ್ಪಾ ಶೆಟ್ಟಿ ಫೋಟೋಸ್ ವೈರಲ್

ಪತಿ ಜೈಲಿನಲ್ಲಿದ್ದರೂ ನಟಿ ಶಿಲ್ಪಾ ಶೆಟ್ಟಿ ಮಕ್ಕಳೊಂದಿಗೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ. ಪುಟ್ಟ ಮಗಳು ಸಮೀಶಾಳನ್ನು ಎತ್ತಿಕೊಂಡು ಮಗನ ಜೊತೆ ಕಾಣಿಸಿಕೊಂಡಿದ್ದಾರೆ ನಟಿ

ಗಣೇಶ ಚತುರ್ಥಿ ಆಚರಣೆಯನ್ನು ಬಹಳ ಸಂಭ್ರಮದ ಆಚರಿಸಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಗಣಪತಿ ವಿಸರ್ಜನೆ ಸಂಭ್ರಮ ಆಚರಣೆಗಳಲ್ಲಿ ಭಾಗಿಯಾದರು.

Tap to resize

Shilpa Shetty

ಕೊರೋನಾ ನಡುವೆ 11 ದಿನಗಳ ಹಬ್ಬವು ಮ್ಯೂಟ್ ಆಚರಣೆಯನ್ನು ಕಾಣುತ್ತಿದೆ. ಆದರೂ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಜನರು ಗಣಪತಿಯನ್ನು ಮನೆಗೆ ಸ್ವಾಗತಿಸಿದ್ದಾರೆ.

ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಮತ್ತು ಮಗ ವಿಯಾನ್ ರಾಜ್ ಕುಂದ್ರಾ ಅವರು ಗಣಪತಿ ಮೂರ್ತಿಯನ್ನು ವಿಸರ್ಜನೆಗಾಗಿ ತೆಗೆದುಕೊಂಡು ಹೋದರು.

ಆಕೆಯ ಅತ್ತೆ-ಮಾವ ಕೂಡ ಜೊತೆಗಿದ್ದರು. ಶಿಲ್ಪಾ ಹೂವಿನ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಮಗಳು ಸಮೀಷಾಳನ್ನು ಎತ್ತಿಕೊಂಡಿದ್ದರು

ನಟಿಯ ಮಗ ಅದೇ ಮಾದರಿ ಮತ್ತು ಬಣ್ಣದ ಕುರ್ತಾವನ್ನು ಧರಿಸಿದ್ದ. ಶಿಲ್ಪಾ ಪತಿ ರಾಜ್ ಕುಂದ್ರಾ ಪೋರ್ನ್ ಆಪ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ.

ವಿಯಾನ್ ಅಮ್ಮನ ಪಕ್ಕ ನಿಂತು ಪೋಸ್ ಕೊಟ್ಟರೆ ಸಮೀಶಾ ಸುತ್ತಮುತ್ತಲ ಸಂಭ್ರಮ ನೋಡುವುದರಲ್ಲೇ ಬ್ಯುಸಿ ಇದ್ದಳು. ಶಿಲ್ಪಾ ಜೊತೆ ಅವರ ತಾಯಿಯೂ ಇದ್ದರು.

ಶಿಲ್ಪಾ ಸಹೋದರಿ ಶಮಿತಾ ಸೆಟ್ಟಿ ಬಿಗ್‌ಬಾಸ್ ಒಟಿಟಿ ಮನೆಯಲ್ಲಿದ್ದು ಅವರು ಈ ಸಲ ಕುಟುಂಬದೊಂದಿಗೆ ಹಬ್ಬದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದರೆ ಅವರೂ ಮ್ಯಾಚಿಂಗ್ ಡ್ರೆಸ್ ಧರಿಸಿದ್ದರು.

ಶಿಲ್ಪಾ ತಮ್ಮ ಗೆಳತಿಯೊಂದಿಗೆ ಹೋಗಿ ತಾವೇ ಸ್ವತಃ ಗಣೇಶನ ಮೂರ್ತಿಯನ್ನು ಆರಿಸಿ ಮನೆಗೆ ಕರೆತಂದಿದ್ದರು. ಮನೆಯಲ್ಲಿಯೂ ಮಕ್ಕಳಿಗೆ ಸಿಹಿ ತಿನಿಸಿ ಹಬ್ಬವನ್ನು ಸಂಭ್ರಮಿಸಿದ್ದಾರೆ.

ಪತಿ ಜೈಲಿನಲ್ಲಿದ್ದರೂ ನೋವು ತೋರಿಸಿಕೊಳ್ಳದೆ ಕೂಲ್ ಆಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಶಿಲ್ಪಾ. ಮಕ್ಕಳಿಗೂ ಈ ನೋವು ಬಾಧಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

Latest Videos

click me!