ಇದ್ಯಾರು ಇನ್ನೊಬ್ಬ ಕಿಯಾರಾ ಅಡ್ವಾಣಿ ? ಹಾಗಿದ್ರೆ ರಿಯಲ್ ಯಾರು ?

Published : Sep 12, 2021, 10:24 AM IST

'ಶೇರ್ ಶಾ' ಸಿನಿಮಾದಲ್ಲಿನ  ಕಿಯಾರಾ ಅಡ್ವಾಣಿಯ ಲುಕ್ ಅನ್ನು ನಕಲಿಸುವ ಮೂಲಕ ಈ ಹುಡುಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಬಾಲಿವುಡ್‌ ನಟಿ ಕಿಯಾರರಂತೆ ಕಾಣುವ ಐಶ್ವರ್ಯಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿವೆ. ಅನೇಕ ಫೋಟೋಗಳು ಮತ್ತು ವಿಡಿಯೋಗಳಲ್ಲಿ, ಐಶ್ವರ್ಯಾ ನಟಿ ಕಿಯಾರಾ ಸೌಂದರ್ಯಕ್ಕೆ ಸರಿಸಮಾನವಾಗಿ ಕಾಣುತ್ತಾರೆ.   

PREV
16
ಇದ್ಯಾರು ಇನ್ನೊಬ್ಬ ಕಿಯಾರಾ ಅಡ್ವಾಣಿ ? ಹಾಗಿದ್ರೆ ರಿಯಲ್ ಯಾರು ?

ಭಾರತದಲ್ಲಿ ಬಾಲಿವುಡ್ ಸಿನಿಮಾಗಳು ಮತ್ತು ಸ್ಟಾರ್‌ಗಳ ಬಗ್ಗೆ ಜನರಿಗೆ ಅಪಾರ ಕ್ರೇಜ್ ಇದೆ. ಯಾವುದೇ ನಟ ಅಥವಾ ನಟಿಯ  ಮುಖದ ಹೋಲಿಕೆ ಪಡೆದಿದ್ದರೆ ಆ ಹುಡುಗ-ಹುಡುಗಿ ಪ್ರಸಿದ್ಧರಾಗುತ್ತಾರೆ. ಅಂತಹ ಯುವತಿ ಇಲ್ಲಿದ್ದಾರೆ. ಇವರು ಕಿಯಾರಾ ಅಡ್ವಾಣಿಯ ನಕಲು. ಅನೇಕ ಸಂದರ್ಭಗಳಲ್ಲಿ ಅವರ ಸೌಂದರ್ಯವು ಕಿಯಾರಾರನ್ನು ಸೋಲಿಸುತ್ತದೆ. ಇವರು ಎರಡನೇ ಕಿಯಾರಾಅಡ್ವಾಣಿಯ ಹಾಗೆ ಕಾಣುತ್ತಾರೆ.  ಯಾರು ನಿಜ ಎಂದು ಗುರುತಿಸಿಲು ಸಾಧ್ಯವಾಗುವುದ್ದಿಲ್ಲ.

26
डॉ ऐश्वर्या

ಈ ಹುಡುಗಿಯ ಹೆಸರು ಡಾ. ಐಶ್ವರ್ಯಾ. ಆಕೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಬಹಳಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಫೋಟೋಗಳನ್ನು ನೋಡಿದ ತಕ್ಷಣ, ಯಾರಾದರೂ ಅವುಗಳನ್ನು ಕಿಯಾರಾ ಅಡ್ವಾಣಿ ಎಂದೇ ಭಾವಿಸಬಹುದು. 

36

ಅದೇ ಸಮಯದಲ್ಲಿ, ಐಶ್ವರ್ಯಾ ಕೂಡ ಕಿಯಾರಾ ಆಡ್ವಾಣಿ ಅವರ 'ಶೇರ್ ಶಾ' ಸಿನಿಮಾದ ಲುಕ್ ಅನ್ನು ನಕಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಐಶ್ವರ್ಯಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿವೆ. 

46

ಅನೇಕ ಸಂದರ್ಭಗಳಲ್ಲಿ, ಐಶ್ವರ್ಯಾ ಧರಿಸಿರುವ ಬಟ್ಟೆಗಳು,  ಕಿಯಾರಾ ಅಡ್ವಾಣಿಯ ಪಾತ್ರದಂತಹ ಪರಿಕರಗಳು ಮತ್ತು ಆಕೆಯ ಸ್ಟೈಲ್‌ ಸಹ ಕಿಯಾರಾವನ್ನು ಹೋಲುತ್ತದೆ. ಅದೇ ಸಮಯದಲ್ಲಿ, ಅವರ ಅನೇಕ ಲುಕ್‌ಗಳುಕಿಯಾರಾಗಿಂತ ಚೆನ್ನಾಗಿ ಕಾಣುತ್ತವೆ. ಅಂದಹಾಗೆ, ಐಶ್ವರ್ಯಾ ಕೂಡ ಒಬ್ಬ ನಟಿಗೆ ಕಡಿಮೆಯಿಲ್ಲ. ಐಶ್ವರ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವೀಡಿಯೊಗಳನ್ನು ಹಂಚಿಕೊಂಡರು, ಅದರಲ್ಲಿ ಅವರು ನಟಿ ಕಿಯಾರಾಳನ್ನು ನಕಲಿಸುತ್ತಿರುವುದನ್ನು ನೋಡಬಹುದು
 

56

ಕಿಯಾರಾ ಶೇರ್ಶಾ ಚಿತ್ರದಲ್ಲಿ ಡಿಂಪಲ್ ಚೀಮಾ ಪಾತ್ರವನ್ನು ನಿರ್ವಹಿಸಿದ್ದಾರೆ. ಡಾಕ್ಟರ್ ಐಶ್ವರ್ಯಾ ಕೂಡ ಕಿಯಾರಾರ ಅದೇ ಶೈಲಿಯಲ್ಲಿ ನಕಲು ಮಾಡುವಂತೆ ಕಂಡುಬಂದರು. ಕಿಯಾರ  ಲುಕ್‌ ಅಲೈಕ್‌ ಡಾ  ಐಶ್ವರ್ಯಾ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸ್‌ರ್‌. 

66

ಅವರ ಸ್ಟೈಲ್‌ ಅನ್ನು ನೋಡಿ  ಫಾಲೋವರ್ಸ್‌ ಸಂಖ್ಯೆ ಹೆಚ್ಚುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಿಯಾರಾರ ಲುಕ್‌ ಕಾಪಿ ಮಾಡಿದ ನಂತರ  ಡಾ.ಐಶ್ವರ್ಯಾ ಅವರ ಅನುಯಾಯಿಗಳು ನಿರಂತರವಾಗಿ ಹೆಚ್ಚುತ್ತಿದ್ದಾರೆ. ಐಶ್ವರ್ಯಾ ಅವರ ಅಭಿಮಾನಿಗಳು   ವಿಡಿಯೋ ಮಾಡಲು ಕೇಳುತ್ತಾರೆ. ಐಶ್ವರ್ಯ ಕೂಡ ತನ್ನ ಅಭಿಮಾನಿಗಳನ್ನು ನಿರಾಶೆಗೊಳಿಸುವುದಿಲ್ಲ. 

click me!

Recommended Stories