ಟ್ವಿಟರ್‌ನಲ್ಲಿದ್ದಾಗ ಪ್ರತಿ ದಿನ ಕಂಗನಾ ವಿರುದ್ಧ 200 FIR ದಾಖಲು

First Published Sep 12, 2021, 10:12 AM IST
  • ಟ್ವಿಟರ್‌ನಲ್ಲಿದ್ದಾಗ ಪ್ರತಿದಿನ 200 ಎಫ್‌ಐಆರ್ ದಾಖಲು
  • ಕಂಗನಾ ರಿವೀಲ್ ಮಾಡಿದ್ರು ಕೇಸ್‌ಗಳ ಸಂಖ್ಯೆ

ಕಪಿಲ್ ಶರ್ಮಾ ಶೋ ಮತ್ತೆ ಬಂದಿದೆ. ಬೆಲ್ ಬಾಟಮ್ ಮತ್ತು ಭುಜ್: ದಿ ಪ್ರೈಡ್ ಆಫ್ ಇಂಡಿಯಾವನ್ನು ಪ್ರಮೋಟ್ ಮಾಡಲು ಕಪಿಲ್ ಶರ್ಮಾ ಅವರ ಹಾಸ್ಯ ಕಾರ್ಯಕ್ರಮದ ಹೊಸ ಸೀಸನ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ವೇದಿಕೆಯನ್ನು ಅಲಂಕರಿಸಿದರು.

ಕಪಿಲ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ನಟಿ ಕಂಗನಾ ರಣಾವತ್ ಭಾಗವಹಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತನ್ನ ತಲೈವಿ ಸಿನಿಮಾವನ್ನು ಪ್ರಚಾರ ಮಾಡಿದ್ದಾರೆ. ಇದು ದಿವಂಗತ ನಟಿ ಮತ್ತು ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಅವರ ಜೀವನವನ್ನು ಆಧರಿಸಿದ ಸಿನಿಮಾ.

ಶೋನಲ್ಲಿ ಕಂಗನಾ ತನ್ನ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಹೊರತುಪಡಿಸಿ ನಟಿ ಈ ವರ್ಷದ ಆರಂಭದಲ್ಲಿ ತನ್ನ ಟ್ವಿಟರ್ ಖಾತೆಯನ್ನು ನಿಷೇಧಿಸಿದ ಬಗ್ಗೆಯೂ ಮಾತನಾಡಿದ್ದಾರೆ.

ತನ್ನ ಟ್ವಿಟ್ಟರ್ ನಿಷೇಧದ ಬಗ್ಗೆ ತನ್ನ ಹಳೆಯ ಕ್ಲಿಪ್ ಅನ್ನು ತೋರಿಸುವ ಮೂಲಕ ಸಂಭಾಷಣೆಯನ್ನು ಆರಂಭಿಸಿದ್ದಾರೆ. ಶಾಹಿದ್ ಕಪೂರ್ ಜೊತೆ ರಂಗೂನ್ ಅನ್ನು ಪ್ರಚಾರ ಮಾಡಲು ಆಕೆ ತನ್ನ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಮಯದ ನೆನಪಿಗೆ ಕಪಿಲ್ ಕಂಗನಾರನ್ನು ಕರೆದುಕೊಂಡು ಹೋಗಿದ್ದಾರೆ.

कंगना ने 2006 में आई फिल्म गैंगस्टर से इंडस्ट्री में कदम रखा था। इसके बाद वे फिल्म वो लम्हे में नजर आई थी। इस फिल्म के डायरेक्टर मोहित सूरी थे और प्रोड्यूसर महेश भट्ट। एक इंटरव्यू में कंगना की बहन रंगोली ने बताया था फिल्म वो लम्हे के प्रीमियर पर महेश भट्ट ने कंगना को चप्पल फेंक कर मारी थी। कंगना को उसकी ही फिल्म देखने से रोक दिया था। वो पूरी रात रोती रही। उस वक्त वो 19 साल थी।

ವಿಡಿಯೋದಲ್ಲಿ ಕಂಗನಾ ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ವೀಡಿಯೊ ಮುಗಿದ ನಂತರ ಕಂಗನಾ ಜೋರಾಗಿ ನಗುತ್ತಾ, ಕೊರೋನವೈರಸ್ ಇಲ್ಲದಿದ್ದಾಗ, ನಾನು ಕಾರ್ಯನಿರತವಾಗಿದ್ದೆ. ಮತ್ತು ಕೋವಿಡ್ -19  ರಾಷ್ಟ್ರವನ್ನು ಆವರಿಸಿ ಲಾಕ್‌ಡೌನ್ ಆದಾಗ ನಾನು ಟ್ವಿಟರ್ ಸೇರಿಕೊಂಡೆ. ಲಾಕ್‌ಡೌನ್ ಮುಗಿದಾಗ ಟ್ವಿಟರ್ ನನ್ನನ್ನು ಬ್ಯಾನ್ ಮಾಡಿತು ಎಂದಿದ್ದಾರೆ.

ಟ್ವಿಟರ್ ವೇದಿಕೆಯಲ್ಲಿ ಆರು ತಿಂಗಳು ನನಗೆ ಉಳಿಯಲು ಸಾಧ್ಯವಾಗಲಿಲ್ಲ ಎಂದು ನಟಿ ಹೇಳಿದ್ದಾರೆ. ನನ್ನ ವಿರುದ್ಧ ಹಲವು ಪ್ರಕರಣಗಳಿವೆ. ಪ್ರತಿದಿನ ನನ್ನ ವಿರುದ್ಧ 200 ಎಫ್‌ಐಆರ್‌ ದಾಖಲಿಸಲಾಗಿದೆ. ನಂತರ, ಟ್ವಿಟರ್ ನನ್ನನ್ನು ನಿಷೇಧಿಸಲು ನಿರ್ಧರಿಸಿತು ಎಂದಿದ್ದಾರೆ.

ನಟಿ ಟ್ವಿಟ್ಟರ್‌ನಲ್ಲಿ ಇಲ್ಲದಿದ್ದರೂ, ಕಂಗನಾ ತನ್ನ ಅಭಿಪ್ರಾಯಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ವ್ಯಕ್ತಪಡಿಸುತ್ತಾಳೆ. ನಟಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳಲ್ಲಿ ತನ್ನ ವಿಪರೀತ ಟೀಕೆಗಳಿಂದಾಗಿ ಆಗಾಗ್ಗೆ ವಿವಾದಗಳಿಗೆ ಗುರಿಯಾಗುತ್ತಾರೆ.

ಕೆಲಸದ ವಿಚಾರದಲ್ಲಿ ನಟಿಯ ಸಿನಿಮಾ ತಲೈವಿ ಸೆಪ್ಟೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಎಎಲ್ ವಿಜಯ್ ನಿರ್ದೇಶನದ ಚಿತ್ರದಲ್ಲಿ ಅರವಿಂದ ಸ್ವಾಮಿ ಜೊತೆ ನಟಿ ಕಾಣಿಸಿಕೊಂಡಿದ್ದರು. ಕಂಗನಾ ಅವರ ಸಿನಿಮಾ ಧಕಾಡ್ ಬಿಡುಗಡೆಗೆ ಸಿದ್ಧವಾಗಿದೆ. ಒಂದು ತಿಂಗಳ ಹಿಂದೆ ಕಂಗನಾ ಬುಡಾಪೆಸ್ಟ್‌ನಲ್ಲಿ ಧಕಾಡ್‌ನ ಚಿತ್ರೀಕರಣವನ್ನು ಮುಗಿಸಿದ್ದರು.

click me!