ಶೆರ್ಲಿನ್ ಚೋಪ್ರಾಗೆ ಹೆಚ್ಚಿದ ತೊಂದರೆ: ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ ನೀಡಿದ ಶಿಲ್ಪಾ ಶೆಟ್ಟಿ ದಂಪತಿ!

Suvarna News   | Asianet News
Published : Oct 16, 2021, 05:22 PM IST

ಅಶ್ಲೀಲ ಪ್ರಕರಣದಲ್ಲಿ (Pornogrphy Case) ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ Raj Kundra) ವಿರುದ್ಧ ಗಂಭೀರ ಆರೋಪ ಮಾಡಿದ್ದ ಶೆರ್ಲಿನ್ ಚೋಪ್ರಾ (Sherlyn Chopra)ಈಗ ಸ್ವತಃ ತೊಂದರೆಯಲ್ಲಿ ಸಿಲುಕಿದ್ದಾರೆ. ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಈಗ ರಾಜ್ ಕುಂದ್ರಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದ್ದಾರೆ. ಈ ಕೇಸ್‌ಗೆ ಸಂಬಂಧಿಸಿದ ವಿವರ ಇಲ್ಲಿದೆ.

PREV
18
ಶೆರ್ಲಿನ್ ಚೋಪ್ರಾಗೆ ಹೆಚ್ಚಿದ ತೊಂದರೆ: ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ ನೀಡಿದ ಶಿಲ್ಪಾ ಶೆಟ್ಟಿ ದಂಪತಿ!

ಅಶ್ಲೀಲ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ಶೆರ್ಲಿನ್ ಚೋಪ್ರಾ ಈಗ ತೊಂದರೆಯಲ್ಲಿ ಸಿಲುಕಿದ್ದಾರೆ. ವಾಸ್ತವವಾಗಿ, ಗುರುವಾರ, ರಾಜ್ ಕುಂದ್ರಾ ಮತ್ತು ಶಿಲ್ಪಾ ಪತ್ರಿಕಾಗೋಷ್ಠಿಯನ್ನು  ಕರೆದಿದ್ದರು

28

ಇದಕ್ಕೂ ಮೊದಲು, ಶೆರ್ಲಿನ್ ವಕೀಲರೊಂದಿಗೆ ಜುಹು ಪೊಲೀಸ್ ಠಾಣೆಗೆ ತಲುಪಿದರು.  ಅಲ್ಲಿ ಶೆರ್ಲಿನ್‌ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದರು. ಅದರಲ್ಲಿ ಕುಂದ್ರಾ ಅವರು ಕೆಲಸಕ್ಕೆ ಹಣ ಪಾವತಿ ಮಾಡಿಲ್ಲ ಎಂದು ಅರೋಪ (Allegation) ಮಾಡಿದ್ದಾರೆ ಶೆರ್ಲಿನ್‌.

38

ಶೆರ್ಲಿನ್ ಅವರ ಈ ನಡೆ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯ ಕೋಪಕ್ಕೆ ಕಾರಣವಾಗಿದೆ. ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ದಂಪತಿ ವಕೀಲರ ಮೂಲಕ ಶೆರ್ಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಹೇಳಿದ್ದಾರೆ ಹಾಗೂ ಅವರ ಲಾಯರ್‌ ಕೂಡ ಈ ಬಗ್ಗೆ  ಹೇಳಿಕೆ ನೀಡಿದ್ದಾರೆ.
 

48

'ಶೆರ್ಲಿನ್ ಚೋಪ್ರಾ ಏನೇ ಮಾಡುತ್ತಿದ್ದರೂ, ಅದು ಕಾನೂನಿನ ವ್ಯಾಪ್ತಿಯಲ್ಲಿರಬೇಕು. ಅವರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ನನ್ನ ಕಕ್ಷಿದಾರನನ್ನು ಮಾನಹಾನಿ ಮಾಡಲು ಸಂಚು ರೂಪಿಸುತ್ತಿದ್ದಾರೆ. ಶೆರ್ಲಿನ್ ಚೋಪ್ರಾ ಸಾರ್ವಜನಿಕವಾಗಿ ಹೇಳಿದ್ದನ್ನೆಲ್ಲ ನ್ಯಾಯಾಲಯದಲ್ಲಿ (Court) ಅವರ ವಿರುದ್ಧ ಬಳಸಲಾಗುವುದು. ಅವರ ವಿರುದ್ಧ ಸಿವಿಲ್ (Civil) ಮತ್ತು ಕ್ರಿಮಿನಲ್ ಮೊಕದ್ದಮೆ (Criminal Case)  ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ' ಎಂದು ಶಿಲ್ಪಾ ಶೆಟ್ಟಿ ಮತ್ತು ರಾಜ್ ಅವರ ವಕೀಲರು ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

58

ಆಗಸ್ಟ್ ತಿಂಗಳಲ್ಲಿ, ಶೆರ್ಲಿನ್ ಚೋಪ್ರಾ ಅವರನ್ನು ರಾಜ್ ಕುಂದ್ರಾ ಪೋರ್ನ್ ಫಿಲ್ಮ್ (Porn Movie) ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರಾಂಚ್‌ನ (Mumbai Crime Branch) ಪ್ರಾಪರ್ಟಿ ಸೆಲ್‌ ವಿಚಾರಣೆಗೆ ಕರೆದಿತ್ತು. ಅದಕ್ಕೂ ಮೊದಲು, ಏಪ್ರಿಲ್ 2021 ರಲ್ಲಿ, ಶೆರ್ಲಿನ್ ಅವರು ಲೈಂಗಿಕ ಕಿರುಕುಳಕ್ಕಾಗಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ (FIR) ದಾಖಲಿಸಿದ್ದರು.

68

ರಾಜ್ ಕುಂದ್ರಾ ಬಲವಂತವಾಗಿ ಮನೆಗೆ ನುಗ್ಗಿ ಮುತ್ತು (Kiss) ಕೊಟ್ಟಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಆರೋಪಿಸಿದ್ದಾರೆ ಮತ್ತು ತನ್ನನ್ನು ಅಡಲ್ಟ್‌ ಇಂಡಸ್ಟರಿಗೆ ಕರೆತಂದವರು ರಾಜ್ ಕುಂದ್ರಾ ಎಂದು ಶೆರ್ಲಿನ್ ಹೇಳುತ್ತಾರೆ. ರಾಜ್‌ ಕುಂದ್ರಾ ಕೇಸ್‌ನಲ್ಲಿ ನಟಿ ಸಕ್ಕತ್‌ ಸುದ್ದಿ ಮಾಡಿದ್ದರು.

78

ಪೊರ್ನ್‌ಗ್ರಾಫಿ (Pornography) ಕೇಸ್‌ಗೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಸುಮಾರು 2 ತಿಂಗಳು ಜೈಲಿನಲ್ಲಿದ್ದರು. ಅವರನ್ನು ಜುಲೈ 19 ರಂದು ಬಂಧಿಸಲಾಯಿತು ಮತ್ತು 62 ದಿನಗಳ ಜೈಲಿನ ನಂತರ bail ಮೇಲೆ ಮನೆಗೆ ಬಂದಿದ್ದಾರೆ ರಾಜ್‌ ಕುಂದ್ರಾ. 

88

ಮುಂಬೈ ಕ್ರೈಂ ಬ್ರಾಂಚ್ (Mumbai Crime Branch) ನ್ಯಾಯಾಲಯದಲ್ಲಿ ರಾಜ್ ಕುಂದ್ರಾ ವಿರುದ್ಧ 1500 ಪುಟಗಳ ಚಾರ್ಜ್ ಶೀಟ್ (Charge Sheet) ಸಲ್ಲಿಸಿದೆ. ಆದಾಗ್ಯೂ, ಈ ಸಂದರ್ಭದಲ್ಲಿ ಗೆಹ್ನಾ ವಶಿಷ್ಠ್ ರಾಜ್ ಕುಂದ್ರಾ ಅವರಿಗೆ ಸಪೋರ್ಟ್‌ ಮಾಡಿದ್ದರು. ಶೆರ್ಲಿನ್ ಚೋಪ್ರಾ ಕೇವಲ ಪ್ರಚಾರ ಪಡೆಯಲು  ರಾಜ್ ಕುಂದ್ರಾ ಅವರ ಮಾನಹಾನಿ ಮಾಡುತ್ತಿದ್ದಾರೆ ಎಂದು ಅವರು ಅರೋಪಿಸಿದ್ದರು.

click me!

Recommended Stories