ಶತ್ರುಘ್ನಾ ಜೊತೆ ಮಗಳ ಮದುವೆ ಮಾಡಲು ತಿರಸ್ಕರಿಸಿದ್ದರು ಸೋನಾಕ್ಷಿ ಅಜ್ಜಿ !

Suvarna News   | Asianet News
Published : Dec 09, 2020, 05:01 PM IST

 ಶಾಟ್‌ಗನ್ ಎಂದು ಕರೆಯಲ್ಪಡುವ ಬಾಲಿವುಡ್ ನಟ ಶತ್ರುಘನ್ ಸಿನ್ಹಾಗೆ  75 ವರ್ಷಗಳ ಸಂಭ್ರಮ. ಡಿಸೆಂಬರ್ 9, 1945ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ ಶತ್ರುಘನ್ ಸಿನ್ಹಾ ಅವರು 'ಪ್ಯಾರ್ ಹೈ ಪ್ಯಾರ್' (1969) ಚಿತ್ರದೊಂದಿಗೆ ಬಾಲಿವುಡ್‌ಗೆ  ಪ್ರವೇಶ ಪಡೆದರು.  ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಶತ್ರುಘನ್ ಸಿನ್ಹಾರ ಪರ್ಸನಲ್‌ ಲೈಫ್‌ ಸಹ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಪೂನಂ ಚಂದ್ರಮಣಿ ಜೊತೆ ಮದುವೆ ಅಥವಾ ರೀನಾ ರೈ ಜೊತೆಯ ರಿಲೆಷನ್‌ಶಿಪ್‌ ಆಗಲಿ ಎರಡೂ ವಿಷಯಗಳು ಬಾಲಿವುಡ್‌ನಲ್ಲಿ ಬಹಳ ಸುದ್ದಿಯಾಗಿತ್ತು. ಸಿನ್ಹಾ  ಜುಲೈ 1980ರಲ್ಲಿ ಪೂನಂ ಚಂದ್ರಮಣಿಯನ್ನು ವಿವಾಹವಾದರು. ಆದರೆ, ಮೊದಲಿಗೆ ಸೋನಾಕ್ಷಿಯ ಅಜ್ಜಿ ಇವರ ಮುಖ ನೋಡಿ ಮದುವೆಯನ್ನು ತಿರಸ್ಕರಿಸಿದ್ದರಂತೆ. ವಿವರ ಇಲ್ಲಿ.

PREV
19
ಶತ್ರುಘ್ನಾ ಜೊತೆ  ಮಗಳ ಮದುವೆ ಮಾಡಲು ತಿರಸ್ಕರಿಸಿದ್ದರು ಸೋನಾಕ್ಷಿ ಅಜ್ಜಿ !

 ಶತ್ರುಘನ್ ಸಿನ್ಹಾ ಮತ್ತು ಅವರ ಪತ್ನಿ ಕೆಲವು ವರ್ಷಗಳ ಹಿಂದೆ ಕಪಿಲ್ ಶರ್ಮಾ ಶೋಗೆ ಆಗಮಿಸಿದಾಗ ಅವರ ಮೊದಲ ಭೇಟಿಯ ಕಥೆಯನ್ನು ವಿವರಿಸಿದರು.

29

ಶತ್ರುಘನ್ ಸಿನ್ಹಾ ಮತ್ತು ಪೂನಂ ಚಂದ್ರಮಣಿ ಮೊದಲ ಬಾರಿಗೆ ರೈಲಿನಲ್ಲಿ ಭೇಟಿಯಾದರು. 'ಪಾಟ್ನಾದಿಂದ ಮುಂಬೈಗೆ ಟ್ರೈನ್‌ ಜರ್ನಿಯಲ್ಲಿ ನಾವು ಮೊದಲ ಬಾರಿಗೆ ಪರಸ್ಪರ ಭೇಟಿಯಾದೆವು. ನಮ್ಮ ಸೀಟ್‌ಗಳು ಮುಖಾಮುಖಿಯಾಗಿದ್ದವು,' ಎಂದು ಪೂನಂ ಹೇಳಿದ್ದರು.

39

'ಆಗ ಇಬ್ಬರೂ ಅಳುತ್ತಿದ್ದೆವು. ಶತ್ರುಘನ್ ತನ್ನ ಹೆತ್ತವರಿಂದ ದೂರವಾಗುತ್ತಿದ್ದರೆ,  ನನ್ನ ತಾಯಿ ನನ್ನನ್ನು ಗದರಿಸಿದ್ದರು. ಪ್ರಯಾಣದುದ್ದಕ್ಕೂ, ಶತ್ರುಜಿ ನನ್ನೊಂದಿಗೆ ಮಾತನಾಡಲು ನೆಪ ಹುಡುಕುತ್ತಿದ್ದರು,' ಎಂದು ಹೇಳಿದ ಪೂನಂ ಸಿನ್ಹಾ.

49

ಅಷ್ಟೇ ಅಲ್ಲ, ಅವರು ಒಮ್ಮೆ ನನ್ನನ್ನು ಮುಟ್ಟಲು ಸಹ ಪ್ರಯತ್ನಿಸಿದರು. ನಂತರ ರೈಲು ಸುರಂಗದ ಮೂಲಕ ಹೋಗುವಾಗ ಅವರು ನನ್ನ ಪಾದಗಳನ್ನು ಮುಟ್ಟುವ ಧೈರ್ಯ ಮಾಡಿದರು. ಆದರೆ, ಅವರು ತುಂಬಾ ಹೆದರಿದ್ದರು, ಇಡೀ ಪ್ರಯಾಣದ ಸಮಯದಲ್ಲಿ ಅವರು ಒಂದು ಮಾತನ್ನೂ ಆಡಲಿಲ್ಲ,'  ಎಂದು ತಮ್ಮ ಮೊದಲ ಭೇಟಿಯ ಬಗ್ಗೆ ಹೇಳಿದರು. 

59

ಶತ್ರುಘನ್ ಅವರ ಸಹೋದರ ರಾಮ್ ಸಿನ್ಹಾ ಮತ್ತು ನಿರ್ದೇಶಕ ಎನ್.ಎನ್. ಸಿಪ್ಪಿ, ಸಂಬಂಧ ಬೆಳೆಸಲು  ನನ್ನ ಮನೆಗೆ ಆಗಮಿಸಿದಾಗ, ಅವರ ಫೋಟೋ ನೋಡಿ ತಾಯಿ ಸಿಟ್ಟಾಗಿ ಇವನು ಕಳ್ಳನ ಹಾಗೆ ಕಾಣುತ್ತಾನೆ ಎಂದಿದ್ದರು ಪೂನಂ. 

69

'ಮುಖದಲ್ಲಿ ಎಷ್ಟು ಕಲೆಗಳಿವೆ. ಹಾಲಿನಂತೆ ಬಿಳಿಯಿರುವ ನನ್ನ ಮಗಳೆಲ್ಲಿ ಮತ್ತು ಈ ಹುಡುಗ ಎಲ್ಲಿ? ಅವನು ಕಳ್ಳನ ಪಾತ್ರ ಮಾಡುತ್ತಾನೆ.ಎಂದು ಹೇಳುತ್ತಾ ತನ್ನ ತಾಯಿ ಸಂಬಂಧವನ್ನು ತಿರಸ್ಕರಿಸಿದರು. ಆದರೆ, ನಂತರ ನನ್ನ ಪೋಷಕರು ಮದುವೆಗೆ ಒಪ್ಪಿದರು' ಎಂದು ಹೇಳಿದರು. 

79

1980 ರ ಜುಲೈ 9 ರಂದು ಶತ್ರು ನಟಿ ಪೂನಂ ಚಂದ್ರಮಣಿಯನ್ನು ವಿವಾಹವಾದರು. ಇದೇ ಸಮಯದಲ್ಲಿ ಶತ್ರುಘನ್ ಅವರ ಹೆಸರು ರೀನಾ ರೈ ಜೊತೆ ಕೇಳಿ ಬಂದಿತ್ತು  ಸಂದರ್ಶನವೊಂದರಲ್ಲಿ ಅವರು ರೀನಾ ಜೊತೆ ಸಂಬಂಧ 7 ವರ್ಷಗಳ ಕಾಲ ಇತ್ತು ಎಂದಿದ್ದರು.

89

ಮತ್ತೊಂದು ಸಂದರ್ಶನದಲ್ಲಿ, ಶತ್ರುಘನ್  ಪತ್ನಿ ಪೂನಮ್  ತಮ್ಮ ಪತಿ ಮತ್ತು ರೀನಾ  ಸಂಬಂಧದ ಬಗ್ಗೆ ಎಲ್ಲಾ ತಿಳಿದಿತ್ತು ಎಂದು  ಬಹಿರಂಗಪಡಿಸಿದರು.
 
99

ರೀನಾ ಮತ್ತು ಶತ್ರುಘನ್ ಸಂಬಂಧದ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ ಪೂನಂಗೆ ಬೇಸರವಾಯಿತು. ಅವರು ಶತ್ರುಘನ್‌ಗೆ ಸಾಕಷ್ಟು ತಿಳಿ ಹೇಳಿದರು. ನಟ ಪ್ರೀತಿ  ಅಥವಾ ಮದುವೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದರು. ಅಂತಿಮವಾಗಿ ಫ್ಯಾಮಿಲಿಗಳ ಮಾತಿಗೆ ಒಪ್ಪಿ ರೀನಾರನ್ನು ಬಿಟ್ಟು,  ಪೂನಂ ಜೊತೆ ಸಂಸಾರ ಮುಂದುವರಿಸಿದರು ಸಿನ್ಹಾ .
 
click me!

Recommended Stories