ಅನಂತ್ ನಾಗ್-ಲಕ್ಷ್ಮಿಯಂತೆ ಬಾಲಿವುಡ್‌ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡುವಾಸೆ ಫ್ಯಾನ್ಸ್‌ಗೆ!

Published : Nov 15, 2023, 03:09 PM ISTUpdated : Nov 15, 2023, 03:32 PM IST

ಕನ್ನಡದ ಅಂಬರೀಷ್-ಅಂಬಿಕಾ, ಅನಂತ್‌ನಾಗ್-ಲಕ್ಷ್ಮಿಯಂತೆ ಬಾಲಿವುಡ್‌ನಲ್ಲಿಯೂ ಕೆಲವು ನಟ-ನಟಿಯರ ಜೋಡಿ ಮೋಡಿ ಮಾಡಿದೆ. ಮಾಡಿದ್ದು ಒಂದೆರಡು ಚಿತ್ರಗಳಲ್ಲಾದರೂ ಇನ್ನೂ ಪ್ರೇಕ್ಷಕರ ಮನದಲ್ಲಿ ಸದಾ ನೆಲೆಸಿರುತ್ತಾರೆ. ಇವರಲ್ಲಿ ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ನಟನಯಿಂದ ದೂರ ಉಳಿದರೆ ಇನ್ನು ಕೆಲವರು ಬಾಲಿವುಡ್ ತೊರೆದು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಆದರೂ ಈ ಜೋಡಿಯನ್ನು ಸದಾ ಸ್ಮರಿಸುತ್ತಾರೆ ಬಾಲಿವುಡು ಸಿನಿ ವೀಕ್ಷಕರು. 

PREV
110
ಅನಂತ್ ನಾಗ್-ಲಕ್ಷ್ಮಿಯಂತೆ ಬಾಲಿವುಡ್‌ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡುವಾಸೆ ಫ್ಯಾನ್ಸ್‌ಗೆ!
ಫರಾ ಅಖ್ತರ್-ಪ್ರಿಯಾಂಕಾ ಚೋಪ್ರಾ

ದಿಲ್ ಧಡಕ್ನೇ ದೋ ಮೂಲಕ ಕಮಾಲ್ ಮಾಡಿದ ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಲು ಬಯಸುತ್ತಾರೆ ಫ್ಯಾನ್ಸ್. ಆದರೆ, ಪ್ರಿಯಾಂಕಾ ಮದುವೆಯಾಗಿ ಅತ್ತ ಅಮೆರಿಕದತ್ತ ಮುಖ ಮಾಡಿದ್ದಾರೆ. ನಿಕ್ ಜೋನಾಸ್ ಜೊತೆ ಸಂಸಾರ ಮಾಡ್ಕೊಂಡು, ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ

210
ಸಲ್ಮಾನ್ ಖಾನ್-ಅನುಷ್ಕಾ ಶರ್ಮಾ

ಸುಲ್ತಾನ್ ಚಿತ್ರದಲ್ಲಿ ಮೋಡಿ ಮಾಡಿದ ಈ ಜೋಡಿಯನ್ನು ಮತ್ತೆ ಬೆಳ್ಳಿ ತೆರೆ ಮೇಲೆ ನೋಡಲು ವೀಕ್ಷಕರು ಉತ್ಸುಕರಾಗಿದ್ದಾರೆ. ಆದರೆ, ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ, ಮೊದಲ ಮಗುವನ್ನು ಸ್ವಾಗತಿಸಿದ ನಂತರವೇ ಬಹುತೇಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. 

310
ಶಾರುಖ್ ಖಾನ್-ಜೂಹಿ ಚಾವ್ಲಾ

ಫಿರ್ ಬಿ ದಿಲ್ ಹೈ ಹಿಂದೂಸ್ತಾನಿ ಚಿತ್ರ ಅಂದು ಕೊಂಡಷ್ಟು ಬಾಕ್ಸ್ ಆಫೀಸನಲ್ಲಿ ಯಶ ಕಾಣದೇ ಹೋದರೂ, ಈ ಜೋಡಿ ಮಾಡಿದ ಕಮಾಲ್ ಅಷ್ಟಿಷ್ಟಲ್ಲ. ಅತ್ಯುತ್ತಮ ಸ್ನೇಹಿತರಾಗಿರುವ ಈ ನಟರಿಬ್ಬರು ಮತ್ತೆ ಮತ್ತೆ ಚಿತ್ರಗಳನ್ನು ಮಾಡಲೆಂಬುವುದು ಸಿನಿ ಪ್ರಿಯರ ಅಂಬೋಣ. 

410
ದೀಪಿಕಾ ಪಡುಕೋಣೆ-ಸೈಫ್ ಆಲಿ ಖಾನ್

ಲವ್ ಆಜ್ ಕಲ್ ಮತ್ತು ಕಾಕ್ಟೈಲ್‌ನಲ್ಲಿ ಮಾಡರ್ನ್ ರೊಮ್ಯಾನ್ಸ್ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಈ ಜೋಡಿ ಮತ್ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಮುಂದಾದರೂ ನಟಿಸಲಿ ಅಂತಿದ್ದಾರೆ ಬಾಲಿವುಡ್ ಚಿತ್ರ ನೋಡೋರು.
 

510
ರಣವೀರ್ ಸಿಂಗ್ ಸೊನಾಕ್ಷಿ ಸಿನ್ಹಾ

ಮದುವೆಯಾಗುತ್ತಾರೆ ಎಂಬ ಗಾಸಿಪ್ ಇರೋ ಶತ್ರುಘ್ನಾ ಸಿನ್ಹಾ ಮಗಳು ಸೋನಾಕ್ಷಿ ಹಾಗೂ ದೀಪಿಕಾ ಪಡುಕೋಣೆ ಗಂಡ ರಣವೀರ್ ಸಿಂಗ್ ಲೂಟೇರಾ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಈ ಜೋಡಿಯ ಕೆಮಿಸ್ಟ್ರಿಯನ್ನು ಸಿಕ್ಕಪಟ್ಟೆ ಹಚ್ಚಿಕೊಂಡು ಸಿನಿ ಪ್ರಿಯರು ಮತ್ತೊಮ್ಮೆ ಒಂದಾಗಲೆಂದು ಆಶಿಸುತ್ತಿದ್ದಾರೆ. 

610
ಐಶ್ವರ್ಯಾ ರೈ ಬಚ್ಚನೆ-ಅಜಯ್ ದೇವಗನ್

ಹಮ್ ದಿಲ್ ದೇ ಚುಕೇ ಸನಮ್‌ನಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ರೊಮ್ಯಾನ್ಸ್ ನಿಜ ಜೀವನದಲ್ಲಿಯೂ ಮುಂದುವರಿದಿದ್ದು ಇತಿಹಾಸ. ಆದರೆ, ಡೀಸೆಂಟ್ ಆಗಿ ಪತ್ನಿಯನ್ನು ಪ್ರೀತಿಸುವ ಹಾಗೂ ಗೌರವಿಸುವ ಅಜಯ್ ದೇವಗನ್ ಹಾಗೂ ಐಶ್ವರ್ಯಾ ರೈ ಜೋಡಿ ಮೋಡಿ ಮಾಡಿದ್ದೇನೂ ಕಡಿಮೆ ಇಲ್ಲ. ಮತ್ತೊಬಮ್ಮೆ ಇವರು ಒಂದಾಗಲಿ ಅಂತಿದ್ದಾರೆ ಪ್ರೇಕ್ಷಕರು.

710
ಆಮೀರ್ ಖಾನ್-ಕಾಜೋಲ್

ಫನಾದಲ್ಲಿ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದ ಆಮೀರ್ ಖಾನ್ ಮತ್ತು ಕಾಜೋಲ್ ಜೋಡಿ ಮತ್ಯಾವಾಗ ಮೋಡಿ ಮಾಡ್ತಾರೋ ಅಂತ ಕಾಯುತ್ತಿದ್ದಾರೆ ಫ್ಯಾನ್ಸ್. 
 

810
ವಿಕಿ ಕೌಶಲ್-ಶ್ವೇತಾ ತ್ರಿಪಾಠಿ


ಮಸಾನ್ ದುರಂತ ಅಂತ್ಯವಿರೋ ಚಿತ್ರ.  ಇದರಲ್ಲಿ ನಟಿಸಿರೋ ವಿಕ್ಕಿ ಕೌಶಲ್ ಮತ್ತು ಶ್ವೇತಾ ತ್ರಿಪಾಠಿ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ನೋಡುವ ಆಸೆ ಅಭಿಮಾನಿಗಳಿಗೆ.

910
ಹೃತಿಕ್ ರೋಷನ್-ಪ್ರೀತಿ ಜಿಂಟಾ

ಲಕ್ಷ್ಯ, ಕೋಯಿ ಮಿಲ್ ಗಯಾದಲ್ಲಿ ಮೋಡಿದ ಮಾಡಿದ ಹೃತಿಕ್-ಪ್ರೀತಿಯ ಕೆಮಿಸ್ಟ್ರಿಯನ್ನು ಬಾಲಿವುಡ್ ಫ್ಯಾನ್ಸ್ ಮರೆಯಲು ಸಾಧ್ಯವೇ ಇಲ್ಲ. ಇದೀಗ ಈ ಚಿತ್ರಗಳು ರಿಲೀಸ್ ಆಗಿ ದಶಕಗಳೇ ಕಳೆದರೂ ಮತ್ತೊಮ್ಮೆ ಮೋಡಿ ಮಾಡಲಿ ಅಂತ ಕಾಯುತ್ತಿದ್ದಾರೆ ಮಂದಿ. 
 

1010
ಪರಿಣೀತಿ ಚೋಪ್ರಾ-ಸಿದ್ಧಾರ್ಥ್ ಮಲ್ಹೋತ್ರಾ

ಹಸೀ ತೋ ಫಸೀಯಲ್ಲಿ ಮೋಡಿ ಮಾಡಿದ ಈ ಜೋಡಿಯನ್ನು ಮತ್ತೊಮ್ಮೆ ತೆರೆ ಮೇಲೆ ನೋಡುವಾಸೆ ಫ್ಯಾನ್ಸ್‌ಗೆ. ಇತ್ತೀಚೆಗೆ ಸಪ್ತಪದಿ ತುಳಿದಿದ್ದಾರೆ ಈ ಇಬ್ಬರು. 


 

Read more Photos on
click me!

Recommended Stories