ಶನಾಯಾ ನಟನೆ ಮೆಚ್ಚದ ನೆಟ್ಟಿಗ್ಗರು: ಟ್ರೋಲ್‌ ಆಗುತ್ತಿರುವ ಸಂಜಯ್‌ ಕಪೂರ್ ಪುತ್ರಿ!

Suvarna News   | Asianet News
Published : Sep 03, 2021, 04:42 PM IST

ಶನಾಯಾ ಕಪೂರ್ ಒಂದು ಜಾಹೀರಾತಿನ ಮೂಲಕ ತನ್ನ ಚೊಚ್ಚಲ ನಟನೆಯನ್ನು ಮಾಡಿದ್ದಾರೆ. ಅನನ್ಯ ಪಾಂಡೆ ಮತ್ತು ಶನಾಯಾ ಅವರ ಧ್ವನಿ ಮತ್ತು ನಟನೆಯ ನಡುವಿನ ಹೋಲಿಕೆಯಿಂದ ನೆಟಿಜನ್‌ಗಳು ನಿರಾಶೆಗೊಂಡಿದ್ದಾರೆ ಮತ್ತು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.   

PREV
17
ಶನಾಯಾ ನಟನೆ ಮೆಚ್ಚದ ನೆಟ್ಟಿಗ್ಗರು: ಟ್ರೋಲ್‌ ಆಗುತ್ತಿರುವ  ಸಂಜಯ್‌ ಕಪೂರ್ ಪುತ್ರಿ!

 ಕಪೂರ್ ಫ್ಯಾಮಿಲಿಯ ಇನ್ನೊಂದು ಕುಡಿ ಶನಾಯಾ ಕಪೂರ್. ಅನಿಲ್‌ ಕಪೂರ್‌ ಸಹೋದರ ಸಂಜಯ್ ಕಪೂರ್‌  ಮತ್ತು ಮಹೀಪ್ ಕಪೂರ್ ಅವರ ಮಗಳು. ಶನಯಾ ಕಪೂರ್ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

27

ಶನಾಯಾ ತನ್ನ ಇತ್ತೀಚಿನ ಫೋಟೋ ಶೂಟ್‌ಗಳು ಮತ್ತು ವಿಡಿಯೋಗಳನ್ನು ತನ್ನ ಪಾಲೋವರ್ಸ್‌ ಮತ್ತು ಅಭಿಮಾನಿಗಳಿಗಾಗಿ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯಳಾಗಿದ್ದಾರೆ. ಹಲವು ಬಾರಿ ಶನಾಯಾರ ಬೋಲ್ಡ್‌ ಫೋಟೋಗಳು ವೈರಲ್‌ ಆಗಿವೆ.
 


 

37

ಇತ್ತೀಚೆಗೆ ಶನಾಯಾ ಅವರ ನಟನಾ ಕೌಶಲ್ಯದ ಒಂದು ಝಲಕ್‌ನ  ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಶನಾಯಾರನ್ನು ಒಳಗೊಂಡ ಜಾಹೀರಾತಿನ ವಿಡಿಯೋ ಆಗಿದೆ. ಕರಣ್ ಜೋಹರ್ ಮತ್ತು ಇನ್ನೂ ಹಲವರು ಇದನ್ನು ಶೇರ್‌ ಮಾಡಿದ್ದಾರೆ. 

47

ವಿಡಿಯೋ ತುಣುಕನ್ನು ಹಂಚಿಕೊಂಡ ಜೋಹರ್, 'ಓ ಮೈ ಗಾಡ್‌ , @shanayakapoor02! ನಿಮ್ಮ ಕೂದಲು ಸುಂದರವಾಗಿ ಕಾಣುತ್ತದೆ. ನೀವು ಇದಕ್ಕೂ ಮೊದಲು ಸ್ಪಾಗೆಟ್ಟಿಯ ಬೌಲ್‌ ನೋಡಿದ್ದೀರಾ?' ಎಂದು ಬರೆದು ಕೊಂಡಿದ್ದಾರೆ. 

57

ಆದರೆ ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋದಿಂದ ಹೆಚ್ಚೇನೂ ಖುಷಿಯಾಗಿಲ್ಲ. ಕೆಲವರು ಶನಾಯಾಳನ್ನು ಆಕೆಯ ಬೆಸ್ಟ್ ಫ್ರೆಂಡ್‌ ಅನನ್ಯಾ ಪಾಂಡೆಯೊಂದಿಗೆ ಹೋಲಿಸಲು ಪ್ರಾರಂಭಿಸಿದರು. 'ಇವಳು ಯಾಕೆ ಇಷ್ಟೊಂದು ಅನನ್ಯಾಳಂತೆ,' ಎಂದು ಹೇಳುವ ಒಬ್ಬರು ಕಾಮೆಂಟ್ ಮಾಡಿದ್ದಾರೆ 'ಅವರೆಲ್ಲರೂ ರೀತಿ ಏಕೆ ಒಂದೇ ರೀತಿ ಅನಿಸುತ್ತಾರೆ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.  

67

ಮೂರನೆಯ ಯೂಸರ್‌ 'ಇವಳು ಅನನ್ಯ ಪಾಂಡೆಯಂತೆ ಏಕೆ ಮಾತನಾಡುತ್ತಿದ್ದಾಳೆ' ಎಂದು ಬರೆದಿದ್ದಾರೆ. 'ಸೆಕೆಂಡ್‌ ಅನನ್ಯಾ ಪಾಂಡೆ, ನೀವು ಏಕೆ  ಒವರ್‌ ರಿಯಾಕ್ಷನ್‌ ಇಲ್ಲದೆ ನ್ಯಾಚುರಲ್‌ ಆಗಿ ಆ್ಯಕ್ಟ್ ಮಾಡಲು ಸಾಧ್ಯವಿಲ್ಲವಾ? ಎಂದು ಮತ್ತೊಬ್ಬರು ಬರೆದಿದ್ದಾರೆ.
 

77

ಕೆಲವು ತಿಂಗಳ ಹಿಂದೆ, ಶನಾಯಾ ಇನ್‌ಸ್ಟಾಗ್ರಾಮ್‌ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುವ ವಿಷಯವನ್ನು ಕನ್ಫರ್ಮ್‌ ಮಾಡಿದರು. '@Dcatalent ಕುಟುಂಬದೊಂದಿಗೆ ಒಂದು ಉತ್ತಮ ಪ್ರಯಾಣ ನನ್ನ ಮುಂದಿದೆ . @Dharmamovies ಮೂಲಕ ಈ ಜುಲೈನಲ್ಲಿ ನನ್ನ ಮೊದಲ ಫಿಲ್ಮ್  ಶುರು ಮಾಡಲು ಉತ್ಸುಕಳಾಗಿದ್ದೇನೆ. ಕಾಯಲು ಸಾದ್ಯವಿಲ್ಲ,' ಎಂದು ಬರೆದುಕೊಂಡಿದ್ದರು.

click me!

Recommended Stories