ಶಾರುಖ್ ಮಗ ಅಬ್ರಾಮ್‌ಗೆ ಕಾಜೋಲ್‌ ಇಷ್ಟ ಇಲ್ಲವಂತೆ!

First Published | Sep 2, 2021, 7:38 PM IST

ಶಾರುಖ್ ಖಾನ್ ಮತ್ತು ಕಾಜೋಲ್ ಬಾಲಿವುಡ್‌ನ ಅತ್ಯಂತ ರೊಮ್ಯಾಂಟಿಕ್ ಅನ್‌ಸ್ಕ್ರೀನ್‌ ಜೋಡಿ. ಇಬ್ಬರೂ ಜೊತೆಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಇವರ ಕೆಮಿಸ್ಟ್ರಿಯನ್ನು ಜನರು ಎಂದಿಗೂ ಮರೆಯುವುದಿಲ್ಲ. ಇವುಗಳಲ್ಲಿ 90ರ ದಶಕದಲ್ಲಿ ಬಾಜಿಗರ್, ಕರಣ್ ಅರ್ಜುನ್, ದಿಲ್ವಾಲೆ ದುಲ್ಹಾನಿಯಾ ಲೇ ಜಾಯೇಂಗೆ, ಕುಚ್ ಕುಚ್ ಹೋತಾ ಹೈ ಮತ್ತು ಕಭಿ ಖುಷಿ ಕಭೀ ಘಮ್ ಮುಂತಾದ ಹಲವು ಬ್ಲಾಕ್‌ಬಸ್ಟರ್‌ಗಳು ಸೇರಿವೆ. ಕಾಜೋಲ್ ಮತ್ತು ಶಾರುಖ್ ನಿಜ ಜೀವನದಲ್ಲಿ ತುಂಬಾ ಒಳ್ಳೆ ಸ್ನೇಹಿತರು. ಕಾಜೋಲ್ ಕೂಡ ಖಾನ್ ಕುಟುಂಬಕ್ಕೆ ತುಂಬಾ ಹತ್ತಿರದವರು. ಶಾರುಖ್ ಅವರ ಪತ್ನಿ ಗೌರಿಯಿಂದ ಹಿಡಿದು ಅವರ ಇಬ್ಬರು ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಕೂಡ ಕಾಜೋಲ್ ಅವರನ್ನು ತುಂಬಾ ಇಷ್ಟಪಡುತ್ತಾರೆ, ಆದರೆ ಶಾರುಖ್ ಅವರ ಕಿರಿಯ ಮಗ ಅಬ್ರಾಮ್‌ಗೆ ಕಾಜೋಲ್ ಅಂದರೆ ಇಷ್ಟವಿಲ್ಲವಂತೆ. ಇದಕ್ಕೆ ಕಾರಣವೇನು ಗೊತ್ತಾ?

ತನ್ನ ಕಿರಿಯ ಮಗ ಅಬ್ರಾಮ್ ಕಾಜೋಲ್ ಅನ್ನು ದ್ವೇಷಿಸುತ್ತಿದ್ದನೆಂದು ಸ್ವತಃ ಖಾರುಖ್‌ ಇಂಟರ್‌ವ್ಯೂವ್‌ವೊಂದರಲ್ಲಿ ಹೇಳಿದ್ದರು. ಶಾರುಖ್ ಅವರೇ ಇದರ ಹಿಂದೆ ಇರುವ ದೊಡ್ಡ ಕಾರಣ ಸಹ ಬಹಿರಂಗ ಪಡಿಸಿದ್ದಾರೆ. 

ಒಂದು ಚಿತ್ರದ ಪ್ರಚಾರ ಸಮಾರಂಭದಲ್ಲಿ, ಶಾರಖ್‌ಗೆ ಶೂಟಿಂಗ್‌ ಸಮಯದ ಒಂದು ಇಂಟರೆಸ್ಟಿಂಗ್‌ ಘಟನೆಯನ್ನು ಹಂಚಿಕೊಳ್ಳಲು ಕೇಳಲಾಯಿತು. ಚಿತ್ರೀಕರಣದ ಸಮಯದಲ್ಲಿ ನನಗೆ ಒಂದು ಸೀನ್‌ನಲ್ಲಿ ಪೆಟ್ಟಾಗಿತ್ತು. ಮತ್ತು ಇದಕ್ಕೆ   ಕಾಜೋಲ್ ಕಾರಣ ಎಂದು ಅಬ್ರಾಮ್‌ಗೆ ಎನಿಸಿದೆ.

Tap to resize

ಇದರ ನಂತರ ಅಬ್ರಾಮ್ ಸೆಟ್‌ನಲ್ಲಿಯೇ ಕಾಜೋಲ್‌ ಬಗ್ಗೆ  ತುಂಬಾ ಅಪ್‌ಸೆಟ್‌ ಆಗಿದ್ದ. ಅವನು ಕಾಜೋಲ್‌ನನ್ನು ಸಿಟ್ಟಿನಿಂದ ನೋಡುತ್ತಿದ್ದ ಮತ್ತು ಪಪ್ಪಾಗೆ ನೋವಾಗಿದೆ ಎಂದು ಬಹಳ ಮುಗ್ಧತೆಯಿಂದ ಹೇಳಿದ್ದ. ಅವನಿಗೆ ನಾವು (ಕಾಜೋಲ್ ಮತ್ತು ನಾನು) ಒಟ್ಟಿಗೆ ಇರುವುದು ಇಷ್ಟಪಡಲಿಲ್ಲ. ಇದು ನಿಜವಾಗಿಯೂ ಕ್ಯೂಟ್‌ ವಿಷಯವಾಗಿತ್ತು ಎಂದು ಶಾರುಖ್‌ ಹೇಳಿದ್ದರು.

ಅಂದಹಾಗೆ, ಅಬ್ರಾಮ್ ಮಾತ್ರವಲ್ಲದೆ ಶಾರುಖ್ ಖಾನ್ ಕೂಡ ಕಾಜೋಲ್ ಅವರನ್ನು ದ್ವೇಷಿಸುತ್ತಿದ್ದರು. ಸಂದರ್ಶನದಲ್ಲಿ 'ಬಾಜಿಗರ್' ಚಿತ್ರದ ಸಮಯದಲ್ಲಿ ಕಾಜೋಲ್ ಜೊತೆ ಕೆಲಸ ಮಾಡಿದ ಅನುಭವವನ್ನು ಸ್ವತಃ ಶಾರುಖ್ ಹಂಚಿಕೊಂಡಿದ್ದಾರೆ.

ಬಾಜಿಗರ್‌ನಲ್ಲಿ ಕಾಜೋಲ್ ಜೊತೆ ಕೆಲಸ ಮಾಡುತ್ತಿದ್ದಾಗ, ಅಮೀರ್ ಖಾನ್ ನನಗೆ ಕಾಜೋಲ್‌ ಬಗ್ಗೆ ಕೇಳಿದರು. ಏಕೆಂದರೆ ಅಮೀರ್ ಕೂಡ ಕಾಜೋಲ್ ಜೊತೆ ಕೆಲಸ ಮಾಡಲು ಬಯಸಿದ್ದರು ಎಂದು ಶಾರುಖ್ ಸಂದರ್ಶನದಲ್ಲಿ ಹೇಳಿದ್ದರು. . 

ಅವಳು ತುಂಬಾ ಕೆಟ್ಟವಳು, ಕೆಲಸದ ಮೇಲೆ ಗಮನವಿಲ್ಲ, ನೀನು ಅವಳೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆಮೀರ್‌ಗೆ ನಾನು ಹೇಳಿದ್ದೆ ಎಂದು ಕಿಂಗ್‌ ಖಾನ್‌ ಆರಂಭದ ದಿನಗಳಲ್ಲಿ ಕಾಜೋಲ್‌ ಅವರನ್ನು ಇಷ್ಟಪಡುತ್ತಿರಲಿಲ್ಲ ಎಂದು ರೀವಿಲ್‌ ಮಾಡಿದ್ದರು.

ಆರಂಭದಲ್ಲಿ ಶಾರುಖ್ ಕಾಜೋಲ್‌ನನ್ನು ದ್ವೇಷಿಸುತ್ತಿರಬಹುದು. ಆದರೆ ಈಗ ಇಬ್ಬರೂ ತುಂಬಾ ಒಳ್ಳೇಯ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಎಸ್‌ಆರ್‌ಕೆ ಅವರ ಮಗಳು ಸುಹಾನಾ ನಟನೆಯ ಸೂಕ್ಷ್ಮಗಳನ್ನು ಕಾಜೋಲ್‌ನಿಂದ ಕಲಿಯಬೇಕೆಂದು ಬಯಸುತ್ತಾರೆ. 

ಕಾಜೋಲ್ ಮತ್ತು ಶಾರುಖ್ ಖಾನ್ ಕೊನೆಯದಾಗಿ 2015 ರಲ್ಲಿ 'ದಿಲ್‌ವಾಲೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 'ದಿಲ್‌ವಾಲೆ' ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಶಾರುಖ್ ಈಗ ಪ್ರತಿ ಚಿತ್ರದಲ್ಲೂ ಕಾಜೋಲ್‌ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ದಿಲ್‌ವಾಲೆ ಸಮಯದಲ್ಲಿ, ಕಾಜೋಲ್ 150 ದಿನಗಳ ಕಾಲ ತನ್ನ ಮಕ್ಕಳಿಂದ ದೂರವಿದ್ದರು.

Latest Videos

click me!