ನಟನೆಯಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಟಾಪರ್ಸ್ ಈ ಬಾಲಿವುಡ್‌ ಸ್ಟಾರ್ಸ್!

Published : Nov 27, 2023, 05:20 PM IST

ಸಾಮಾನ್ಯವಾಗಿ ಸಿನಿಮಾ ಕ್ಷೇತ್ರಕ್ಕೂ ಮತ್ತು  ಓದಿಗೂ ಸ್ಪಲ್ಪ ದೂರ ಎಂದರೆ ತಪ್ಪಿಲ್ಲ. ಹೆಚ್ಚಿನ ನಟನಟಿಯರು ನಟನೆಗಾಗಿ ಓದನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ. ಆದರೆ ಕೆಲವು ಸ್ಟಾರ್ಸ್‌ ನಟನೆಯಯ ಜೊತೆ ವಿದ್ಯೆಯಲ್ಲೂ ಮುಂದಿದ್ದಾರೆ. ಬಾಲಿವುಡ್‌ನ ಅತ್ಯಂತ ವಿದ್ಯಾವಂತ ನಟನನಟಿಯರು ಇವರು.

PREV
110
 ನಟನೆಯಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಟಾಪರ್ಸ್ ಈ ಬಾಲಿವುಡ್‌ ಸ್ಟಾರ್ಸ್!

ಶಾರುಖ್ ಖಾನ್:.
ಶಾರುಖ್ ಖಾನ್ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
  

210

ಜಾನ್ ಅಬ್ರಹಾಂ:
ಜಾನ್ ಅಬ್ರಹಾಂ ಮುಂಬೈನ ನಾರ್ಸಿ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ (Management Studies) ಎಂಬಿಎ ಪದವಿ ಪಡೆದಿದ್ದಾರೆ.

.

310

ತಾಪ್ಸಿ ಪನ್ನು:
ತಾಪ್ಸಿ ಪನ್ನು ಐಪಿ ಯೂನಿವರ್ಸಿಟಿ ದೆಹಲಿಯಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ (Computer Science Engineering) ಪದವಿ ಮಾಡಿದ್ದಾರೆ.

410

ಅಮಿತಾಭ್ ಬಚ್ಚನ್:
ಬಾಲಿವುಡ್ ಸೂಪರ್‌ಸ್ಟಾರ್‌ ಅಮಿತಾಭ್ ಬಚ್ಚನ್ ಅವರು ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಇ ಮಾಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪೂರೈಸಿದ್ದಾರೆ.

510

ವಿದ್ಯಾ ಬಾಲನ್:
ಬಾಲಿವುಡ್‌ನಲ್ಲಿ ಫಿಸಿಕ್ ಮುಖ್ಯವಲ್ಲಿ. ಝೀರೋ ಫಿಗರ್ ಇಲ್ಲದಿದ್ದರೂ ನಟನಾ ಕೌಶಲ್ಯದಿಂದಲೇ ಚಿತ್ರ ಗೆಲ್ಲುವಂತೆ ಮಾಡಬಹುದೆಂದು ತೋರಿಸಿದ ಪ್ರತಿಭಾನ್ವಿತ ನಟಿ ವಿದ್ಯಾ ಬಾಲನ್‌ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ (Socioogy) ಸ್ನಾತಕೋತ್ತರ ಪದವಿ ಪಡೆದರು


 

610

ವರುಣ್ ಧವನ್ :
ವರುಣ್‌ ಧವನ್‌ ಅವರು ಯುನೈಟೆಡ್ ಕಿಂಗ್‌ಡಮ್‌ನ ನಾಟಿಂಗ್‌ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ಬ್ಯುಸಿನೆಸ್‌ ಮ್ಯಾನೇಜ್ಮೆಂಟ್‌ ಪದವಿ ಪಡೆದಿದ್ದಾರೆ.

.

710

 ರಣದೀಪ್ ಹೂಡಾ:
 ರನದೀಪ್‌ ಹೂಡಾ ಅವರು ಆಸ್ಟ್ರೇಲಿಯಾದಿಂದ ವ್ಯಾಪಾರ ನಿರ್ವಹಣೆ (Business Management) ಮತ್ತು ಮಾನವ ಸಂಪನ್ಮೂಲ (Human Resources Management) ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು
 

810

ಸಾರಾ ಅಲಿ ಖಾನ್:
ಸಾರಾ ಅಲಿ ಖಾನ್  ಅಮೆರಿಕ ಸಂಯುಕ್ತ ಸಂಸ್ಥಾನದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇತಿಹಾಸ (History) ಮತ್ತು ರಾಜ್ಯಶಾಸ್ತ್ರದಲ್ಲಿ (Political Science) ಪದವಿ ಪಡೆದರು

 

910
Actor Parineeti Chopra warns fake fan pages

ಪರಿಣಿತಿ ಚೋಪ್ರಾ:
ಪರಿಣಿತಿ ಚೋಪ್ರಾ ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್ ಇಂಗ್ಲೆಂಡ್‌ನಿಂದ ಹಣಕಾಸು ವ್ಯವಹಾರ ಮತ್ತು ಅರ್ಥಶಾಸ್ತ್ರದಲ್ಲಿ (Economics) ಟ್ರಿಪಲ್ ಆನರ್ಸ್ ಬ್ಯಾಚುಲರ್ ಪದವಿಯನ್ನು ಹೊಂದಿದ್ದಾರೆ.

1010

ಆಯುಷ್ಮಾನ್ ಖುರಾನಾ:
ಬಾಲಿವುಡ್‌ನ ನಟ ಆಯುಷ್ಮಾನ್ ಖುರಾನಾ  ಪಂಜಾಬಿ ವಿಶ್ವವಿದ್ಯಾಲಯದ ಸ್ಕೂಲ್‌ ಆಪ್‌ ಕಮ್ಯುನಿಕೇಷನ್ಸ್ ಸ್ಟಡೀಸ್   ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Read more Photos on
click me!

Recommended Stories