ಕಂಗನಾ ರಣಾವತ್ ಅವರು ಮಣಿಕರ್ಣಿಕಾ ಕಥೆಯನ್ನು ಕದ್ದಿದ್ದಾರೆ ಎಂದು ನಿರ್ಮಾಪಕ ಕೇತನ್ ಮೆಹ್ತಾ (Kethan Mehta) ಆರೋಪಿಸಿದ್ದರು. ಈ ಬಗ್ಗೆ ಕೇತನ್ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ದು, ತನಗೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂಗನಾ, ಇಬ್ಬರೂ ಸೇರಿ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದರೂ, ನಂತರ ಪರಸ್ಪರ ಭಿನ್ನಾಭಿಪ್ರಾಯದಿಂದ ಇಡೀ ಸಿನಿಮಾವನ್ನು ಏಕಾಂಗಿಯಾಗಿ ಮಾಡಿದ್ದೇವೆ ಎಂದಿದ್ದಾರೆ.