ಕಿರುತೆರೆ ಕಲಾವಿದರ ಮದುವೆ ಸಂಭ್ರಮ; ನಟ ಶಶಿ ಹೆಗ್ಡೆ ಜೊತೆ ಸಪ್ತಪದಿ ತುಳಿದ ದಾಸ ಪುರಂದರ ನಟಿ ಲಾವಣ್ಯ

Published : May 27, 2022, 12:22 PM IST

ಕಿರುತೆರೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅನೇಕ ಕಲಾವಿದರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ನಾಗಿಣಿ-2 ಖ್ಯಾತಿಯ ನಟ ನಿನಾದ್ ಮದುವೆ ಸಂಭ್ರಮದ ಫೋಟೋಗಳು ವೈರಲ್ ಆಗಿತ್ತು. ಇದೀಗ ಮತ್ತಿಬ್ಬರು ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  

PREV
16
ಕಿರುತೆರೆ ಕಲಾವಿದರ ಮದುವೆ ಸಂಭ್ರಮ; ನಟ ಶಶಿ ಹೆಗ್ಡೆ ಜೊತೆ ಸಪ್ತಪದಿ ತುಳಿದ ದಾಸ ಪುರಂದರ ನಟಿ ಲಾವಣ್ಯ

ಕಿರುತೆರೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅನೇಕ ಕಲಾವಿದರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ನಾಗಿಣಿ-2 ಖ್ಯಾತಿಯ ನಟ ನಿನಾದ್ ಮದುವೆ ಸಂಭ್ರಮದ ಫೋಟೋಗಳು ವೈರಲ್ ಆಗಿತ್ತು. ಇದೀಗ ಮತ್ತಿಬ್ಬರು ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

26

ಕಿರುತೆರೆಯ ಖ್ಯಾತ ನಟ ಶಶಿ ಹೆಗ್ಡೆ ಮತ್ತು ನಟಿ ಲಾವಣ್ಯ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಕೆ. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಇವರಿಬ್ಬರು ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ರಾಜ ರಾಣಿ ಧಾರಾವಾಹಿ ಮೂಲಕ ಲಾವಣ್ಯ ಮತ್ತು ಶಶಿ ಇಬ್ಬರ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.

36

ರಾಜ ರಾಣಿಯಿಂದ ಪರಿಚಯವಾಗಿ ಸ್ನೇಹಿತರಾಗಿದ್ದ ಶಶಿ ಮತ್ತು ಲಾವಣ್ಯ ಪರಸ್ಪರ ಪ್ರೀತಿಯಲ್ಲಿದ್ದರು. ಇದೀಗ ಪತಿ-ಪತ್ನಿಯರಾಗಿದ್ದಾರೆ. ಅಂದಹಾಗೆ ನಟಿ ಲಾವಣ್ಯ ಸದ್ಯ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಪದ್ಮ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಶಿ ಸದ್ಯ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

46

ಮದುವೆಯ ಫೋಟೋಗಳನ್ನು ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಪ್ರದಾಯಬದ್ದವಾಗಿ ನಡೆದ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

56
serial

ಇಬ್ಬರ ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ವೈರಲ್ ಆಗಿದೆ. ಫೋಟೋಗಳನ್ನು ಶೇರ್ ಮಾಡಿ ನಟ ಶಶಿ ಸಾಮಾಜಿಕ ಜಾಲತಾಣದಲ್ಲಿ, 'ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿದೆ. ಸಿಕ್ಕಳು ನಮ್ಮ ಮನೆಯ ಅರಸಿ, ನೀವೆಲ್ಲರು ನಮಗೆ ಹರಸಿ' ಎಂದು ಬರೆದುಕೊಂಡಿದ್ದಾರೆ.

66

ಇನ್ನು ಕಿರುತೆರೆಯ ಮತ್ತೋರ್ವ ನಟ ವಿನಯ್ ಕುಮಾರ್ ಸಹ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದ ವಿನಯ್ ಹೊಸ ಜೀವನ ಪ್ರಾರಂಭಿಸಿದ್ದಾರೆ. ವಿನಯ್ ಮದುವೆ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Read more Photos on
click me!

Recommended Stories