20ನೇ ವರ್ಷದ ಬರ್ತ್‌ಡೇ ಸಂಭ್ರಮದಲ್ಲಿ ಕಿಂಗ್‌ ಖಾನ್‌ ಪುತ್ರಿ ಸುಹಾನಾ

Suvarna News   | Asianet News
Published : May 22, 2020, 05:57 PM IST

ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಪುತ್ರಿ ಸುಹಾನಾಳಗೆ 20 ವರ್ಷದ ಸಂಭ್ರಮ. ಅಪ್ಪನ ಮುದ್ದಿನ ಮಗಳು ಸುಹಾನಾ ಮೇ 22, 2000 ರಂದು ಮುಂಬೈನಲ್ಲಿ ಜನಿಸಿದ್ದು. ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಸಖತ್‌ ಫೇಮಸ್‌ ಆಗಿರುವ ಸೆಲೆಬ್ರೆಟಿ ಕಿಡ್. ನಟನೆಯ ಬಗ್ಗೆ ಒಲವು ತೋರುತ್ತಿರುವ ಸುಹಾನಾ ಶೀಘ್ರದಲ್ಲೇ ಬಾಲಿವುಡ್‌ ಪ್ರವೇಶಿಸಲು ತಯಾರಿ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ತಾಯಿ ಗೌರಿ ಖಾನ್ ಸ್ವತಃ ಇದನ್ನು ಬಹಿರಂಗಪಡಿಸಿದ್ದಾರೆ. ಇದರ ತಯಾರಿಯಲ್ಲಿ ಸುಹಾನಾ ಈಗ ಆ್ಯಕ್ಟಿಂಗ್ ಕಲಿಯುತ್ತಿದ್ದಾಳೆ.  

PREV
18
20ನೇ ವರ್ಷದ ಬರ್ತ್‌ಡೇ ಸಂಭ್ರಮದಲ್ಲಿ ಕಿಂಗ್‌ ಖಾನ್‌ ಪುತ್ರಿ ಸುಹಾನಾ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಹಾನಾಳ ಲುಕ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲಿಗೆ  ಭಯದಿಂದ ಹೆತ್ತವರಿಗೆ ಅಂಟುಕೊಂಡಿರುವಂತೆ ಕಾಣುತ್ತಿದ್ದ ಮಗು ಇಂದು ಬಿಂದಾಸ್‌ ಹುಡುಗಿಯಾಗಿದ್ದಾಳೆ.

28

ಸುಹಾನಾ ಇನ್ನೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿಲ್ಲ. ಆದರೆ ಅಭಿಮಾನಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ.

38

ಅಪ್ಮನ ಮುದ್ದಿನ ಮಗಳು ಸುಹಾನಾ ಬಾಲಿವುಡ್‌ಗೆ ಹೆಜ್ಜೆ ಹಾಕುವ ತಯಾರಿಯಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸುತ್ತಿದ್ದಾಳೆ.

48

ಲಂಡನ್‌ನಲ್ಲಿ ಉನ್ನತ ಶಿಕ್ಷಣವನ್ನು ಕಲಿಯುತ್ತಿರುವ ಸುಹಾನಾ ನೃತ್ಯ ಮತ್ತು ಕ್ರೀಡೆಗಳನ್ನು ಪ್ರೀತಿಸುತ್ತಾಳೆ ಹಾಗೂ ಶಾಲೆಯ ಅನೇಕ ಕ್ರೀಡಾಕೂಟಗಳಲ್ಲಿ ಭಾಗಿಯಾಗಿದ್ದಳು. 

58

ಮಗಳು ಉತ್ತಮ ನರ್ತಕಿ ಆಗಿ ಅವಳ ಹೆಸರು ವಲ್ಲ್ಡ್‌ಫೇಮಸ್‌ ಆಗಬೇಕೆಂದು ಪಪ್ಪಾ ಶಾರುಖ್‌ರ ಆಸೆ. ತಂದೆಯಂತೆ ನಟನಾ ಕ್ಷೇತ್ರದಲ್ಲಿ ಕೇರಿಯರ್‌ ಆರಂಭಿಸಲು ಬಯಸುವ ಸುಹಾನಾ ಶಾಲೆಯಲ್ಲಿಯೂ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದಳು.

68

ಆಗಸ್ಟ್ 2018 ರಲ್ಲಿ, 18 ವರ್ಷದ ಸುಹಾನಾ ಪತ್ರಿಕೆಯ ಮುಖಪುಟಕ್ಕೆ ಪಾದಾರ್ಪಣೆ ಮಾಡಿದ್ದು. ಗ್ಲಾಮರ್ ನಿಯತಕಾಲಿಕೆಯ ವೋಗ್ನ ಫ್ರಂಟ್‌ ಪೇಜ್‌ನಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಳು. ಸ್ವತಃ ಶಾರುಖ್ ಮ್ಯಾಗ್‌ಜೀನ್‌ನ ಕವರ್‌ ಪೇಜ್‌ ಲಾಂಚ್‌ ಮಾಡಿದ್ದರು.

78

ಈ ಸಂದರ್ಭದ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಶಾರುಖ್, 'ಮತ್ತೆ ನನ್ನ ಕೈಗಳಿಂಧ ಮಗಳನ್ನು ಮೇಲಕ್ಕೆತ್ತುತ್ತಿದ್ದೇನೆ. ಧನ್ಯವಾದಗಳು ವೋಗ್' ಎಂದು ಪೋಸ್ಟ್‌ ಮಾಡಿದ್ದರು.

88

ಈ ಫೋಟೋ ಚಿತ್ರೀಕರಣ ವೇಳೆ ಗೌರಿ ಸದಾ ಮಗಳೊಂದಿಗೆ ಇರುತ್ತಿದ್ದರಂತೆ. ಶಾರುಖ್ ಅನುಪಸ್ಥಿತಿ ಕಾಡದಂತೆ ಸದಾ ವೀಡಿಯೋ ಕಾಲ್ ಮಾಡುತ್ತಿದ್ದರು, ಎಂದು ಸುಹಾನಾಳನ್ನು  ಚಿತ್ರೀಕರಿಸಿದ ಪ್ರಸಿದ್ಧ ಫ್ಯಾಷನ್ ಫೋಟೋಗ್ರಾಫರ್‌ ಎರಿಕೊಸ್ ಆಂಡ್ರ್ಯೂ ಸಂದರ್ಶನವೊಂದರಲ್ಲಿ ಹೇಳಿದ್ದರು. 

click me!

Recommended Stories