ಶಾಹೀದ್ ಕಪೂರ್ ಹೆಂಡ್ತಿ ಅನ್ನೋದು ಬಿಟ್ರೆ ಮತ್ತೇನೂ ಸಾಧಿಸಿಲ್ಲ! ಮೀರಾ ಕಾಲೆಳೆದ ನೆಟ್ಟಿಗರು!

Published : Nov 27, 2023, 05:36 PM ISTUpdated : Nov 27, 2023, 05:43 PM IST

ಶಾಹಿದ್‌ ಕಪೂರ್‌ (Shahidi Kapoor)  ಅವರನ್ನು ವಿವಾಹ ಆಗಿರು ಮೀರಾ ರಜಪೂತ್‌  (Mira rajput) ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.  ಇತ್ತೀಚಿಗೆ ಇವರು ತಮ್ಮ ಕುಟುಂಬದ ಗೆಟ್‌ ಟುಗೆದರ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಬಿ- ಟೌನ್‌ನ ಫೇಮಸ್‌ ಸ್ಟಾರ್‌ ಪತ್ನಿ ಮೀರಾ ರಜಪೂತ್ ನೆಟ್ಟಿಗ್ಗರಿಂದ ಆಗಾಗ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಜನ ಮೀರಾ ಬಗ್ಗೆ ಏನು ಹೇಳುತ್ತಾರೆ ನೋಡಿ.

PREV
110
ಶಾಹೀದ್ ಕಪೂರ್ ಹೆಂಡ್ತಿ ಅನ್ನೋದು ಬಿಟ್ರೆ ಮತ್ತೇನೂ ಸಾಧಿಸಿಲ್ಲ! ಮೀರಾ ಕಾಲೆಳೆದ ನೆಟ್ಟಿಗರು!

ನವೆಂಬರ್ 26, 2023 ರಂದು ಇನ್‌ಸ್ಟಾಗ್ರಾಮ್‌ ಸ್ಟೋರಿಗಳಲ್ಲಿ ಮೀರಾ ರಜಪೂತ್ ಕಪೂರ್ ತನ್ನ ಕುಟುಂಬದ ಗೆಟ್-ಟುಗೆದರ್‌ನಿಂದ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

210

ಶಾಹಿದ್ ಮತ್ತು ಮೀರಾ ಜೊತೆಯಾಗಿ ಪೋಸ್ ನೀಡಿದ್ದಾರೆ. ಶಾಹಿದ್ ಕಸ್ಟಮೈಸ್ ಮಾಡಿದ ಬೂದು-  ಹೂಡಿಯನ್ನು ಧರಿಸಿದ್ದಾರೆ. ಅದರ ಮೇಲೆ ಅವರ ಸರ್‌ನೇಮ್‌   ಹಿಂದಿಯಲ್ಲಿ ಬರೆಯಲಾಗಿದೆ. ಪತ್ನಿ ಮೀರಾ ಕಪ್ಪು ಪ್ಯಾಂಟ್‌ನೊಂದಿಗೆ ಬೀಜ್- ಹೂಡಿಯಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ. 

310

ಮತ್ತೊಂದು ಫೋಟೋದಲ್ಲಿ ಸ್ಟಾರ್ ದಂಪತಿಗಳು ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ  ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ.


 

410

ಇನ್ನೊಂದು ಫೋಟೋ ಶಾಹಿದ್ ಮತ್ತು ಮೀರಾ ಅವರ ಕುಟುಂಬದ ಗೆಟ್‌ ಟುಗೆದರ್‌ಗೆ ಆಯೋಜಿಸಿದ  ಸಿಹಿ ತಿಂಡಿಗಳ ಸ್ನೀಕ್ ಪೀಕ್ ಅನ್ನು ಸಹ  ಹಂಚಿಕೊಂಡಿದ್ದಾರೆ.

510

ದೀಪಾವಳಿ ಸಮಯದಲ್ಲಿ, ಮೀರಾ ಪತಿ ಶಾಹಿದ್ ಕಪೂರ್ ಅವರೊಂದಿಗೆ ಕೆಲವು ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ನಟ ಕಪ್ಪು ಕುರ್ತಾದಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿ ಮೀರಾ ಸೀರೆಗೆ ತೋಳಿಲ್ಲದ ಚೋಲಿ ಮತ್ತು ಸ್ಟೇಟ್‌ಮೆಂಟ್ ಚೋಕರ್‌ನೊಂದಿಗೆ ತನ್ನ ನೋಟವನ್ನು ಪೂರ್ಣಗೊಳಿಸಿದ್ದರು.

610

ಶಾಹಿದ್  ಕಪೂರ್‌ ಪತ್ನಿ ಮೀರಾ ರಜಪೂತ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ತಮ್ಮ ಜೀವನದ ಅಪ್ಡೇಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

710

 ಅಷ್ಟೇ ಅಲ್ಲ ಪಾಪ್‌ಗಳ ಕ್ಯಾಮರಾಗಳಲ್ಲೂ ಸೆರೆಯಾಗುವ ಮೀರಾರ ಫೋಟೋ ವೀಡಿಯೋಗಳು ನೆಟ್ಟಿಗ್ಗರಿಂದ ಟ್ರೋಲ್‌ಗಳಿಗೆ ಗುರಿ ಸಹ ಆಗುತ್ತಲೇ ಇರುತ್ತವೆ. 

810

ಸೋಶಿಯಲ್‌ ಮೀಡಿಯಾದಲ್ಲಿ ಮೀರಾ ರಜಪೂತ್ ಅವರಿಗೆ ಜಂಭ, ಆಟಿಟ್ಯೂಡ್‌, ಶೋ ಆಫ್‌ ಎಂಬ ಕಾಮೆಂಟ್‌ಗಳು ಕಾಣಿಸುತ್ತಲೇ ಇರುತ್ತದೆ.

910

 ಶಾಹಿದ್‌ ಕಪೂರ್‌ ಹೆಂಡತಿಯ ಎನ್ನುವುದು ಬಿಟ್ಟರೆ ಯಾವ ಸಾಧನೆಯೂ ಮಾಡಿಲ್ಲ ಎಂದೂ ಜನ ಮೀರಾರನ್ನು ಟ್ರೋಲ್‌ ಮಾಡುವುದು ಕಾಣಬಹುದಾಗಿದೆ. 

1010

ಜುಲೈ 7, 2015ರಂದು ನಟ ಶಾಹಿದ್ ಕಪೂರ್ ಮೀರಾ ರಜಪೂತ್ ಅವರನ್ನು ವಿವಾಹವಾದರು. ಈ ಜೋಡಿ ಮಿಶಾ ಮತ್ತು ಜೈನ್ ಎಂಬ ಇಬ್ಬರು ಮುದ್ದು ಮಕ್ಕಳ ಪೋಷಕರಾಗಿದ್ದಾರೆ.

Read more Photos on
click me!

Recommended Stories