ಶಾರೂಖ್ ಮಗನಿಗೆ ಜೈಲ್ ಕ್ಯಾಂಟೀನ್‌ನ ವಡಾಪಾವ್, ಸಮೋಸವೇ ಗತಿ

Published : Oct 16, 2021, 11:07 AM ISTUpdated : Oct 16, 2021, 02:08 PM IST

ಸ್ಟಾರ್ ನಟ ಶಾರೂಖ್ ಮಗನಿಗೆ ಇದೆಂಥಾ ಸ್ಥಿತಿ ? ಜೈಲ್ ಕ್ಯಾಂಟೀನ್‌ ಸಮೋಸಾದಲ್ಲಿ ದಿನ ಕಳೆಯಬೇಕಿದೆ ಆರ್ಯನ್ ಖಾನ್

PREV
19
ಶಾರೂಖ್ ಮಗನಿಗೆ ಜೈಲ್ ಕ್ಯಾಂಟೀನ್‌ನ ವಡಾಪಾವ್, ಸಮೋಸವೇ ಗತಿ

ಆರ್ಯನ್ ಖಾನ್ ಅರೆಸ್ಟ್ ಆಗಿ ವಾರ ಕಳೆಯಿತು. ಆದರೆ ಬಾಲಿವುಡ್ ಕಿಂಗ್ ಖಾನ್ ಪುತ್ರನಿಗೆ ಬೇಲ್ ಸಿಕ್ಕಿಲ್ಲ. ಹೀಗಾಗಿ ಆರ್ಯನ್ ಖಾನ್ ಜೈಲಿನಲ್ಲಿ ಉಳಿಯಬೇಕಾಗಿರುವುದು ಅನಿವಾರ್ಯವಾಗಿದೆ.

29

ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ದುಬಾರಿ ಬೆಲೆಯ ತಿನಿಸು ಅರೆಬರೆ ತಿಂದು ಅಷ್ಟೂ ಆಹಾರ ಟೇಬಲ್ ಮೇಲೆ ಬಿಟ್ಟು ಏಳುತ್ತಿದ್ದ ಬಾಲಿವುಡ್ ಸ್ಟಾರ್ ದಂಪತಿ ಪುತ್ರನಿಗೆ ಈಗ ಜೈಲಿನ ಆಹಾರವೇ ಗತಿ.

39

ಜೈಲಿನ ಆಹಾರವನ್ನು ಖಡಾಖಂಡಿತ ನಿರಾಕರಿಸಿದ ಆರ್ಯನ್ ಖಾನ್ ಈಗ ಕ್ಯಾಂಟೀನ್‌ನ ಕೆಲವು ಆಹಾರ ಸೇವಿಸುತ್ತಾರೆ ಎನ್ನಲಾಗಿದೆ. ತಾವು ಒಯ್ದಿದ್ದ ಬಾಟಲ್ ನೀರು ಹಾಗೂ ಪಾರ್ಲೆ ಜಿ ಬಿಸ್ಕತ್‌ಗಳನ್ನು ಮಾತ್ರ ತಿನ್ನುತ್ತಿದ್ದ ಆರ್ಯನ್ ಖಾನ್‌ ಜೈಲಿನ ಊಟ ನಿರಾಕರಿಸಿದ್ದಾರೆ.

49

ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್‌ಗೆ ಇತ್ತೀಚೆಗಷ್ಟೇ 4500 ಸಾವಿರದ ಮನಿ ಆರ್ಡರ್ ಸಿಕ್ಕಿದೆ. ಜೈಲಿನಲ್ಲಿರುವ ವ್ಯಕ್ತಿಗೆ ಹೊರಗಿನಿಂದ ಕಳುಹಿಸಬಹುದಾದ ಗರಿಷ್ಠ ಮೊತ್ತವಿದು.

59

ಈ ತಿಂಗಳ ಆರಂಭದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕ್ರೂಸ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿದೆ. ಆತನನ್ನು ಬಂಧಿಸಿ ವಾರಗಳು ಕಳೆದಿವೆ. ಅದರೆ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದ ನಂತರ, ಆರ್ಯನ್ ಖಾನ್ ಪ್ರಕರಣವನ್ನು ಅಕ್ಟೋಬರ್ 14 ಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಜಾಮೀನು ಆದೇಶವನ್ನು ಅಕ್ಟೋಬರ್ 20 ರವರೆಗೆ ಕಾಯ್ದಿರಿಸಲಾಗಿದೆ. ಅಲ್ಲಿಯವರೆಗೆ ಆರ್ಯನ್ ಆರ್ಥರ್ ರೋಡ್ ಜೈಲಿನಲ್ಲಿರುತ್ತಾನೆ.

69

23 ವರ್ಷದ ಆರ್ಯನ್ ಖಾನ್‌ಗೆ ಜೈಲಿನ ಅಧಿಕಾರಿಗಳು ಹೊರಗಿನಿಂದ ಆಹಾರವನ್ನು ಅನುಮತಿಸಿಲ್ಲ.  ಆರ್ಥರ್ ರೋಡ್ ಜೈಲಿನ ಕ್ಯಾಂಟೀನ್ ಮೆನುವಿನಲ್ಲಿ ಬ್ರೆಡ್, ಭೇಲ್, ಪಣ್ಯಾಚಿ ಬಟ್ಲಿ, ವಡಪಾವ್, ಭಜಿ ಪಾವ್, ನಮಕೀನ್, ಸಮೋಸಾ, ಚಿಕನ್ ಥಾಲಿ, ಎಗ್ ಥಾಲಿ, ಮಿನರಲ್ ವಾಟರ್ ಮತ್ತು ಜ್ಯೂಸ್ ಒಳಗೊಂಡಿದೆ.

79

ಜೈಲು ಅಧೀಕ್ಷಕ ನಿತಿನ್ ವೇಚಲ್ ಅವರು ಜೈಲಿನೊಳಗೆ ಆರ್ಯನ್ ವೆಚ್ಚಗಳಿಗಾಗಿ 4500 ಮನಿ ಆರ್ಡರ್ ಸ್ವೀಕರಿಸಿದ್ದಾರೆ. ಆರ್ಥರ್ ರೋಡ್ ಜೈಲಿನಲ್ಲಿರುವ ಬ್ಯಾರಕ್‌ಗೆ ಸ್ಥಳಾಂತರಿಸಿದ ನಂತರ ಅವರನ್ನು ಅಂಡರ್‌ಟ್ರೀಲ್ ಸಂಖ್ಯೆ N956 ಎಂದು ಗುರುತಿಸಲಾಗುತ್ತಿದೆ.

89

ಆರ್ಯನ್‌ಗೆ ತನ್ನ ಕುಟುಂಬದೊಂದಿಗೆ 10 ನಿಮಿಷಗಳ ವೀಡಿಯೋ ಕರೆಯನ್ನು ಸಹ ಅನುಮತಿಸಲಾಗಿದೆ. ಕೋವಿಡ್‌ನಿಂದಾಗಿ ವಾರದಲ್ಲಿ ಎರಡು ಬಾರಿ ಕೈದಿಗಳು ತಮ್ಮ ಕುಟುಂಬದೊಂದಿಗೆ ವೀಡಿಯೊ ಕರೆಯನ್ನು ಅನುಮತಿಸಬಹುದೆಂದು ಹೇಳಿದ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ ಈ ಕಾಲ್ ಅನುಮತಿಸಲಾಗಿದೆ. ಆರ್ಯನ್ ಒಮ್ಮೆ ಮಾತ್ರ ಈ ಆಯ್ಕೆಯನ್ನು ಬಳಸಿದ್ದಾರೆ.

99

ಆರ್ಯನ್ ಖಾನ್ ಕನಿಷ್ಠ ಅಕ್ಟೋಬರ್ 20 ರವರೆಗೆ ಜೈಲಿನಲ್ಲಿ ಮುಂದುವರಿಯಲಿದ್ದಾರೆ. ಸೂಪರ್ ಸ್ಟಾರ್ ಪುತ್ರನ ಜಾಮೀನು ವಿಚಾರಣೆಯು ವಿಶೇಷ NDPS ನ್ಯಾಯಾಲಯದಲ್ಲಿ ಅಕ್ಟೋಬರ್ 13 ಮತ್ತು 14 ರಂದು ನಡೆಯಿತು. ನ್ಯಾಯಾಲಯವು ತನ್ನ ಆದೇಶವನ್ನು ಅಕ್ಟೋಬರ್ 20 ಕ್ಕೆ ಕಾಯ್ದಿರಿಸಿದೆ. ಆರ್ಯನ್ ಮತ್ತು ಇತರ ಆರೋಪಿಗಳನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿದೆ.

click me!

Recommended Stories