ವೈದ್ಯರಿಂದ ಲೈಂಗಿಕ ಕಿರುಕುಳ: ಅಮ್ಮನಲ್ಲಿ ಹೇಳದೆ ಅಳುತ್ತಿದ್ದರು ಈ ನಟಿ

Published : Oct 19, 2021, 01:42 PM ISTUpdated : Oct 19, 2021, 02:07 PM IST

ಪ್ರತಿಬಾರಿ ವೈದ್ಯರ ಬಳಿ ಹೋದಾಗ ಲೈಂಗಿಕ ಕಿರುಕುಳ ಅಮ್ಮನಲ್ಲಿ ಹೇಳದೆ ಒಬ್ಬರೇ ಅತ್ತಿದ್ದರು ಈ ನಟಿ

PREV
17
ವೈದ್ಯರಿಂದ ಲೈಂಗಿಕ ಕಿರುಕುಳ: ಅಮ್ಮನಲ್ಲಿ ಹೇಳದೆ ಅಳುತ್ತಿದ್ದರು ಈ ನಟಿ

ಚಿಕ್ಕ ಹುಡುಗಿಯಾಗಿದ್ದಾಗ ಕಿರುಕುಳಕ್ಕೊಳಗಾದ ನಟಿ ನೀನಾ ಗುಪ್ತಾ ಅವರು ತಮ್ಮ ಕೆಟ್ಟ ಅನುಭವಗಳನ್ನು ಶೇರ್ ಮಾಡಿದ್ದಾರೆ. ಆಕೆಯ ಆತ್ಮಚರಿತ್ರೆಯ ಒಂದು ಆಯ್ದ ಭಾಗದಲ್ಲಿ ನಟಿ ವಿವರಿಸಿದ ಅನುಭವವು ವೈರಲ್ ಆಗುತ್ತಿದೆ.

27

ಜೂನ್ ನಲ್ಲಿ ಬಿಡುಗಡೆಯಾದ ಸಚ್ ಕಹುನ್ ತೋ ಎಂಬ ಪುಸ್ತಕವದು. 62 ವರ್ಷದ ನಟಿ ಗುಪ್ತಾ ವೈದ್ಯರು ಮತ್ತು ಟೈಲರ್ ನಿಂದ ಕಿರುಕುಳಕ್ಕೊಳಗಾದ ಅನುಭವನ್ನು ಶೇರ್ ಮಾಡಿದ್ದಾರೆ. ಆ ಅನುಭವದಿಂದ ಎಷ್ಟು ಹೆದರಿದ್ದರು ಎಂದು ಅವರು ಹೇಳಿದ್ದಾರೆ.

37

ಅದೊಂದು ಸಾಮಾನ್ಯ ಅನುಭವವಾಗಿತ್ತು, ನೀನಾ ಗುಪ್ತಾ ಅದರ ಬಗ್ಗೆ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ಆಕೆಯಂತಹ ಯುವತಿಯರು ತಮಗಾದ ಕಿರುಕುಳ ಬಹಿರಂಗಪಡಿಸದಿರಲು ನಿರ್ಧರಿಸಿದ್ದರು. ಅದಕ್ಕೆ ಕಾರಣವನ್ನೂ ನಟಿ ತಿಳಿಸದ್ದಾರೆ.

47

ಒಮ್ಮೆ ನಾನು ಕಣ್ಣಿನ ನೋವಿಗೆ ಚಿಕಿತ್ಸೆಗೆ ವೈದ್ಯರನ್ನು ಭೇಟಿ ಮಾಡಿದೆ. ನನ್ನ ಜೊತೆಗಿದ್ದ ನನ್ನ ಸಹೋದರನನ್ನು ವೈಟಿಂಗ್ ರೂಮ್‌ನಲ್ಲಿ ಕುಳಿತುಕೊಳ್ಳುವಂತೆ ಕೇಳಲಾಯಿತು. ವೈದ್ಯರು ನನ್ನ ಕಣ್ಣನ್ನು ಪರೀಕ್ಷಿಸಲು ಆರಂಭಿಸಿದರು.

57

ಕಣ್ಣಿನ ಜೊತೆ ಲಿಂಕ್ ಆದ ಇತರ ಪ್ರದೇಶಗಳನ್ನು ಪರೀಕ್ಷಿಸಲು ಕೆಳಗೆ ಹೋದರು. ಆದರೆ ಅದು ನನ್ನ ಕಣ್ಣಿಗೆ ಸಂಬಂಧಿಸಿರಲಿಲ್ಲ. ಹಾಗೆ ಆದಾಗ ನನಗೆ ತುಂಬಾ ಭಯವಾಯಿತು ಎಂದಿದ್ದಾರೆ ನೀನಾ.

67

ಮನೆಗೆ ಹೋಗುವವರೆಗೂ ಅಸಹ್ಯವಾಯಿತು. ಇದರ ಬಗ್ಗೆ ನಾನು ತುಂಬಾ ಹೆದರುತ್ತಿದ್ದೆ. ಹೇಳಿದರೆ ನನ್ನದೇ ತಪ್ಪು ಎನ್ನುತ್ತಿದ್ದರು. ಬಹುಶಃ ಅವನನ್ನು ಪ್ರಚೋದಿಸಲು ನಾನು ಏನನ್ನಾದರೂ ಹೇಳಿದ್ದೇನೆ ಅಥವಾ ಮಾಡಿರಬಹುದು ಎನ್ನಬಹುದು. ಇದು ನನಗೆ ಹಲವು ಸಲ ಆದ ಅನುಭವ ಎಂದಿದ್ದಾರೆ.

77

ತನ್ನ ಅಳತೆಗಳನ್ನು ತೆಗೆದುಕೊಳ್ಳುವಾಗ ಒಬ್ಬ ಟೈಲರ್ ಒಮ್ಮೆ ತುಂಬಾ ಸುಂದರ ಎಂದು ಕೆಟ್ಟದಾಗಿ ವರ್ತಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಆದರೆ ಆ ವಿಚಾರವನ್ನೂ ನಟಿ ಮುಚ್ಚಿಡುತ್ತಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories